ಮೂವರಿಗೆ ವಾರ್ಷಿಕ ಗೌರವ, ಮೂವರಿಗೆ ಯುವ ಪ್ರಶಸ್ತಿ
ಸಪ್ತಸಾಗರ ವಾರ್ತೆ,ವಿಜಯಪುರ, ಜು.16:
ಹಲಸಂಗಿ ಗೆಳೆಯರ ಪ್ರತಿಷ್ಠಾನದ 2022, 2023 ಹಾಗೂ 2024ನೇ ಸಾಲಿನ ವಾರ್ಷಿಕ ಗೌರವ ಮತ್ತು ಯುವ ಪ್ರಶಸ್ತಿಗಳನ್ನು ಪ್ರತಿಷ್ಠಾನದ ಅಧ್ಯಕ್ಷರೂ ಆಗಿರುವ ಜಿಲ್ಲಾಧಿಕಾರಿ ಡಾ. ಆನಂದ ಕೆ. ಪ್ರಕಟಿಸಿದ್ದಾರೆ.
ಜಿಲ್ಲಾಧಿಕಾರಿಗಳ ಅಧ್ಯಕ್ಷತೆಯಲ್ಲಿ ನಡೆದ ಪ್ರತಿಷ್ಠಾನದ ಸಭೆಯಲ್ಲಿ ಆಯ್ಕೆ ಸಮಿತಿಯ ಶಿಫಾರಸಿನ ಮೇರೆಗೆ ಅರ್ಹ ಸಾಹಿತಿಗಳು ಹಾಗೂ ಯುವ ಬರಹಗಾರರನ್ನು ಅಂತಿಮವಾಗಿ ಆಯ್ಕೆ ಮಾಡಲಾಗಿದೆ.
ಜಾನಪದ, ಸಮಗ್ರ ಸಾಹಿತ್ಯ ಹಾಗೂ ಸಂಶೋಧನೆ-ವಿಮರ್ಶೆ ಕ್ಷೇತ್ರಗಳಲ್ಲಿ ಗಣನೀಯ ಸೇವೆ ಸಲ್ಲಿಸಿದ ಸಾಹಿತಿಗಳಿಗೆ ವಾರ್ಷಿಕ ಗೌರವ ಪ್ರಶಸ್ತಿ ಹಾಗೂ ಅತ್ಯುತ್ತಮ ಕೃತಿಗಳನ್ನು ರಚಿಸಿದ ಯುವ ಬರಹಗಾರರಿಗೆ ಯುವ ಪ್ರಶಸ್ತಿ ನೀಡಲಾಗುತ್ತಿದೆ. ವಾರ್ಷಿಕ ಗೌರವ ಪ್ರಶಸ್ತಿಯು ₹50 ಸಾವಿರ ನಗದು ಹಾಗೂ ಯುವ ಪ್ರಶಸ್ತಿಯು ₹10 ಸಾವಿರ ನಗದು ಒಳಗೊಂಡಿದ್ದು, ಪ್ರಶಸ್ತಿ ಪುರಸ್ಕೃತರನ್ನು ಸನ್ಮಾನಿಸಲಾಗುವುದು ಎಂದು ಜಿಲ್ಲಾಧಿಕಾರಿಗಳು ತಿಳಿಸಿದ್ದಾರೆ.
ವಾರ್ಷಿಕ ಗೌರವ ಪ್ರಶಸ್ತಿ ಪುರಸ್ಕೃತರು:
*2022 (ಜಾನಪದ ಕ್ಷೇತ್ರ): ಡಾ. ಬಿ.ಎ. ವಿವೇಕ ರೈ (ದಕ್ಷಿಣ ಕನ್ನಡ)
*2023 (ಸಮಗ್ರ ಸಾಹಿತ್ಯ): ಪ್ರೊ. ಎಚ್.ಟಿ. ಪೋತೆ (ಕಲಬುರಗಿ)
*2024 (ಸಂಶೋಧನೆ ಮತ್ತು ವಿಮರ್ಶೆ): ಶ್ರೀಮತಿ ನೇಮಿಚಂದ್ರ (ಬೆಂಗಳೂರು)
ಯುವ ಪ್ರಶಸ್ತಿ ಪುರಸ್ಕೃತರು:
*2022: ಡಾ. ವಿನಯ ನಂದಿಹಾಳ (ವಿಜಯಪುರ)
*2023: ಡಾ. ಗೋವಿಂದರಾಜು ಕೆ.ಎಂ. (ತುಮಕೂರು)
*2024: ಶಶಿ ತರೀಕೆರೆ (ವಿಜಯನಗರ, ಬೆಂಗಳೂರು)
ಪ್ರಶಸ್ತಿ ಪ್ರದಾನ ಸಮಾರಂಭದ ದಿನಾಂಕವನ್ನು ಶೀಘ್ರದಲ್ಲೇ ಪ್ರಕಟಿಸಲಾಗುವುದು ಎಂದು ಜಿಲ್ಲಾಧಿಕಾರಿಗಳು ತಿಳಿಸಿದ್ದಾರೆ.


