ಸಪ್ತಸಾಗರ ವಾರ್ತೆ, ವಿಜಯಪುರ, ಡಿ. 14 : ಡಿ.15ರಿಂದ ಸರಕಾರಿ ವೈದ್ಯಕೀಯ ಕಾಲೇಜ್ ಸ್ಥಾಪನೆಗೆ ಆಗ್ರಹಿಸಿ ಅಹೋರಾತ್ರಿ ಧರಣಿ ಸತ್ಯಾಗ್ರಹ ಕೈಗೊಳ್ಳಲು ಹೋರಾಟಗಾರರು ನಿರ್ಧರಿಸಿದ್ದಾರೆ.
ವಿಜಯಪುರ ನಗರದ ಡಾ. ಬಿಆರ್ ಅಂಬೇಡ್ಕರ್ ವೃತ್ತದಲ್ಲಿ ಜಿಲ್ಲೆಗೆ ಸರ್ಕಾರಿ ವೇದಿಕೆಯ ಮಹಾವಿದ್ಯಾಲಯ ಸ್ಥಾಪನೆಗಾಗಿ ಆಗ್ರಹಿಸಿ ಸರ್ಕಾರದ ಉದ್ದೇಶಿತ ಖಾಸಗಿಕರಣವನ್ನು ವಿರೋಧಿಸಿ ನಡೆಯುತ್ತಿರುವ ಧರಣಿ ಭಾನುವಾರ 88ನೇ ದಿನ ಪೂರೈಸಿದ್ದು, ಸರ್ಕಾರ ಜಿಲ್ಲೆಯ ಹೋರಾಟಗಾರರು ಹಾಗೂ ಜನರ ಬೇಡಿಕೆಗೆ ಸ್ಪಂದಿಸದ ಹಿನ್ನೆಲೆಯಲ್ಲಿ ಸರಕಾರಿ ವೈದ್ಯಕೀಯ ಕಾಲೇಜು ಸ್ಥಾಪನೆಗಾಗಿ ಹೋರಾಟ ಸಮಿತಿ ಪ್ರಮುಖರು ಇಂದು ಸತ್ಯಾಗ್ರಹ ವೇದಿಕೆಯಲ್ಲಿ ಸಭೆ ನಡೆಸಿ ಡಿ. ೧೫ ರಿಂದ ಅಹೋರಾತ್ರಿ ಧರಣಿ ಪ್ರಾರಂಭಿಸಲು ನಿರ್ಣಯ ಕೈಗೊಂಡಿದ್ದಾರೆ .
ಈ ಸಂದರ್ಭದಲ್ಲಿ ಹೋರಾಟಗಾರರಾದ ಲಲಿತಾ ಬಿಜ್ಜರಗಿ, ಅಕ್ರಂ ಮಾಶಾಳಕರ, ಗಿರೀಶ ಕಲಘಟಗಿ, ಲಕ್ಷ್ಮಣ ಕಂಬಾಗಿ, ಸಿದ್ದರಾಮಯ್ಯ ಹಿರೇಮಠ, ಶ್ರೀಕಾಂತ ಕೊಂಡಗೂಳಿ, ಬಾಬುರಾವ ಬೀರಕಬ್ಬಿ, ಸಿದ್ದನಗೌಡ ಪಾಟೀಲ, ಬಸವರಾಜ ರೆಡ್ಡಿ, ಪ್ರಕಾಶ ಸಬರದ, ಶ್ರೀನಾಥ ಪೂಜಾರಿ, ಬಸಯ್ಯ ಮಠ, ಮಹಾದೇವಿ ಧರ್ಮಶೆಟ್ಟಿ, ಅರುಣಗೌಡ ತೇರದಾಳ, ಎಂ.ಎಸ್. ಬಗಲಿ, ರೇಣುಕಾ ಧನಶೆಟ್ಟಿ, ಲಾಯಪ್ಪ ಇಂಗಳೆ ಸೇರಿದಂತೆ ಹಲವರು ಉಪಸ್ಥಿತರಿದ್ದರು.
ಸರಕಾರಿ ವೈದ್ಯಕೀಯ ಕಾಲೇಜು ಹೋರಾಟ: ಡಿ. 15 ರಿಂದ ಅಹೋರಾತ್ರಿ ಧರಣಿ


