ಸಪ್ತಸಾಗರ ವಾರ್ತೆ, ವಿಜಯಪುರ, ನ. 26: ನೂತನವಾಗಿ ನೋಂದಣಿಯಾಗಿರುವ ವಿಜಯಪುರ ಸೌಹಾರ್ದ ಸಹಕಾರಿಗಳ ಒಕ್ಕೂಟದ (ಯುನಿಯನ್) ಕಚೇರಿ ನಗರದ ಸೊಲ್ಲಾಪುರ ರಸ್ತೆ ಚಾಲುಕ್ಯ ನಗರದಲ್ಲಿ ಮಹಾಲಕ್ಷ್ಮಿ ಪೂಜೆಯನ್ನು ನೆರವೇರಿಸಿ ಪ್ರಾರಂಭ ಮಾಡಲಾಯಿತು.
ಈ ಸಂದರ್ಭದಲ್ಲಿ ಒಕ್ಕೂಟದ ಅಧ್ಯಕ್ಷ ಸಂಜಯ ಪಾಟೀಲ ಕನಮಡಿ , ಉಪಾಧ್ಯಕ್ಷ ಚಂದ್ರಶೇಖರ ಕವಟಗಿ,
ನೂತನ ಆಡಳಿತ ಮಂಡಳಿ ಸದಸ್ಯರಾದ ಅರುಣ ವಾರದ , ಸುರೇಶ ಬಿರಾದಾರ, ಸಿದ್ದು ಮಲ್ಲಿಕಾರ್ಜುನಮಠ, ಅರುಣ ಮಠ, ಮೌನೇಶ ಪತ್ತಾರ, ಸತೀಶ ಶಿಂತ್ರೆ , ವಿವೇಕಾನಂದ ಶಿರೋಳ್ಕರ್ , ಯಮನಪ್ಪ ಸಾತಿಹಾಳ (ವಿಜಯಪುರ ಗ್ರಾಮಾಂತರ) ಬಾಲಚಂದ್ರ ಮುಂಜಾನೆ (ಬಸವನಬಾಗೇವಾಡಿ), ರಾಜು ಹಂಚಾಟೆ (ತಾಳಿಕೋಟೆ / ಮುದ್ದೇಬಿಹಾಳ), ಚಂದ್ರಶೇಖರ ಪಾಟೀಲ ( ಚಡಚಣ), ಮಲಕಪ್ಪ ರೊಟ್ಟಿ (ತಾಂಬಾ, ತಾ ಇಂಡಿ), ಹಾಗೂ ಸಹಕಾರ ಭಾರತಿ ಜಿಲ್ಲಾ ಸಂಘಟನಾ ಕಾರ್ಯದರ್ಶಿ ದೀಪಕ ಶಿಂತ್ರೆ , ಪ್ರಧಾನ ಕಾರ್ಯದರ್ಶಿ ಪರಶುರಾಮ ಚಿಂಚಲಿ ಮತ್ತಿತರರು ಉಪಸ್ಥಿತರಿದ್ದರು.
ನೂತನ ವಿಜಯಪುರ ಸೌಹಾರ್ದ ಸಹಕಾರಿಗಳ ಒಕ್ಕೂಟದ ಕಚೇರಿ ಪ್ರಾರಂಭ


