ಸಪ್ತಸಾಗರ ವಾರ್ತೆ ವಿಜಯಪುರ, ಡಿ. 17 : ಥಿಂಕ್ ಗ್ಯಾಸ್ CNG ಸ್ಟೇಷನ್ ಉದ್ಘಾಟನೆ
ವಿಜಯಪುರ,ಡಿ.16,2025: ಭಾರತದ ಪ್ರಮುಖ ನಗರ ಅನಿಲ ವಿತರಣಾ ಕಂಪನಿಗಳಲ್ಲೊಂದಾದ ಥಿಂಕ್ ಗ್ಯಾಸ್, ವಿಜಯಪುರದಲ್ಲಿ ಹಳೆಯ ಹಾಗೂ ಹೊಸ ನಗರ ಬಸ್ ನಿಲ್ದಾಣದ ಸಮೀಪ ತನ್ನ ಕಂಪನಿ-ಮಾಲೀಕತ್ವದ, ಕಂಪನಿ-ನಿರ್ವಹಿತ (COCO) CNG ಸ್ಟೇಷನ್ ಅನ್ನು ಉದ್ಘಾಟಿಸಿದೆ.
ಉದ್ಘಾಟನಾ ಸಮಾರಂಭದ ಮುಖ್ಯ ಅತಿಥಿಗಳಾಗಿ ಬಸನಗೌಡ ಪಾಟೀಲ ಯತ್ನಾಳ, ವಿಧಾನಸಭಾ ಸದಸ್ಯರು – ವಿಜಯಪುರ, ಮಡಿವಾಳಪ್ಪ ಕರಡಿ, ಮೇಯರ್, ನಗರ ನಿಗಮ, ವಿಜಯಪುರ ಭಾಗವಹಿಸಿದ್ದರು. ಈ ಸಂದರ್ಭದಲ್ಲಿ ರಂಗರಾಜನ್ ಶೇಷಾದ್ರಿ, ಥಿಂಕ್ ಗ್ಯಾಸ್ – ಪ್ರಾದೇಶಿಕ ಮುಖ್ಯಸ್ಥರು (ಕಲಬುರಗಿ ಮತ್ತು ವಿಜಯಪುರ) ಹಾಗೂ ಪ್ರಯಾಗ್ ಮಿಶ್ರಾ, ಮಾರ್ಕೆಟಿಂಗ್ ಕ್ಲಸ್ಟರ್ ಮುಖ್ಯಸ್ಥರು (ಕಲಬುರಗಿ ಮತ್ತು ವಿಜಯಪುರ) ಉಪಸ್ಥಿತರಿದ್ದರು. ಈ ಕಾರ್ಯಕ್ರಮವು COCO CNG ಯು ಕಡಿಮೆ ವೆಚ್ಚದ ಇಂಧನವಾಗಿರುವುದು ಹಾಗೂ ವಾಹನ ಬಳಕೆದಾರರಿಗೆ ಅನುಕೂಲಕರ ಸೌಲಭ್ಯ ಒದಗಿಸುವುದರ ಮಹತ್ವವನ್ನು ಎತ್ತಿಹಿಡಿಯಿತು.
ವಿಧಾನಸಭಾ ಸದಸ್ಯ ಬಸನಗೌಡ ಪಾಟೀಲ ಯತ್ನಾಳ ಅವರು COCO CNG ಯೋಜನೆಯನ್ನು ಯಶಸ್ವಿಯಾಗಿ ಪೂರ್ಣಗೊಳಿಸಿದ್ದಕ್ಕಾಗಿ ಥಿಂಕ್ ಗ್ಯಾಸ್ ನ್ನು ಅಭಿನಂದಿಸಿದರು. “ಈ ಯೋಜನೆ ವಿಜಯಪುರದಲ್ಲಿ ಸಂಕುಚಿತ ನೈಸರ್ಗಿಕ ಅನಿಲ (CNG) ಅನ್ನು ಹೆಚ್ಚು ಲಭ್ಯವಾಗಿಸುವತ್ತ ಮಹತ್ವದ ಹೆಜ್ಜೆಯಾಗಿದೆ. ಇದು ಹಸಿರು ಭವಿಷ್ಯದ ಕುರಿತು ಸರ್ಕಾರದ ದೃಷ್ಟಿಕೋನಕ್ಕೆ ಹೊಂದಿಕೆಯಾಗಿದ್ದು, ನೈಸರ್ಗಿಕ ಅನಿಲವನ್ನು(Natural Gas) ಇಂಧನವಾಗಿ ಅಳವಡಿಸಿಕೊಳ್ಳುವ ಮೂಲಕ ಸ್ಥಳೀಯ ಸಮುದಾಯವು ಸ್ವಚ್ಛ ಹಾಗೂ ಹಸಿರು ವಿಜಯಪುರಕ್ಕೆ ಕೊಡುಗೆ ನೀಡಲು ಸಹಕಾರಿಯಾಗಿದೆ. ನೈಸರ್ಗಿಕ ಅನಿಲದ ವ್ಯಾಪಕ ಬಳಕೆಯನ್ನು ಉತ್ತೇಜಿಸಲು ಅಧಿಕಾರಿಗಳು ಬದ್ಧರಾಗಿದ್ದು, ವಿಜಯಪುರದಲ್ಲಿ ನೈಸರ್ಗಿಕ ಅನಿಲ ಮೂಲಸೌಕರ್ಯ ವಿಸ್ತರಿಸಲು ಕಂಪನಿಗೆ ಮುಂದುವರಿಯುವಂತೆ ಹೇಳಿದರು.
