ಸಪ್ತಸಾಗರ ವಾರ್ತೆ, ವಿಜಯಪುರ, ಜೂ. 5:
ಕರ್ನಾಟಕ ಸಾಹಿತ್ಯ ಅಕಾಡಮಿಯ ಮಹಿಳಾ ಮುನ್ನಡೆಯ ಪುಸ್ತಕಗಳಲ್ಲಿ ವಿಜಯಪುರದ ಸಾಹಿತಿ ಮೋಹನ ಕಟ್ಟಿಮನಿಯವರು ರಚಿಸಿದ ಹೆಸರಾಂತ ರಂಗಭೂಮಿ ಮತ್ತು ಸಿನಿಮಾ ಅಭಿನೆತ್ರಿ ‘ಗೋಹಾರ್ ಬಾಯಿ ಕರ್ನಾಟಕಿ ‘ ಅವರ ಪುಸ್ತಕವನ್ನು 05-06-2026 ರಂದು ಬೆಂಗಳೂರಿನ ನಯನಸಭಾಂಗಣದಲ್ಲಿ ಬಿಡುಗಡೆ ಮಾಡಲಾಯಿತು.
ರಾಷ್ಟ್ರದ ರಂಗಭೂಮಿ ಇತಿಹಾಸದಲ್ಲಿ ದಂತಕತೆಯಾದ ‘ ಗೋಹಾರ್ ಬಾಯಿ ‘ ದುರಂತ ನಾಯಕಿ ರಂಗಭೂಮಿಯ ಮೇಲೆ ಲಕ್ಷಾಂತರ ಜನರ ಹೃದಯದಲ್ಲಿ ಉಳಿದ ಈ ಕಲಾವಿದೆ ಇತಿಹಾಸ ನಿರ್ಮಿಸಿದ್ದರೂ ಇತಿಹಾಸದ ಪುಟಗಳಲ್ಲಿ ಇವರು ಉಳಿದಿರಲಿಲ್ಲ ಆ ಕಾರ್ಯವನ್ನು ಕರ್ನಾಟಕ ಸಾಹಿತ್ಯ ಅಕಾಡಮಿ ಮಾಡಿ ಗೌರವಿಸಿದೆ. ಈ ಕಾರ್ಯಕ್ಕೆ ಮೋಹನ ಕಟ್ಟಿಮನಿ ಲೇಖಕರಾದರೂ ಇದರ ಹಿಂದಿನ ಪ್ರೇರಣೆ ಅಕಾಡಮಿಯ ಅಧ್ಯಕ್ಷರಾದ ಎಲ್. ಎನ್. ಮುಕುಂದರಾಜ್ ಖ್ಯಾತ ಹೋರಾಟಗಾರ್ತಿ ಡಾ. ಮೀನಾಕ್ಷಿಬಾಳಿ, ಸಾಹಿತ್ಯ ಅಕಾಡಮಿಯ ಸದಸ್ಯರಾದ ಮಹಾದೇವ ಬಸರಕೋಡ ಅವರಾಗಿದ್ದಾರೆ. ಒಟ್ಟಿನಲ್ಲಿ ಮರೆತುಹೋದ ಅಪ್ಪಟ ರಂಗಭೂಮಿಯ ಕಲಾವಿದೆಯನ್ನು ಸಾಹಿತ್ತಿಕವಾಗಿ ಜೀವಂತವಾಗಿರಿಸಿದ ಕರ್ನಾಟಕ ಸಾಹಿತ್ಯ ಅಕಾಡಮಿಗೆ ಅಖಂಡ ವಿಜಯಪುರ ಜನತೆ ಧನ್ಯವಾದಗಳನ್ನು ಸಲ್ಲಿಸಿದೆ.
ವಿಜಯಪುರದ ರಂಗಭೂಮಿ ಮತ್ತು ಸಿನಿಮಾ ಕಲಾವಿದೆ ‘ಗೋಹಾರ್ ಬಾಯಿ ಕರ್ನಾಟಕಿ ‘ ಪುಸ್ತಕ ಬೆಂಗಳೂರಲ್ಲಿ ಬಿಡುಗಡೆ


