ಎಲ್ಲರಿಗಿಂತಲೂ ಗುರು ಪರಮ ಶ್ರೇಷ್ಠ: ಕಡ್ಲಿಮಟ್ಟಿ


ಸಪ್ತಸಾಗರ ವಾರ್ತೆ,ವಿಜಯಪುರ, ಜು. 11: ಹರ ಮುನಿದರೆ ಕಾಯುವ ಗುರು ಎಲ್ಲರಿಗಿಂತ ಪರಮ ಶ್ರೇಷ್ಠನಾಗಿದ್ದಾನೆ ಎಂದು ಬಿ.ಎಲ್.ಡಿ.ಇ ಸಂಸ್ಥೆಯ ಎ.ವಿ.ಎಸ್ ಆಯುರ್ವೇದ ಆಸ್ಪತ್ರೆಯ ಆಡಳಿತಾಧಿಕಾರಿ ಡಾ. ಸಂಜಯ ಕಡ್ಲಿಮಟ್ಟಿ ಹೇಳಿದ್ದಾರೆ.
ಗುರುವಾರ ನಗರದ ಬಿ.ಎಲ್.ಡಿ.ಇ ಸಂಸ್ಥೆಯ ಶ್ರೀ ಬಿ. ಎಂ. ಪಾಟೀಲ ಪಬ್ಲಿಕ್(CBSE) ಶಾಲೆಯಲ್ಲಿ ನಡೆದ ಗುರು ಪೂರ್ಣಮೆ ಕಾರ್ಯಕ್ರಮದಲ್ಲಿ ಅವರು ಮಾತನಾಡಿದರು.
ಜಗತ್ತಿನಲ್ಲಿ ತಾಯಿ ಮತ್ತು ಗುರು ಮಾತ್ರ ನಿಷ್ಕಲ್ಮಶವಾದ ಪ್ರೀತಿ ಕೊಡಬಲ್ಲರು. ತಾಯಿ ಮತ್ತು ಗುರುವಿನ ಋಣದಿಂದ ಹೊರಬರಲು ಸಾಧ್ಯವಿಲ್ಲ. ಗುರುವಾದವರು. ನಿಷ್ಪಕ್ಷಪಾತವಾಗಿರಬೇಕು. ಧನಾತ್ಮಕ ಮನೋಭಾವ ಹೊಂದಿರಬೇಕು. ವಿದ್ಯಾರ್ಥಿಗಳ ಸರ್ವಾಂಗೀಣ ಅಭಿವೃದ್ಧಿಗೆ ಶ್ರಮಮಿಸಬೇಕು. ಮಾತೃಋಣ, ಪಿತೃಋಣ, ಗುರು ಋಣ ಮುಖ್ಯವಾಗಿವೆ. ಅನ್ನದಾನ ಕ್ಷಣಿಕ ಸುಖ ನೀಡಿದರೆ ವಿದ್ಯಾದಾನ ಜೀವನಪೂರ್ತಿ ಶಕ್ತಿ ನೀಡುತ್ತದೆ. ಗುರುಗಳಾದವರಿಗೆ ದೇವರು ಒಂದು ಒಳ್ಳೆಯ ಅವಕಾಶ ನೀಡಿದ್ದು, ಅವರವರ ಸ್ಥಾನಮಾನಕ್ಕೆ ತಕ್ಕಂತೆ ಗುರುಗಳು ನಡೆಯಬೇಕು. ಅಹಂಕಾರ ಮತ್ತು ಅಂಧಕಾರವನ್ನು ತೊಲಗಿಸಬೇಕು ಎಂದು ಅವರು ಹೇಳಿದರು.
ಶಾಲೆ ಪ್ರಾಚಾರ್ಯ ಡಾ. ಶೈಜು ಕೆ. ಆರ್. ನಾಯರ ಮಾತನಾಡಿ, ಗುರುಪೂರ್ಣಿಮೆಯ ಮಹತ್ವವನ್ನು ವಿವರಿಸಿದರು.
ಈ ಸಂದರ್ಭದಲ್ಲಿ ಶಾಲೆ ಹಿರಿಯ ಕಾರ್ಯ ಸಂಯೋಜಕಿ ದೀಪಾ ಜಂಬೂರೆ, ಶಾಲೆಯ ಸಿಬ್ಬಂದಿ, ವಿದ್ಯಾರ್ಥಿಗಳು ಉಪಸ್ಥಿತರಿದ್ದರು.
ಶಾಲಾ ಸದನದ ಪದಾಧಿಕಾರಿಗಳಾದ ಅನುಪ್ರಿಯಾ ಕುಲಕರ್ಣಿ ಸ್ವಾಗತಿಸಿದರು. ಖುಷಿ ಬೆಹತಿ ವಂದಿಸಿದರು. ಸಾಂಸ್ಕೃತಿಕ ವಿಭಾಗದ ಮುಖ್ಯಸ್ಥೆ ಖುಷಿ ಬೆಹತಿಯ ವಂದಿಸಿದರು.

Share