ಕನ್ಹೇರಿ ಶ್ರೀಗಳು ಕ್ಷಮಾಪಣೆ ಕೇಳಿದ್ದರೆ ವಿವಾದವೇ ಆಗುತ್ತಿರಲಿಲ್ಲ- ಸಚಿವ ಎಂ. ಬಿ. ಪಾಟೀಲ

ಸಪ್ತಸಾಗರ ವಾರ್ತೆ,ವಿಜಯಪುರ, ಅ. 25:
ಕನ್ಹೇರಿ ಶ್ರೀಗಳು ಸುಮ್ಮನೆ ಕ್ಷಮಾಪಣೆ ಕೇಳಿ ವಿವಾದಕ್ಕೆ ತೆರೆ ಎಳೆಯಬಹುದಿತ್ತು ಎಂದು ಜಿಲ್ಲಾ ಉಸ್ತುವಾರಿ ಸಚಿವ ಎಂ. ಬಿ. ಪಾಟೀಲ ಹೇಳಿದರು.
ಕನ್ಹೇರಿ ಶ್ರೀಗಳ ಅವಮಾನಕರ ಹೇಳಿಕೆ ಕುರಿತು ಶನಿವಾರ ನಗರದಲ್ಲಿ ಸುದ್ದಿಗಾರರಿಗೆ ಪ್ರತಿಕ್ರಿಯೆ ನೀಡಿದ ಅವರು, ಇದು ಸುಮ್ಮನೆ ಪೌರುಷ ಹೇಳಿಕೊಳ್ಳಲು ಆಡಿದ ಮಾತು. ಕ್ಷಮಾಪಣೆ ಕೇಳಿದ್ದರೆ ವಿವಾದವೇ ಸೃಷ್ಟಿ ಆಗುತ್ತಿರಲಿಲ್ಲ ಎಂದರು.
ಅವರು ಮಾತನಾಡಿದ ಶಬ್ದಗಳು ಖಂಡನೀಯ ಇವೆ. ಆಡು ಭಾಷೆಯಲ್ಲಿ ಅಂತಾರೆ. ನನಗೂ ಆಡು ಭಾಷೆಯಲ್ಲಿ ಅನೇಕ ಶಬ್ದಗಳು ಬರುತ್ತವೆ.
ನಾನು ಮಾತನಾಡಿದರೆ ಏನಾಗುತ್ತದೆ. ಎಲ್ಲ ಯೋಚಿಸಿ ಮಾತನಾಡಬೇಕು.
ನನ್ನ ಬಗ್ಗೆ ಅವರು ಏಕವಚನದಲ್ಲಿ ಮಾತನಾಡಿದ್ದಾರೆ. ನಾನು ಅವರಿಗೆ ಏಕವಚನದಲ್ಲಿ ಮಾತನಾಡಿದರೆ ಏನಾಗುತ್ತಿತ್ತು ಎಂದು ಪ್ರಶ್ನೆ ಮಾಡಿದರು.
ಸ್ವಾಮೀಜಿಗಳಿಗೆ ವಿಜಯಪುರ ಜಿಲ್ಲಾ ಪ್ರವೇಶ ನಿರ್ಬಂಧದ ಹಿಂದೆ ನಾನು ಇಲ್ಲ.
ಇದು ಜಿಲ್ಲಾಡಳಿತದ ಕೆಲಸ.
ಜಿಲ್ಲಾಧಿಕಾರಿಗಳು, ಎಸ್ಪಿ ಅವರು ನಿರ್ಧಾರ ತಗೆದುಕೊಂಡಿದ್ದಾರೆ. ನಿರ್ಬಂಧ ಹೇರದೆ ಬಿಟ್ಟಿದ್ದರೆ ಏನಾದರೂ ಅನಾಹುತ ಆಗಿದ್ದರೆ ನೀವೇ ಜಿಲ್ಲಾಡಳಿತ ಕಡೆಗೆ ಬೊಟ್ಟು ಮಾಡುತ್ತಿದ್ದರಿ ಎಃದರು.
ನನಗೂ ಅವರು ಆಪ್ತರು. ಅವರು ಕ್ಷಮೆ ಕೇಳಲಿ. ನನ್ನ ಮಾತಿಗೆ ಅವರು ಕ್ಷಮೆ ಕೇಳಿದ್ದರೆ ಶ್ರೀಗಳು ದೊಡ್ಡವರಾಗುತ್ತಿದ್ದರು ಎಂದು ತಿಳಿಸಿದರು.
ಸಿದ್ಧೇಶ್ವರ ಶ್ರೀಗಳು ಆಡು ಭಾಷೆಯಲ್ಲೆ ಪ್ರವಚನ ಮಾಡುತ್ತಿದ್ದರು. ಅವರು ಎಂದಾದರೂ ಈ ರೀತಿ ಮಾತನಾಡಿದ್ದಾರಾ?
ಶ್ರೀಗಳ ಆಡು ಭಾಷೆಯನ್ನು ಇವರು ಕಲಿಯಬೇಕು. ಅವರು ಸಿದ್ಧೇಶ್ವರ ಶ್ರೀಗಳ ಶಿಷ್ಯ, ನಾನು ಸಹ ಸಿದ್ದೇಶ್ವರ ಸ್ವಾಮೀಜಿಗಳ ಶಿಷ್ಯ. ಸಿದ್ದೇಶ್ವರ ಶ್ರೀಗಳು ಲಿಂಗಾಯತ ಧರ್ಮ ಒಂದು ಜಾಗತಿಕ ಧರ್ಮ ಎಂದು ಹೇಳಿದ್ದಾರೆ ಎಂದು ನುಡಿದರು.

Share this