ಅಕ್ರಮ ಪಡಿತರ ಅಕ್ಕಿ ವಶ: ಪೊಲೀಸರ ದಾಳಿ

ಸಪ್ತಸಾಗರ ವಾರ್ತೆ ವಿಜಯಪುರ, ಸೆ. 14:
ಅಕ್ರಮವಾಗಿ ಸಾಗಿಸುತ್ತಿದ್ದ ಪಡಿತರ ಅಕ್ಕಿ ಯನ್ನು ಪೊಲೀಸರು ಲಾರಿ ಸಮೇತ ವಶಪಡಿಸಿಕೊಂಡಿದ್ದಾರೆ.
ಖಚಿತ ಮಾಹಿತಿಯನ್ನು ಆಧರಿಸಿ ನಗರದ ವಿಜಯಾ ಟಾಯರ್ಸ್ ಮುಖ್ಯ ರಸ್ತೆಯಲ್ಲಿ ಪೊಲೀಸರು ಆಹಾರ ಇಲಾಖೆ ಜೊತೆಗೆ ಹಠಾತ್ ದಾಳಿ ನಡೆಸಿ 4,76,310 ಮೌಲ್ಯದ 210.43 ಕ್ವಿಂಟಲ್ ಅಕ್ಕಿ ಹಾಗೂ 5 ಲಕ್ಷ ಮೌಲ್ಯದ ಅಶೋಕ ಲೇಲ್ಯಾಂಡ್ ಲಾರಿ ವಶಪಡಿಸಿಕೊಳ್ಳಲಾಗಿದೆ. ಆರೋಪಿತರಾದ ಅಥಣಿ ತಾಲೂಕಿನ ಆಜೂರ ಗ್ರಾಮದ ಗಜಾನನ ಮಕಾಳೆ, ಅಥಣಿ ತಾಲೂಕಿನ ಗಣೇಶವಾಡಿ ನಿವಾಸಿ ಮಾರುತಿ ದೊಡಮನಿ, ಬೆಳಗಾವಿ ಆಝಾದ ನಗರ ಬಡಾವಣಿಯ ಇಕ್ಬಾಲ್ ತಹಶಿಲ್ದಾರ ಅವರು ಅಕ್ರಮವಾಗಿ ಪಡಿತರ ಅಕ್ಕಿಯನ್ನು ಲಾರಿಯಲ್ಲಿ ಸಾಗಿಸುತ್ತಿದ್ದಾಗ ದಾರಿಯಲ್ಲಿ ಪೊಲೀಸರಿಗೆ ಸಿಕ್ಕಿಬಿದ್ದಿದ್ದಾರೆ.
ಲಾರಿ ಚಾಲಕ ಗಜಾನನ ಮಕಾಳಿ ಈತನನ್ನು ಪೊಲೀಸರು ವಶಕ್ಕೆ ಪಡೆದು ವಿಚಾರಿಸಿದಾಗ ಅನಧಿಕೃತವಾಗಿ ಪಡಿತರ ಅಕ್ಕಿಯನ್ನು ಸಾಗಣೆ ಮಾಡಲಾಗುತ್ತಿತ್ತು ಎಂದು ಲಾರಿ ಚಾಲಕ ಒಪ್ಪಿಕೊಂಡಿದ್ದಾನೆ.
ಇನ್ನೂ ಇಬ್ಬರು ಆರೋಪಿತರು ಪರಾರಿಯಾಗಿದ್ದಾರೆ.
ಆದರ್ಶ ನಗರ ಪೊಲೀಸರು ಪ್ರಕರಣ ದಾಖಲಿಸಿಕೊಂಡಿದ್ದಾರೆ.

Share this