ಸಪ್ತಸಾಗರ ವಾರ್ತೆ, ವಿಜಯಪುರ,ಆ. 4:
ವಿಜಯಪುರ ಜಿಲ್ಲಾ ಮಟ್ಟದ ಪ್ರಪ್ರಥಮ ಯೋಗಾಸನ ಕ್ರೀಡಾಕೂಟ ತಿಡಗುಂದಿ ಪತಂಜಲಿ ಯೋಗ ಕ್ರೀಡಾ ಮತ್ತು ಸಾಂಸ್ಕೃತಿಕ ಭವನದಲ್ಲಿ ಭಾನುವಾರ ನಡೆಯಿತು.
ಸಸಿಗೆ ನೀರೆಯುವ ಮೂಲಕ ಕ್ರೀಡಾಕೂಟ ಉದ್ಘಾಟಿಸಲಾಯಿತು.
ಅರಕೇರಿ ಐಆರ್ ಬಿ ಸಿಪಿಐ ಕಲ್ಲನಗೌಡ ಪಾಟೀಲ ಕ್ರೀಡಾಕೂಟ ಉದ್ಘಾಟಿಸಿದರು.
ದಿವ್ಯ ಸಾನ್ನಿಧ್ಯವನ್ನು ಶಾಂತವ್ವ ಹರನಾಳ ವಹಿಸಿದ್ದರು.
ತಿಡಗುಂದಿ ಕೆಜಿಎಸ್ ಎ ಅಧ್ಯಕ್ಷ ಬಸನಗೌಡ ಹರನಾಳ ಅಧ್ಯಕ್ಷತೆ ವಹಿಸಿದ್ದರು.
ಆಡಳಿತಾಧಿಕಾರಿ ಕುಮಾರಗೌಡ ಹರನಾಳ, ಶ್ವೇತಾ ಹರನಾಳ, ಮುಖ್ಯ ಪರಿವೀಕ್ಷಕರಾಗಿ, ಮಲ್ಲಮ್ಮ ಭೋಜಣ್ಣವರ, ಬಸವರಾಜ ಬಾಗೇವಾಡಿ ಉತ್ನಾಳ, ಪುಷ್ಪಾವತಿ ಮೇಟಿ, ರಮೇಶ ಮಾದರ, ಜಗದೀಶ ತಳವಾರ, ಸುನೀತಾ ಶಿವಮಂದಿರ ಮತ್ತು ಜ್ಯೋತಿ ಭಾಗವಹಿಸಿದ್ದರು.
ಜಿಲ್ಲಾ ಮಟ್ಟದ ಯೋಗಾಸನ ಕ್ರೀಡಾಕೂಟ ಉದ್ಘಾಟನೆ
