ಸಪ್ತಸಾಗರ ವಾರ್ತೆ,ವಿಜಯಪುರ, ಆ. 20:
ಕಡಿಮೆ ಅವಧಿಯಲ್ಲಿ ಜೈ ಸಂತೋಷಿ ಮಾತಾ ದೇವಸ್ಥಾನವನ್ನು ಅತ್ಯಂತ ಸುಂದರವಾಗಿ ಅಭಿವೃದ್ಧಿಪಡಿಸಿರುವುದು ಸಂತಸ ತಂದಿದೆ ಎಂದು ರಾಮನಗೌಡ ಪಾಟೀಲ ಯತ್ನಾಳ ಹೇಳಿದರು.
ಜೈ ಸಂತೋಷಿ ಮಾತಾ ದೇವಸ್ಥಾನದಲ್ಲಿ ಹಮ್ಮಿಕೊಂಡಿದ್ದ ಜಾತ್ರಾ ಮಹೋತ್ಸವವನ್ನು ಉದ್ಘಾಟಿಸಿ ಮಾತನಾಡಿದ ಅವರು, ತಮ್ಮ ತಂದೆ ಬಸನಗೌಡ ಪಾಟೀಲ ಯತ್ನಾಳ ಅವರು ದೇವಸ್ಥಾನದ ಅಭಿವೃದ್ಧಿಗೆ ಅನುದಾನ ನೀಡಿದ್ದು, ಅದರ ಸದುಪಯೋಗ ಪಡೆದು ದೇವಾಲಯವನ್ನು ಉತ್ತಮವಾಗಿ ಅಭಿವೃದ್ಧಿಪಡಿಸಲಾಗಿದೆ ಎಂದರು.
ಕಾರ್ಯಕ್ರಮದಲ್ಲಿ ಪ್ರಾಸ್ತಾವಿಕವಾಗಿ ಮಾತನಾಡಿದ ಸಂತೋಷಿ ಮಾತಾ ದೇವಸ್ಥಾನ ಸಮಿತಿ ಅಧ್ಯಕ್ಷ ಕರಿಬಸಪ್ಪ ಅರಿಕೇರಿ, ದೇವಾಲಯದ ಅಭಿವೃದ್ಧಿ ಕಾರ್ಯಗಳ ಕುರಿತು ವಿವರಿಸಿದರು.
ಮಹಾನಗರ ಪಾಲಿಕೆ ಸದಸ್ಯ ಹಾಗೂ ಜಾತ್ರಾ ಉತ್ಸವ ಸಮಿತಿ ಅಧ್ಯಕ್ಷ ಪ್ರೇಮಾನಂದ ಬಿರಾದಾರ ಮಾತನಾಡಿ, ಸಂತೋಷಿ ಮಾತಾ ದೇವಿಯ ಆಶೀರ್ವಾದದಿಂದ ತಾವು ಮಹಾನಗರ ಪಾಲಿಕೆ ಸದಸ್ಯರಾಗಿದ್ದಾಗಿ ತಿಳಿಸಿದರು. ನೂತನ ಸಮಿತಿ ಅಸ್ತಿತ್ವಕ್ಕೆ ಬಂದ ಬಳಿಕ ದೇವಸ್ಥಾನದಲ್ಲಿ ಸಾಕಷ್ಟು ಅಭಿವೃದ್ಧಿ ಕಾರ್ಯಗಳನ್ನು ಕೈಗೊಳ್ಳಲಾಗಿದೆ. ಮೊದಲ ಮಹಡಿಯ ಫ್ಲೋರಿಂಗ್ಗೆ ಗ್ರಾನೈಟ್ ಅಳವಡಿಸಲು ದಾನಿಗಳು ಮುಂದೆ ಬಂದಿದ್ದಾರೆ. ಅಲ್ಲದೇ ದೇವಿಗೆ ಬೆಳ್ಳಿಯ ಪ್ರಭಾವಳಿ ಮಾಡಿಸಲು ಸಮಿತಿ ನಿರ್ಧರಿಸಿದ್ದು, ಭಕ್ತರು ಬೆಳ್ಳಿ ಅಥವಾ ಹಣದ ರೂಪದಲ್ಲಿ ದೇಣಿಗೆ ನೀಡುವಂತೆ ಮನವಿ ಮಾಡಿದರು.
ತಾಳಿಕೋಟಿ ತಹಶೀಲ್ದಾರ್ ಮಲ್ಲಿಕಾರ್ಜುನ ಅರಿಕೇರಿ ಮಾತನಾಡಿ, ದೇವಾಲಯವು ಸಾಕಷ್ಟು ಅಭಿವೃದ್ಧಿ ಕಂಡಿದ್ದು, ಇದಕ್ಕೆ ಸಹಕರಿಸಿದ ದಾನಿಗಳ ಕಾರ್ಯವನ್ನು ಶ್ಲಾಘಿಸಿದರು.
ಮಹಾನಗರ ಪಾಲಿಕೆ ಮೇಯರ್ ಮಡಿವಾಳಪ್ಪ ಕರಡಿ ಮಾತನಾಡಿದರು. ಕಾರ್ಯಕ್ರಮದಲ್ಲಿ ಮಹಾನಗರ ಪಾಲಿಕೆ ಸದಸ್ಯ ಗಿರೀಶ ಬಿರಾದಾರ, ಗುತ್ತಿಗೆದಾರ ಮಹಾದೇವ ಗಚ್ಚಿನಮಠ, ದೇವಸ್ಥಾನದ ಅರ್ಚಕ ಮಲ್ಲಯ್ಯ ಮಠ ಸೇರಿದಂತೆ ಹಲವರು ಉಪಸ್ಥಿತರಿದ್ದರು.
ಚಂದ್ರು ಚೌಧರಿ ಅತಿಥಿಗಳನ್ನು ಸ್ವಾಗತಿಸಿದರು. ಮಲ್ಲಿಕಾರ್ಜುನ ಕೆಂಗನಾಳ ಕಾರ್ಯಕ್ರಮ ನಿರೂಪಿಸಿ ವಂದಿಸಿದರು.
ಸಿದ್ದು ಕುಸುರ್, ಪ್ರಮೋದ ಬಡಿಗೇರ, ಮಾಂತೇಶ ಅಂಗಡಿಮಠ, ಸಂತೋಷ ತೆಲಸಂಗ, ಪ್ರಕಾಶ ಕಟ್ಟಿಮನಿ, ನಾನಾಗೌಡ ಬಿರಾದಾರ, ಗೋಪಿ ಸೂರ್ಯವಂಶಿ, ಮಾವಿನಹಳ್ಳಿ, ದಾನೇಶ ಚಲವಾದಿ, ಸುನಿಲ್ ಮುಂಡಾಸ ಸೇರಿದಂತೆ ಭಕ್ತರು ಹಾಗೂ ಸಮಿತಿ ಸದಸ್ಯರು ಭಾಗವಹಿಸಿದ್ದರು.
ಜೈ ಸಂತೋಷಿ ಮಾತಾ ಜಾತ್ರೆಗೆ ಅದ್ದೂರಿ ಚಾಲನೆ


