ಸಮಾಜ ಸೇವಾಭೂಷಣ ಪ್ರಶಸ್ತಿಗೆ ಹುಣಶ್ಯಾಳ ಆಯ್ಕೆ

ಸಪ್ತ ಸಾಗರ ವಾರ್ತೆ,ವಿಜಯಪುರ, ಜು. 9: ತಾಲೂಕಿನ ಸವನಹಳ್ಳಿ ಗ್ರಾಮದ ಶ್ರೀ ಸ್ವಾಮಿ ವಿವೇಕಾನಂದ ಸಮಗ್ರ ಗ್ರಾಮೀಣಾಭಿವೃದ್ಧಿ ಯುವಕ ಸಂಘದ ಸಂಚಾಲಕರ ಮಲ್ಲಿಕಾರ್ಜುನ ಹುಣಶ್ಯಾಳ ಅವರಿಗೆ “ರಾಜ್ಯಮಟ್ಟದ ಸಮಾಜ ಸೇವಾ ಭೂಷಣ ಪ್ರಶಸ್ತಿ” ಲಭಿಸಿದೆ.
ಸಮಾಜ ಸೇವೆ ಹಾಗೂ ಗ್ರಾಮದ ಯುವಕರ ಅಭಿವೃದ್ಧಿಗೆ ಅವರು ಸಲ್ಲಿಸಿದ ನಿಸ್ವಾರ್ಥ ಸೇವೆಯನ್ನು ಗುರುತಿಸಿ ಬೆಳಗಾವಿ ಜಿಲ್ಲೆ ಚಿಕ್ಕೋಡಿ ತಾಲೂಕಿನ ನಾಗರಮುನ್ನೂಳಿಯ ಕೆ.ಕೆ ಫೌಂಡೇಶನ್ ಅವರನ್ನು ಪ್ರಶಸ್ತಿಗೆ ಆಯ್ಕೆ ಮಾಡಿದೆ. ಜು. 27ರಂದು ಕವಿತ್ತ ಕರ್ಮಾಮಣಿ ಫೌಂಡೇಶನ್ ಉದ್ಘಾಟನಾ ಸಮಾರಂಭದ ನಿಮಿತ್ಯವಾಗಿ ನಡೆಯುವ ಸಮಾರಂಭದಲ್ಲಿ ಪ್ರಶಸ್ತಿ ಪ್ರದಾನ ಮತ್ತು ಸನ್ಮಾನ ಜರಗುವುದು ಎಂದು ಸಂಸ್ಥೆಯ ಅಧ್ಯಕ್ಷ ಲಾಲಸಾಬ ಎಚ್. ಪಂಡಾರಿ ಅವರು ಪತ್ರಿಕಾ ಪ್ರಕಟಣೆಯಲ್ಲಿ ತಿಳಿಸಿದ್ದಾರೆ.

Share