ಸಪ್ತಸಾಗರ ವಾರ್ತೆ ವಿಜಯಪುರ, ಅ. 4:
ಸಂತ್ರಸ್ತರಿಗೆ ಸರ್ಕಾರ ಪರಿಹಾರ ನೀಡಿಲ್ಲ.
ಅಧಿಕಾರಿಗಳು ಪ್ರವಾಹ ಪೀಡಿತ ಪ್ರದೇಶದಲ್ಲಿ ಹಾನಿಯ ಸರ್ವೇ ಮಾಡಿಲ್ಲ.
ಸರ್ಕಾರ ಪರಿಹಾರ ಘೋಷಣೆ ಮಾಡಿದೆಯಷ್ಟೇ. ಆದರೆ ಪರಿಹಾರ ನೀಡಿಲ್ಲ ಎಂದು ವಿಧಾನಸಭೆ ವಿರೋಧ ಪಕ್ಷದ ನಾಯಕ ಆರ್. ಅಶೋಕ ಕಾಂಗ್ರೆಸ್ ಸರ್ಕಾರದ ವಿರುದ್ಧ ವಾಗ್ದಾಳಿ ನಡೆಸಿದರು.
ಶನಿವಾರ ವಿಜಯಪುರ ಜಿಲ್ಲೆಯ ಭೀಮಾನದಿ ಪ್ರವಾಹ ಪೀಡಿತ ಪ್ರದೇಶಗಳಿಗೆ ಬಿಜೆಪಿ ತಂಡ ಭೇಟಿ ನೀಡಿ ಹಾನಿಯ ಕುರಿತು ಖುದ್ದು ಪರಿಶೀಲನೆ ನಡೆಸಿದರು. ನಂತರ ಆಲಮೇಲ ತಾಲೂಕಿನ ದೇವಣಗಾಂವ ಗ್ರಾಮದಲ್ಲಿ ಮಾಧ್ಯಮಗೋಷ್ಠಿಯಲ್ಲಿ ಅವರು ಮಾತನಾಡಿದರು.
ಉತ್ತರ ಕರ್ನಾಟಕ ಭಾಗಾದಲ್ಲಿ ಹಾಗೂ ಮಲೆನಾಡಿನಲ್ಲಿ ಪ್ರವಾಹ ಮಳೆ ಹಾನಿಯಾಗಿದೆ. ಜನ ಸಂಕಷ್ಟದಲ್ಲಿದ್ದಾರೆ.
ನವರಾತ್ರಿ ಸಂಭ್ರಮ ಇಲ್ಲ. ಸರ್ಕಾರ ಕುಂಭ ಕರ್ಣ ನಿದ್ದೆಯಲ್ಲಿದೆ.
ಸಿದ್ದರಾಮಯ್ಯ ನಿದ್ದೆ ಮಾಡುವ ಸಿಎಂ ಆಗಿದ್ದಾರೆ ಎಂದು ಟೀಕಿಸಿದರು.
ಸಚಿವರು ಪ್ರವಾಹ ಸ್ಥಳಕ್ಕೆ ಭೇಟಿ ನೀಡಿಲ್ಲ.
ಬಿಜೆಪಿ ಎರಡು ತಂಡಗಳಲ್ಲಿ ಪ್ರವಾಸ ಮಾಡುವ ವಿಷಯ ಅರಿತು ಸಿಎಂ ವೈಮಾನಿಕ ಸಮೀಕ್ಷೆ ಮಾಡಿದ್ದಾರೆ.
ಸಚಿವರು ಕಳೆದು ಹೋಗಿದ್ದಾರೆ.
ಸಚಿವರು ಬಂದಿಲ್ಲ ಎಂದು ಪ್ರವಾಹ ಪೀಡಿತ ಜನರು ಹೇಳಿದ್ದಾರೆ ಎಂದರು.
ಹಿಂದೆ ಯಡಿಯೂರಪ್ಪ, ಬೊಮ್ಮಾಯಿ ಸರ್ಕಾರ ಇದ್ದಾಗ ತುರ್ತು ಪರಿಹಾರ ನೀಡಿದ್ದೇವು. ವಿರೋಧ ಪಕ್ಷದಲ್ಲಿದ್ದಾಗ ರೈತರ ಪರ ಎನ್ನುತ್ತಿದ್ದ ಕಾಂಗ್ರೆಸ್ ಈಗ ಏನು ಕೊಟ್ಟಿದೆ ಎಂದು ಕೇಳಿದರು.
