ಸಪ್ತಸಾಗರ ವಾರ್ತೆ, ವಿಜಯಪುರ, ಜ. 29:
ಕಗ್ಗೋಡದ ಶ್ರೀ ಸಿದ್ಧೇಶ್ವರ ಸಂಸ್ಥೆಯ ಶ್ರೀ ರಾಮನಗೌಡ ಪಾಟೀಲ (ಯತ್ನಾಳ) ಗೋರಕ್ಷಾ ಕೇಂದ್ರ ಶ್ರೀ ಸಿದ್ಧೇಶ್ವರ ಸಂಸ್ಥೆಯ ನಿರ್ದೇಶಕ ಸಾಯಿಬಣ್ಣ ಎಸ್ ಬೋವಿ. ಇವರ ಕುಟುಂಬದವರಿಂದ ಮಹಾದ್ವಾರ ನಿರ್ಮಿಸಿದ್ದು, ಮಹಾದ್ವಾರದ ಉದ್ಘಾಟನೆಯನ್ನು ಗೋಮಾತೆಯ ಪೂಜೆಯೊಂದಿಗೆ ವಿಜಯಪುರ ನಗರ ಶಾಸಕ ಹಾಗೂ ಶ್ರೀ ಸಿದ್ಧೇಶ್ವರ ಸಂಸ್ಥೆಯ ಅಧ್ಯಕ್ಷ ಬಸನಗೌಡ ಪಾಟೀಲ (ಯತ್ನಾಳ) ಅವರ ನೇತೃತ್ವದಲ್ಲಿ ಉದ್ಘಾಟನೆಗೊಂಡಿತು.
ಈ ಸಂದರ್ಭದಲ್ಲಿ ಸಂಸ್ಥೆಯ ಉಪಾಧ್ಯಕ್ಷ ಸಂಗನಬಸಪ್ಪ ಸಜ್ಜನ, ಚೇರಮನ್ ಬಸಯ್ಯ ಹಿರೇಮಠ, ಕಾರ್ಯದರ್ಶಿಗಳಾದ ಸದಾನಂದ ಎಚ್. ದೇಸಾಯಿ, ಬಿ.ಎಸ್. ಸುಗೂರ, ಕೊಶ್ಯಾಧ್ಯಕ್ಷ ಶಿವಾನಂದ ನೀಲಾ, ನಿರ್ದೇಶಕರಾದ ಸಾಯಿಬಣ್ಣ ಎಸ್ ಬೋವಿ, ಸುಧೀರ ಎನ್ ಚಿಂಚಲಿ, ಸದಾಶಿವ ಗುಡ್ಡೋಡಗಿ, ಮಲಕಪ್ಪ ಗಾಣಿಗೇರ, ರಮೇಶ ಹಳ್ಳದ, ಬಸವರಾಜ ಗಣಿ, ಮಲ್ಲಿಕಾರ್ಜುನ ಹಕ್ಕಾಪಕ್ಕಿ, ನಾಗಪ್ಪ ಗುಗ್ಗರಿ, ರಾಮನಗೌಡ ಪಾಟೀಲ (ಯತ್ನಾಳ) ವಿಜಯಕುಮಾರ ಡೋಣಿ, ಗುರು ಎಸ್ ಗಚ್ಚಿನಮಠ, ಶಂಕರ ಎಸ್ ಬೋವಿ, ರಾಮು ಎಸ್ ಬೋವಿ, ರಾಜಶೇಖರ ಮಗಿಮಠ, ಪ್ರೇಮಾನಂದ ಬಿರಾದಾರ, ಕೀರಣ ಪಾಟೀಲ, ರಾಹುಲ ಜಾಧವ, ಶಂಕರ ಹೂಗಾರ, ಸಂತೋಷ ತಳಕೇರಿ ಹಾಗೂ ಪ್ರಮುಖ ಮುಖಂಡರು ಉಪಸ್ಥಿತರಿದ್ದರು.
ಕಗ್ಗೋಡದಲ್ಲಿ ಗೋರಕ್ಷಾ ಕೇಂದ್ರದಮಹಾದ್ವಾರ ಉದ್ಘಾಟನೆ


