ರಾಜ್ಯಪಾಲರು ಬಿಜೆಪಿ ಎಜೆಂಟ್: ಸಚಿವ ಎಂ. ಬಿ. ಪಾಟೀಲ ಆರೋಪ

ಸಪ್ತಸಾಗರ ವಾರ್ತೆ, ವಿಜಯಪುರ, ಜ. 25 :
ಕರ್ನಾಟಕ ರಾಜ್ಯಪಾಲರು ಕೇಂದ್ರ ಸರ್ಕಾರದ ಎಜೆಂಟ್ ರಂತೆ ವರ್ತಿಸುತ್ತಿದ್ದಾರೆ ಎಂದು ಜಿಲ್ಲಾ ಉಸ್ತುವಾರಿ ಸಚಿವ ಡಾ. ಎಂ.ಬಿ. ಪಾಟೀಲ ಆರೋಪಿಸಿದ್ದಾರೆ.
ಭಾನುವಾರ ಸುದ್ದಿಗಾರರ ಜೊತೆಗೆ ಮಾತನಾಡಿದ ಅವರು, ರಾಜ್ಯಪಾಲರು ಸರ್ಕಾರದ ಧ್ವನಿ, ಸರ್ಕಾರ ಏನು ಕೊಡುತ್ತದೆ. ಅದನ್ನು ಓದುತ್ತಾರೆ. ಇದೇ ರಾಜ್ಯಪಾಲರು ಹಿಂದೆ ಓದಿಲ್ಲವಾ? ಎಂದು ಸಚಿವ ಎಂ. ಬಿ. ಪಾಟೀಲ ಅವರು ರಾಜ್ಯಪಾಲರ ನಡೆಯನ್ನು ಪ್ರಶ್ನೆ ಮಾಡಿದ್ದಾರೆ.
ವಿಧಾನಸೌಧದಲ್ಲಿ ನಡೆಯುತ್ತಿರುವ ವಿಶೇಷ ಸದನ ನಡೆಯುವ ವೇಳೆ ಕೇಂದ್ರ ಸರ್ಕಾರದ ವಿರುದ್ದ ಟೀಕೆ ಇದೆ. ಹಾಗಾಗಿ ನಾನು ಭಾಷಣ ಮಾಡಲ್ಲಾ ಎಂದು ಕೆಲವೇ ಮಾತು ಹೇಳಿ ಸದನದಲ್ಲಿ ರಾಜ್ಯಪಾಲರು ಭಾಷಣ ಮಾಡಿಲ್ಲ. ಮಹಾತ್ಮಾ ಗಾಂಧಿ ರಾಷ್ಟ್ರೀಯ ಉದ್ಯೋಗ ಖಾತ್ರಿ ಯೋಜನೆಯ ಕುರಿತು ಈಗಾಗಲೇ ಮಾಹಿತಿ ಕೊಟ್ಟಿದ್ದೇವೆ‌. ಸ್ಥಳೀಯವಾಗಿ ಉದ್ಯೋಗ ಸಿಗಬೇಕು ಎಂಬುದು ಪ್ರತಿಯೊಬ್ಬರ ಹಕ್ಕು ಆಗಿದೆ. ಆ ಹಕ್ಕನ್ನು ಕೇಂದ್ರದವರು ಕಸಿದುಕೊಂಡಿದ್ದಾರೆ. ಅದನ್ನು ಓದಿ‌ ಹೇಳಬೇಕು. ಅದನ್ನು ಬಿಟ್ಟು ಭಾಷಣ ಮಾಡಲ್ಲ ಎಂದು ಹೇಳುವ ಮೂಲಕ ರಾಜ್ಯಪಾಲರು ಕೇಂದ್ರ ಸರ್ಕಾರದ ಏಜೆಂಟ್ ಎಂಬಂತೆ ನಡೆದುಕೊಂಡಿದ್ದಾರೆ ಎಂದರು.
ಅವರು ಓದಲ್ಲ ಎಂದರೆ ಅವರು ಕೇಂದ್ರ ಸರ್ಕಾರದ ಎಜೆಂಟ್ ಎಂಬುದು ಕಾಣುತ್ತದೆ. ಅವರು ಒಂದು ಪಕ್ಷದ ಎಜೆಂಟ್ ಆಗಿ ನಡೆದುಕೊಂಡಿದ್ದಾರೆ. ಅಲ್ಲಿ ಅಂತಹ ವಾತಾವರಣ ಸೃಷ್ಟಿ ಮಾಡಲು ಕಾರಣ ರಾಜ್ಯಪಾಲರು ಎಂದು ಕಿಡಿ ಕಾರಿದ್ದಾರೆ.
ಈಗಾಗಲೇ ಒಮ್ಮೆ ಬಿಜೆಪಿ ಎಜೆಂಟ್ ಎಂಬುದು ಸಾಬೀತು ಮಾಡಿ ಮತ್ತೊಮ್ಮೆ ಅದನ್ನು ಪ್ರೂವ್ ಮಾಡಲು ಹೊರಟಿದ್ದಾರೆ. ದೇಶದಲ್ಲಿ ಎಲ್ಲೆಲ್ಲಿ ಕಾಂಗ್ರೆಸ್ ಸರ್ಕಾರ ಇದೆ ಅಲ್ಲಿ ಹೀಗೆ ಮಾಡಲಾಗುತ್ತಿದೆ. ರಾಜ್ಯಪಾಲರು ಬಿಜೆಪಿ ಎಜೆಂಟ್ ಎಂಬಂತೆ ಕೆಲಸ ಮಾಡುತ್ತಾರೆಂದು ಆರೋಪಿಸಿದರು. ನಾವು ಕೇಂದ್ರ ಸರ್ಕಾರದ ವಿರೋಧ ವ್ಯಕ್ತ ಪಡಿಸಬಾರದು. ನಾವು ಕೂಡಾ ಅವರ ತರ ಕಾಂಗ್ರೆಸ್ ಸರ್ಕಾರ ಬಿಜೆಪಿಯ ಎಜೆಂಟ್ ಆಗಿರಬೇಕು ಎಂಬುದು ಅವರ ಉದ್ದೇಶ ಎಂದು ಸಚಿವ ಪಾಟೀಲ ಅವರು ತಿಳಿಸಿದ್ದಾರೆ.

Share this