ನಮ್ಮ ಸಂಸದರು ಪ್ರವಾಹ ಪೀಡಿತ ಸ್ಥಳದಲ್ಲಿ ಓಡಾಡುತ್ತಿದ್ದಾರೆ.
ಅವರೇನು ವೈಮಾನಿಕ ಸಮೀಕ್ಷೆ ಮಾಡಿಲ್ಲ.
ಎಲ್ಲ ಬೆಳೆಗಳು ಹಾಳಾಗಿವೆ. ಈರುಳ್ಳಿ, ಹತ್ತಿ, ಸೂರ್ಯಕಾಂತಿ ಎಲ್ಲ ಬೆಳೆ ಹಾಳಾಗಿವೆ. ಸಚಿವರು ಪ್ರಕೃತಿ ವಿಕೋಪ ಎಂದು ಹೇಳಿದ್ದಾರೆ. ಬಿಜೆಪಿ ಸರ್ಕಾರ ಇದ್ದಾಗ ಮಳೆ ಪ್ರವಾಹಕ್ಕೆ ಬಿದ್ದ ಮನೆಗಳಿಗೆ ಐದು ಲಕ್ಷ ನೀಡಿದ್ದೇವೆ. ಈ ಸರ್ಕಾರ ಕೊಡುವುದೆಷ್ಟು.
ರೈತರ ಪರ ಎನ್ನುವ ಕಾಂಗ್ರೆಸ್ ಸರ್ಕಾರ ಈಗ ರೈತರಿಗೆ ಏನು ನೀಡಿದ್ದಾರೆ ಎಂದು ಆರ್. ಅಶೋಕ ಪ್ರಶ್ನಿಸಿದರು.
ಕೇಂದ್ರದಲ್ಲಿ ಮನಮೋಹನ್ ಸಿಂಗ್ ಇದ್ದಾಗ, ಮೋದಿ ಇದ್ದಾಗ ಏನು ಕೊಟ್ಟಿದ್ದಾರೆ. ಅಂಕಿ ಅಂಶ ನೋಡಿ ಎಂದು ಕಾಂಗ್ರೆಸಿಗರ ವಿರುದ್ಧ ಆರ್. ಅಶೋಕ ಕಿಡಿಕಾರಿದರು.
ಸರ್ಕಾರ ಬದುಕಿದ್ದರೆ ಸರಿಯಾದ ಪರಿಹಾರ ನೀಡಲಿ. ಸಿಎಂ ಸಿದ್ದರಾಮಯ್ಯ ಅವರದ್ದು ಬರೀ ಮೊಸಳೆ ಕಣ್ಣೀರು ಎಂದು ವಾಗ್ದಾಳಿ ನಡೆಸಿದರು.
ವಿಜಯಪುರ ಜಿಲ್ಲೆಯಲ್ಲಿ
ಓರ್ವ ಡೋಣಿ ನದಿಯಲ್ಲಿ ಕೊಚ್ಚಿಕೊಂಡು ಹೋಗಿ ಮೃತಪಟ್ಟಿದ್ದಾರೆ. ಓರ್ವ ಮೊಸಳೆ ದಾಳಿಗೆ ಬಲಿಯಾಗಿದ್ದಾನೆ. ಅವರಿಗೂ ಪರಿಹಾರ ನೀಡಿಲ್ಲ ಎಂದು ಅಸಮಾಧಾನ ವ್ಯಕ್ತಪಡಿಸಿದರು.
ಕಾಂಗ್ರೆಸ್ ಸರ್ಕಾರ ಐದಲ್ಲ, ಐವತ್ತು ಗ್ಯಾರಂಟಿ ಕೊಡಿ. ಫ್ಲೈಟ್ ಪ್ರೀ ಕೊಡಿ.
ನಾವು ಗ್ಯಾರಂಟಿಗಳ ವಿರೋಧಿಗಳಲ್ಲ.
ಮುಂದೆ ಜನರು ತೀರ್ಮಾನ ಮಾಡುತ್ತಾರೆ.
ಮಳೆ ಹಾಗೂ ಪ್ರವಾಹ ಹಾನಿ ಕುರಿತು ರಾಜ್ಯದ ಯಾವೊಬ್ಬ ಸಚಿವರು ಕೇದ್ರದ ಸಚಿವರಿಗೆ ಭೇಟಿಯಾಗಿಲ್ಲ.
ಕನಿಷ್ಟ ಮನವಿಯನ್ನು ನೀಡಿಲ್ಲ.
