ಸಪ್ತಸಾಗರ ವಾರ್ತೆ, ವಿಜಯಪುರ, ಸೆ. 11:
ಮನೆ ಕಳ್ಳತನ ಪ್ರಕರಣಕ್ಕೆ ಸಂಬಂಧಿಸಿದಂತೆ ಮೂವರನ್ನು ಬಂಧಿಸಿದ ಪೊಲೀಸರು 65 ಗ್ರಾಂ ಚಿನ್ನಾಭರಣ ವಶಪಡಿಸಿಕೊಂಡಿದ್ದಾರೆ.
ಝಂಡಾ ಕಟ್ಟಾ ಜೆ ಎಂ ರೋಡ ಹಳಕೇರಿ ಗಲ್ಲಿ ನಿವಾಸಿ ಸಮೀರ ಇನಾಮದಾರ, ಶಾಪೇಠಿ ಅಪ್ಸರಾ ಟಾಕೀಸ್ ಹತ್ತಿರ ಸುಹಾಗ ಕಾಲನಿ ನಿವಾಸಿ ಹಸನಡೊಂಗ್ರಿ ಮುಲ್ಲಾ, ನಿಸ್ಸಾರ ಮಡ್ಡಿ ನಿವಾಸಿ
ಶಫೀಕ್ ಅಹ್ಮದ ಇನಾಮದಾರ ಬಂಧಿತ ಆರೋಪಿಗಳು.
ಆರೋಪಿತರು ಅನುಮಾನಾಸ್ಪದವಾಗಿ ತಿರುಗಾಡುವಾಗ ಹಿಡಿದು ಠಾಣೆಗೆ ಕರೆತಂದು ವಿಚಾರಣೆ ಮಾಡಲಾಗಿ ಒಟ್ಟು ಮೂರು ಜನರು ಸೇರಿಕೊಂಡು ಮನೆಕಳ್ಳತನ ಮಾಡಿದ ಬಗ್ಗೆ ಒಪ್ಪಿಕೊಂಡಿದ್ದಾರೆ. ಮೂವರನ್ನು ದಸ್ತಗೀರ ಮಾಡಿ ನ್ಯಾಯಾಂಗ ಬಂಧನಕ್ಕೆ ಒಪ್ಪಿಸಲಾಗಿದೆ.
ಆರೋಪಿತರ ಕಡೆಯಿಂದ ಒಟ್ಟು 65 ಗ್ರಾಂ ತೂಕದ ಬಂಗಾರದ ಆಭರಣಗಳನ್ನು ಮತ್ತು ಕೃತ್ಯಕ್ಕೆ ಬಳಸಿದ ಒಂದು ಬಜಾಜ ಕಂಪನಿಯ ಅಟೋ ರಿಕ್ಷಾ ಹಾಗೂ ಒಂದು ಕಬ್ಬಿಣದ ರಾಡ ಹೀಗೆ ಒಟ್ಟು 8,37,000/- ರೂ ಮೌಲ್ಯವನ್ನು ಆರೋಪಿತರಿಂದ ಜಪ್ತ ಮಾಡಲಾಗಿದೆ.
ಈ ಪ್ರಕರಣದ ಆರೋಪಿತರನ್ನು ಪತ್ತೆ ಹಚ್ಚಿ ಬಂಧಿಸಿದ ಎಲ್ಲ ಅಧಿಕಾರಿ ಹಾಗೂ ಸಿಬ್ಬಂದಿಗಳ ಕರ್ತವ್ಯವನ್ನು ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಲಕ್ಷ್ಮಣ ನಿಂಬರಗಿ ಶ್ಲಾಘಿಸಿದ್ದಾರೆ.
ಮನೆ ಕಳ್ಳತನ ಪ್ರಕರಣ: ಮೂವರು ಆರೋಪಿಗಳ ಬಂಧನ
