ಸಪ್ತಸಾಗರ ವಾರ್ತೆ, ಇಂಡಿ, ಮೇ24: ತಾಲೂಕಿನ ಸಾಲೋಟಗಿ ಗ್ರಾಮದಲ್ಲಿ ಶನಿವಾರ ರಾತ್ರಿ ಸುರಿದ ಮಳೆಗಾಳಿಗೆ ಸುಮಾರು ನಾಲ್ಕು ಸಾವಿರಕ್ಕೂ ಅಧಿಕ ಬಾಳೆ ಗಿಡಗಳು ಸಂಪೂರ್ಣ ನೆಲಕ್ಕುರುಳಿ ಲಕ್ಷಾಂತರ ರೂ. ಹಾನಿಯಾಗಿದೆ.
ಗ್ರಾಮದ ರೈತ ಧರ್ಮರಾಯ ನರಳೆ ಅವರ 2055 ಬಾಳೆಗಿಡ ಹಾಗೂ ಧರೆಪ್ಪ ನರಳೆ ಅವರಿಗೆ ಸೇರಿದ 1950 ಬಾಳೆ ಗಿಡಗಳು ಮಳೆ ಹಾಗೂ ಗಾಳಿಗೆ ಸಂಪೂರ್ಣ ನೆಲಕ್ಕುರುಳಿ ಹಾಳಾಗಿವೆ. ಅಂದಾಜು 35ಲಕ್ಷದ ಫಸಲು ಹಾಳಾಗಿದೆ ಎಂದು ಅಂದಾಜಿಸಲಾಗಿದೆ.
ಜೆಡಿಎಸ್ ಮುಖಂಡ ಬಿ.ಡಿ. ಪಾಟೀಲ ಹಂಜಗಿ ಅವರು ಭೇಟಿ ನೀಡಿ ರೈತರಿಗೆ ಸಾಂತ್ವನ ಹೇಳಿ, ಸುದ್ದಿಗಾರರೊಂದಿಗೆ ಮಾತನಾಡಿ, ಕಷ್ಟ ಪಟ್ಟು ಬೆಳೆಸಿದ ಬಾಳೆ ಗಿಡಗಳು ಮಳೆ, ಗಾಳಿಗೆ ಸಂಪೂರ್ಣ ಹಾಳಾಗಿ ರೈತ ಕಂಡು ಕನಸುಗಳು ನುಚ್ಚು ನೂರಾಗಿವೆ. ಸಾಲ ಮಾಡಿ ಬೆಳೆಸಿದ ಬಾಳೆ ಗಿಡಗಳು ಕೇವಲ 15 ದಿನಗಳಲ್ಲಿ ಮಾರಾಟಕ್ಕೆ ಹೋಗುವ ಬಾಳೆ ಹಣ್ಣುಗಳು ಮಣ್ಣು ಪಾಲಾಗಿವೆ. ಇಂಥ ಸಂಕಷ್ಟದಲ್ಲಿರುವ ರೈತನಿಗೆ ಸರ್ಕಾರ ಬೆಂಬಲವಾಗಿ ನಿಲ್ಲಬೇಕು. ಕೂಡಲೆ ತೋಟಗಾರಿಕೆ ಇಲಾಖೆ ಹಾಗೂ ತಾಲೂಕಾ ಆಡಳಿತ ಇಂಡಿ ತಾಲೂಕಿನಲ್ಲಿ ಇಂತಹ ಹಲವಾರು ರೈತರ ಬೆಳೆ ಹಾನಿಗೆ ಪ್ರಕೃತಿ ವಿಕೋಪ ಪರಿಹಾರ ನಿಧಿಯಿಂದ ಸೂಕ್ತ ಪ್ರಕರಣವೆಂದು ದಾಖಲಿಸಿ ಸೂಕ್ತ ಪರಿಹಾರ ನೀಡಬೇಕು ಎಂದು ಸರ್ಕಾರಕ್ಕೆ ಆಗ್ರಹಿಸಿದರು.
ಮಳೆ, ಗಾಳಿಗೆ ಅಪಾರ ಬಾಳೆ ಗಿಡ ನಾಶ


