ಅಕ್ರಮ ಅಕ್ಕಿ ಸಾಗಾಟ:ಆಹಾರ ಇಲಾಖೆ ದಾಳಿ, ಅಕ್ಕಿ ವಶ

ಸಪ್ತಸಾಗರ ವಾರ್ತೆ , ವಿಜಯಪುರ,ಮಾ 6:
ನಗರದ ಆರ್ ಎನ್ಎಸ್ ಶೋ ರೂಮ್ ಹತ್ತಿರ ಅಕ್ರಮವಾಗಿ ಪಡಿತರ ಅಕ್ಕಿ ಸಾಗಾಟ ಮಾಡುತ್ತಿದ್ದ ಸಂದರ್ಭದಲ್ಲಿ ಆಹಾರ ಇಲಾಖೆ ಅಧಿಕಾರಿಗಳು ದಾಳಿ ನಡೆಸಿ,ಅಕ್ರಮವಾಗಿ ಸಾಗಿಸುತ್ತಿದ್ದ ಅಕ್ಕಿ ವಶಕ್ಕೆ ಪಡೆದಿದ್ದಾರೆ.
ಆರ್ ಎನ್ಎಸ್ ಶೋ ರೂಮ್ ಹತ್ತಿರ ಲಾರಿಯಲ್ಲಿ ಅಕ್ರಮವಾಗಿ ಅಕ್ಕಿ ಸಾಗಾಟ ಮಾಡುತ್ತಿರುವ ಸಂದರ್ಭದಲ್ಲಿ ಆಹಾರ ಇಲಾಖೆ ಹಾಗೂ ಪೊಲೀಸ್ ಇಲಾಖೆಯ ಅಧಿಕಾರಿಗಳು ದಾಳಿ ನಡೆಸಿ, 35,060 ಕೆಜಿ ಅಕ್ಕಿ‌ ಹಾಗೂ ಲಾರಿ ವಶಕ್ಕೆ ಪಡೆದು ಟಿ.ರಾಜು ಎಂಬುವವರ ಮೇಲೆ ಜಲ ನಗರ ಪೋಲಿಸ್ ಠಾಣೆಯಲ್ಲಿ ಪ್ರಕರಣ ದಾಖಲಿಸಲಾಗಿದೆ.
ಈ ದಾಳಿಯಲ್ಲಿ ಆಹಾರ ಇಲಾಖೆಯ ಸಹಾಯಕ ನಿರ್ದೇಶಕ ಅಮರೇಶ ತಾಂಡೂರ, ಆಹಾರ ನಿರೀಕ್ಷಕ ವಿಜಯಕುಮಾರ ಗುಮಶೆಟ್ಟಿ, ಜಲನಗರ ಪಿ ಎಸ್ ಐ ಮಹೇಶ ಸಂಖ, ಪೋಲಿಸ್ ಸಿಬ್ಬಂದಿಗಳಾದ ವೈ.ಎ. ರಾಥೋಡ, ಎಚ್ಎನ್. ಪೂಜಾರಿ ಹಾಗೂ ಎಂ.ಆರ್ ಶಿಂಧೆ ಇದ್ದರು‌ ಎಂದು ಆಹಾರ ಇಲಾಖೆಯ ಉಪ ನಿರ್ದೇಶಕ
ವಿನಯಕುಮಾರ ಪಾಟೀಲ ಅವರು ಪ್ರಕಟಣೆಯಲ್ಲಿ ತಿಳಿಸಿದ್ದಾರೆ.

Share this