101 ನೇ ದಿನಕ್ಕೆ ಕಾಲಿಟ್ಟ ಅನಿರ್ದಿಷ್ಟ ಧರಣಿ

ಸಪ್ತಸಾಗರ ವಾರ್ತೆ ವಿಜಯಪುರ,ಡಿ. 27:
ಸರ್ಕಾರಿ ವೈದ್ಯಕೀಯ ಕಾಲೇಜು ಸ್ಥಾಪನೆಗೆ ಆಗ್ರಹಿಸಿ ನಗರದ ಅಂಬೇಡ್ಕರ್ ವೃತ್ತದಲ್ಲಿ ಹೋರಾಟ ಸಮಿತಿ ಕೈಗೊಂಡ ಅನಿರ್ದಿಷ್ಟ ಧರಣಿ ಸತ್ಯಾಗ್ರಹ 101ನೇ ದಿನಕ್ಕೆ ಕಾಲಿಟ್ಟಿದೆ.
ವಿಜಯಪುರದ ಮೂಲ ನಿವಾಸಿ ಅಶೋಕ ಲೋಣಿ (ಕನ್ನಡಪರ ಹೋರಾಟಗಾರರು) ಕೆಜಿಎಫ್ ದಿಂದ ಆಗಮಿಸಿ, ಇಂದು ಇಡೀ ದಿನ ಧರಣಿಯಲ್ಲಿ ಭಾಗವಹಿಸಿ ಬೆಂಬಲ ವ್ಯಕ್ತ ಪಡಿಸಿ ಮಾತನಾಡಿ,
ಸರ್ಕಾರ ವಿಜಯಪುರದಲ್ಲಿ ಸರ್ಕಾರಿ ವೈದ್ಯಕೀಯ ಕಾಲೇಜು ಮಾತ್ರ ಸ್ಥಾಪಿಸಬೇಕು. ಯಾರ ಹಿತಕ್ಕಾಗಿ ಈ ಪಿಪಿಪಿ ಅನ್ನುವ ಮಾದರಿ ವಿಜಯಪುರ ಜಿಲ್ಲೆಯ ಜನರ ಮೇಲೆ ಹೇರುತ್ತಿದ್ದಾರೆ.
ವಿಜಯಪುರ ಅಂಗವಿಕಲರ ಸಂಘದ ವತಿಯಿಂದ ಸರ್ಕಾರಿ ವೈದ್ಯಕೀಯ ಕಾಲೇಜು ಹೋರಾಟ ಸಮಿತಿ ವೇದಿಕೆಗೆ ಭೇಟಿ ನೀಡಿ ಬೆಂಬಲ ವ್ಯಕ್ತಪಡಿಸಿದರು.
ಹೋರಾಟ ಸಮಿತಿಯ ಎಲ್ಲಾ ಸದಸ್ಯರು ಉಪಸ್ಥಿತರಿದ್ದರು.

Share this