ರಾಜ್ಯದ ಸಚಿವರಾದ ಪ್ರಹ್ಲಾದ ಜೋಶಿ, ಕುಮಾರಸ್ವಾಮಿ, ಶೋಭಾ ಕರಂದ್ಲಾಜೆ, ಸೋಮಣ್ಣ ಅವರ ಭೇಟಿಯನ್ನೂ ಕೂಡಾ ಮಾಡಿಲ್ಲ. ಪ್ರವಾಹ ಸಮೀಕ್ಷೆಗೆ
ಸಿಎಂ ರಸ್ತೆ ಮೇಲೆ ಬರಲಿಲ್ಲ. ರಸ್ತೆಗಳು ಗುಂಡಿ ಬಿದ್ದಿವೆ. ವಿಜಯಪುರ ಜಿಲ್ಲೆಯಲ್ಲಿ ರಸ್ತೆಗಳಲ್ಲಿ ಒಂದು ಲಕ್ಷ ಗುಂಡಿ ಬಿದ್ದಿವೆ. ಅದಕ್ಕಾಗಿ ಸಿಎಂ ರಸ್ತೆ ಮೂಲಕ ಸಮೀಕ್ಷೆಗೆ ಬರಲಿಲ್ಲ ಎಂದರು.
ಸಿಎಂಗೆ ನವೆಂಬರ್ ಶನಿಕಾಟ, ಡಿಕೆಶಿ ಕಾಟ, ಪರಮೇಶ್ವರ ಕಾಟ,
ಎಂ.ಬಿ. ಪಾಟೀಲ್ ಕಾಟ ಹೆಚ್ಚಾಗಿದೆ.
ಹಾಗಾಗಿ ಸಿಎಂ ರೈತರಿಗೆ ಕಾಟ ನೀಡುತ್ತಿದ್ದಾರೆಂದು ವ್ಯಂಗ್ಯವಾಡಿದರು.
ಸರ್ಕಾರ ಎಕರೆಗೆ 25000 ಸಾವಿರ ಪರಿಹಾರ ನೀಡಬೇಕು. ಮನೆ ಬಿದ್ದವರಿಗೂ ಪರಿಹಾರ ನೀಡಬೇಕಿದೆ. ಪ್ರವಾಹ ವೀಕ್ಷಣೆ ವರದಿಯನ್ನು ರಾಜ್ಯ ಸರ್ಕಾರಕ್ಕೆ ನೀಡುತ್ತೇವೆ. ಕೇಂದ್ರಕ್ಕೆ ರಾಜ್ಯ ಸರ್ಕಾರ ವರದಿ ನೀಡಬೇಕು ಎಂದು ಹೇಳಿದರು.
ಸಿಎಂ 2013-18 ಸಿಎಂ ಆಗಿದ್ದಾಗ ಪಾದರಸದಂತೆ ಓಡಾಡುತ್ತಿದ್ದರು ಎಂಬ ವಿಚಾರ ಪ್ರತಿಕ್ರಿಯೆ ನೀಡಿದ ಅಶೋಕ, ಅವರು ಸಿದ್ದರಾಮಯ್ಯ ಅಲ್ಲ.
ನಿದ್ದೆರಾಮಯ್ಯ ಆಗಿದ್ದಾರೆ.
ಅನುದಾನ ಇಲ್ಲ. ಬಿ.ಆರ್. ಪಾಟೀಲ, ಶಾಸಕ ರಾಜು ಕಾಗೆ ಅವರ ಪಕ್ಷದವರೇ ಹೇಳಿದ್ದಾರೆ. ನಾವೇನು ಹೇಳುವುದು ಎಂದು ಅಶೋಕ ಕುಟುಕಿದರು.
ನಾವು ವಿರೋಧ ಪಕ್ಷದವರು ಎಲ್ಲವನ್ನು ವಿರೋಧ ಮಾಡುತ್ತೇವೆ.
ಆದರೆ ಸರ್ಕಾರದ ವಿರುದ್ದ ತಮ್ಮದೇ ಶಾಸಕರು ವಿರೋಧ ಮಾಡುತ್ತಿದ್ದಾರೆ.
ಸಿಎಂ ಅವರು ತಮ್ಮ ಶಾಸಕರಿಗೆ ಮೊದಲು ಉತ್ತರ ಹೇಳಲಿ ಎಂದು ತಿಳಿಸಿದರು.
ಕಾಂಗ್ರೆಸ್ ಸರ್ಕಾರದಲ್ಲಿ ನೆರೆ ಪರಿಹಾರ ಬರೀ ಘೋಷಣೆಯಷ್ಟೇ: ಆರ್. ಅಶೋಕ ವಾಗ್ದಾಳಿ


