ನಾನು ಸಚಿವ ಸ್ಥಾನಕ್ಕೆ ಬೇಡಿಕೆ ಇಡಲ್ಲ, ಹೈಕಮಾಂಡ್ ನಿರ್ಧಾರಕ್ಕೆ ಬದ್ಧ- ಶಾಸಕ ಸಿ. ಎಸ್. ನಾಡಗೌಡ

ಸಪ್ತಸಾಗರ ವಾರ್ತೆ ವಿಜಯಪುರ, ಅ. 28:
ನಾನು ಕಾಂಗ್ರೆಸ್ ನಲ್ಲಿ ಸೀನಿಯರ್ ಲೀಡರ್. ಈ ಹಿಂದೆಯೂ ನನಗೆ ಯಾವುದೇ ಬೇಡಿಕೆ ಇಲ್ಲದೆ ಸಚಿವ ಸ್ಥಾನ ನೀಡಿದ್ದರು. ನಾನು ಈಗಲೂ ಯಾರಿಗೂ ಸಚಿವ ಸ್ಥಾನ ನೀಡುವಂತೆ ಬೇಡಿಕೆ ಇಡುವುದಿಲ್ಲ. ನಾನು ಪಕ್ಷಕ್ಕಾಗಿ ದುಡಿದಿರುವುದನ್ನು ಪರಿಗಣಿಸಿ ಸಚಿವ ಸ್ಥಾನ ನೀಡಬಹುದೆಂಬ ನಿರೀಕ್ಷೆ ಇದೆ ಎಂದು ಮುದ್ದೇಬಿಹಾಳ ಕ್ಷೇತ್ರದ ಶಾಸಕ ಸಿ.ಎಸ್. ನಾಡಗೌಡ ಅಪ್ಪಾಜಿ ಅವರು ಹೇಳಿದರು.
ಮಂಗಳವಾರ ಸಂಜೆ ವಿಜಯಪುರ ನಗರದಲ್ಲಿ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ನಾನು ಈ ಹಿಂದೆ ಸಚಿವ ಸ್ಥಾನಕ್ಕೆ ಯಾರಿಗೂ ಬೇಡಿಕೆ ಇಟ್ಟಿಲ್ಲ. ಈಗಲೂ ಬೇಡಿಕೆ ಇಡುವುದಿಲ್ಲ
ಪಕ್ಷಕ್ಕಾಗಿ ದುಡಿದಿದ್ದೇನೆ. ನನಗೆ ಸಚಿವ ಸ್ಥಾನ ನೀಡುವುದು ಬಿಡುವುದು ಹೈಕಮಾಂಡ್ ಗೆ ಬಿಟ್ಟ ವಿಚಾರ ಎಂದು ಹೇಳಿದರು.
ನಾನು ಯಾರಿಗೂ ಸಚಿವ ಸ್ಥಾನ ನೀಡಬೇಡಿ ಎಂದು ಯಾವತ್ತೂ ಹೇಳಿಲ್ಲ.
ನನಗೂ ಕೂಡಾ ಈ ಹಿಂದೆ ಸಚಿವ ಸ್ಥಾನ ನೀಡುವ ಆಶ್ವಾಸನೆ ನೀಡಲಾಗಿತ್ತು.
ಹಲವು ಸಲ ಹೆಸರು ಫೈನಲ್ ಆಗಿದ್ದು ವಾಪಸ್ ಆಗಿದೆ. ಹೀಗಾಗಿ ನಾನು ಯಾವುದೇ ಅಪೇಕ್ಷೆ ಇಟ್ಟುಕೊಂಡಿಲ್ಲ.
ಜಿಲ್ಲೆಯ ಎಲ್ಲ ಕಾಂಗ್ರೆಸ್ ಶಾಸಕರು ರಾಜ್ಯ ನಾಯಕರ ಭೇಟಿ ಮಾಡಿದಾಗ ಅವರೇ ನಿರ್ಧಾರ ಮಾಡುತ್ತಾರೆ ಎಃದರು.
ನಾವು ಪಕ್ಷದ ಸಿದ್ದಾಂತ, ಚೌಕಟ್ಟಿನಲ್ಲಿ ಮಾತುಕತೆ ಮಾಡೋಣ. ಪಕ್ಷದ ಹಿತದೃಷ್ಟಿಯಿಂದ ಎಲ್ಲವನ್ನೂ ಹೊಂದಾಣಿಕೆ ಮಾಡಿಕೊಳ್ಳಬೇಕು.
ಸಚಿವರಾದ ಶಿವಾನಂದ ಪಾಟೀಲ, ಎಂ.ಬಿ. ಪಾಟೀಲ, ಯಶವಂತರಾಯಗೌಡ ಪಾಟೀಲ ಎಲ್ಲರೂ ನಮ್ಮವರೇ. ಕಾಂಗ್ರೆಸ್ ಪಕ್ಷದಲ್ಲಿ ಭಿನ್ನಾಭಿಪ್ರಾಯಗಳಿವೆ ನಿಜ.
ರಾಜಕೀಯದಲ್ಲಿ ಎಲ್ಲವೂ ಇರುತ್ತದೆ ಎಂದು ಹೇಳಿದರು.

Share this