ಮೇಯರ್ ಮಡಿವಾಳಪ್ಪ ಕರಡಿ ಅವರು CNG ಯು ಸುರಕ್ಷಿತ ಮತ್ತು ಆರ್ಥಿಕ ಇಂಧನ ಎಂಬುದನ್ನು ಪುನರುಚ್ಚರಿಸಿದರು. ಇಂತಹ ಯೋಜನೆಯ ಮಹತ್ವ ಹಾಗೂ ನಗರ ನಿಗಮವು ನೀಡಿದ ಬೆಂಬಲದ ಬಗ್ಗೆ ವಿವರಿಸಿದರು. ಸಾರ್ವಜನಿಕರು ಸುರಕ್ಷಿತ ಮತ್ತು ಕಡಿಮೆ ವೆಚ್ಚದ CNG ಇಂಧನದ ಪ್ರಯೋಜನ ಪಡೆದು, ವಿಜಯಪುರದಲ್ಲಿ ಮಾಲಿನ್ಯ ಮಟ್ಟ ಕಡಿಮೆ ಮಾಡಲು ಸಹಕರಿಸಬೇಕೆಂದು ಅವರು ತಿಳಿಸಿದರು.
ಈ ಸಾಧನೆ ಕುರಿತು ಮಾತನಾಡಿದ ರಂಗರಾಜನ್ ಶೇಷಾದ್ರಿ,
“ಈ ಹೊಸ COCO CNG ಸ್ಟೇಷನ್ ಸೇರಿ, ಥಿಂಕ್ ಗ್ಯಾಸ್ ಪ್ರಸ್ತುತ ಕಲಬುರಗಿ ಮತ್ತು ವಿಜಯಪುರದಲ್ಲಿ 23 CNG ಸ್ಟೇಷನ್‌ಗಳನ್ನು ಕಾರ್ಯನಿರ್ವಹಿಸುತ್ತಿದೆ. ಈ ವಿಸ್ತರಣೆ ಭಾರತವು 2030ರೊಳಗೆ ನೈಸರ್ಗಿಕ ಅನಿಲದ ಪಾಲನ್ನು ಪ್ರಸ್ತುತ 5% ರಿಂದ 15% ಕ್ಕೆ ಹೆಚ್ಚಿಸುವ ಹಾಗೂ ನೆಟ್-ಜಿರೋ ಉತ್ಸರ್ಜನೆ ಗುರಿ ಸಾಧಿಸುವ ಉದ್ದೇಶಕ್ಕೆ ಅನುಗುಣವಾಗಿದೆ. ವಿಜಯಪುರದಲ್ಲಿ ಸುರಕ್ಷಿತ, ನಿರಂತರ ಮತ್ತು ಕಡಿಮೆ ವೆಚ್ಚದ ಹಸಿರು ಇಂಧನ ಒದಗಿಸುತಿದ್ದೆವೆ. ಈ COCO ಯೋಜನೆಯನ್ನು ಆರಂಭಿಸಲು ಬೆಂಬಲ ನೀಡಿದ ಎಲ್ಲಾ ಅಧಿಕಾರಿಗಳಿಗೆ ಥಿಂಕ್ ಗ್ಯಾಸ್ ಕೃತಜ್ಞತೆ ಸಲ್ಲಿಸುತ್ತದೆ ಮತ್ತು ಜನರು ನೈಸರ್ಗಿಕ ಅನಿಲದ ಪ್ರಯೋಜನ ಪಡೆದುಕೊಳ್ಳಬೇಕೆಂದು ವಿನಂತಿಸುತ್ತದೆ – ಇದು ನಿಜಕ್ಕೂ ಭವಿಷ್ಯದ ಇಂಧನ.”
CNG COCO ಸ್ಟೇಷನ್ ಯಶಸ್ವಿಯಾಗಿ ಕಾರ್ಯಾರಂಭಗೊಂಡ ನಂತರ, ಈಗಾಗಲೇ 6.5 ಕಿ.ಮೀ ಕಾರ್ಯಗತಗೊಂಡ ಉಕ್ಕಿನ (steel pipeline) ಪೈಪ್‌ಲೈನ್‌ಗಳನ್ನು ಒಳಗೊಂಡ ಪೈಪ್‌ಲೈನ್ ಜಾಲದ ಮೂಲಕ ನೈಸರ್ಗಿಕ ಅನಿಲದ ಲಭ್ಯತೆ ಹೆಚ್ಚಾಗಲಿದೆ. ಇದು ವಿಜಯಪುರ ಜಿಲ್ಲೆಯ ಸಾರಿಗೆ ವಲಯ, ವಾಣಿಜ್ಯ ಹಾಗೂ ಕೈಗಾರಿಕಾ ಸಂಸ್ಥೆಗಳ ಇಂಧನ ಅಗತ್ಯಗಳನ್ನು ಪೂರೈಸಲಿದೆ.
ಈ ಸ್ಟೇಷನ್ 24×7 ಕಾರ್ಯನಿರ್ವಹಿಸಲಿದ್ದು, ಎಲ್ಲರಿಗೂ ಅನುಕೂಲ ಮತ್ತು ಲಭ್ಯತೆಯನ್ನು ಖಚಿತಪಡಿಸುತ್ತದೆ. ನಗರದ ಹೃದಯಭಾಗದಲ್ಲಿರುವುದರಿಂದ ಪ್ರಯಾಣಿಕರು ಮತ್ತು ಸಾರಿಗೆ ನಿರ್ವಹಕರು ಯಾವುದೇ ಅಡಚಣೆ ಇಲ್ಲದೆ ಇಂಧನ ತುಂಬಿಸಿಕೊಳ್ಳಬಹುದು.
ಥಿಂಕ್ ಗ್ಯಾಸ್ CNG ಸ್ಟೇಷನ್ ಉದ್ಘಾಟನೆ


