ಗೃಹ ಬಳಕೆ ಸಿಲಿಂಡರ್ ಅನಧಿಕೃತ ರಿಫಿಲಿಂಗ್ : ಆಹಾರ ಇಲಾಖೆ ದಾಳಿ, ಸಿಲಿಂಡರ್ ವಶಕ್ಕೆ

ಸಪ್ತಸಾಗರ ವಾರ್ತೆ ವಿಜಯಪುರ, ಸೆ.8: ಗೃಹ ಬಳಕೆಯ ಸಿಲಿಂಡರ್ ಗಳಿಂದ ಅನಧಿಕೃತವಾಗಿ ರಿಫಿಲಿಂಗ್ ಮಾಡುತ್ತಿರುವ ಸ್ಥಳಕ್ಕೆ ಆಹಾರ ಇಲಾಖೆ ಅಧಿಕಾರಿಗಳು ದಾಳಿ ನಡೆಸಿ, 31920 ರೂ. ಮೌಲ್ಯದ ಒಟ್ಟು 10 ಹೆಚ್‍ಪಿ ಕಂಪನಿ ಸಿಲಿಂಡರ್ ಗಳನ್ನು ವಶಪಡಿಸಿಕೊಂಡಿದ್ದಾರೆ.
ವಿಜಯಪುರ ನಗರದ ಇಬ್ರಾಹಿಂ ರೋಜಾ ಹತ್ತಿರದಲ್ಲಿ ಪತ್ರಾಸ ಶೆಡ್‍ನಲ್ಲಿ ಹಾಗೂ ನಗರದ ಬಾಗಲಕೋಟೆ ಕ್ರಾಸ್ ಹತ್ತಿರದ ಒಂದು ಪತ್ರಾಸ್ ಶೆಡ್‍ನಲ್ಲಿ ಅನಧಿಕೃತವಾಗಿ ಗೃಹ ಬಳಕೆ ಎಲ್‍ಪಿಜಿ ಸಿಲಿಂಡರ್ ಸಂಗ್ರಹಣೆ ಮಾಡಿ ರಿಫಿಲಿಂಗ್ ಮಾಡುತ್ತಿದ್ದ ಸ್ಥಳದಲ್ಲಿ ಅಧಿಕಾರಿಗಳು ದಾಳಿ ನಡೆಸಿ, ಸಿಲಿಂಡರ್ ಗಳು ಸೇರಿದಂತೆ ಒಂದು ತೂಕದ ಯಂತ್ರ ಹಾಗೂ ರಿಫಿಲಿಂಗ್ ಯಂತ್ರವನ್ನು ವಶಪಡಿಸಿಕೊಂಡು ಮೊಕದ್ದಮೆಯನ್ನು ಗಾಂಧಿಚೌಕ್ ಪೊಲೀಸ್ ಠಾಣೆಯಲ್ಲಿ ದಾಖಲಿಸಲಾಗಿದೆ.
ದಾಳಿಯಲ್ಲಿ ಆಹಾರ ನಿರೀಕ್ಷಕ ವಿಜಯಕುಮಾರ ಗುಮಶೆಟ್ಟಿ, ಗಾಂಧಿಚೌಕ್ ಪಿಎಸ್‍ಐ ರಾಜು ಮಮದಾಪುರ ಹಾಗೂ ಪೊಲೀಸ್ ಸಿಬ್ಬಂದಿಗಳು ಭಾಗವಹಿಸಿದ್ದರು.

Share this