ಸಪ್ತಸಾಗರ ವಾರ್ತೆ, ವಿಜಯಪುರ, ಆ. 17 :
ನಾವು ಸ್ವಾತಂತ್ರ್ಯ ದಿನವನ್ನು ಹಬ್ಬದಂತೆ ಸಂಭ್ರಮದಿಂದ ಆಚರಿಸುತ್ತಿದ್ದೇವೆ. ದೇಶಕ್ಕಾಗಿ ನಿಸ್ವಾರ್ಥವಾಗಿ ಹೋರಾಟ ಮಾಡಿದ ಹೋರಾಟಗಾರರ ತ್ಯಾಗ, ಬಲಿದಾನದ ಸ್ಮರಣೆಯಾಗಿದೆ ಎಂದು ಇತಿಹಾಸ ಉಪನ್ಯಾಸಕ ಅಮರೇಶ ಸಾಲಕ್ಕಿ ಹೇಳಿದರು.
ನಗರದ ಎಸ್.ಕುಮಾರ ವಿದ್ಯಾವರ್ಧಕ ಸಂಸ್ಥೆಯ ಸರಸ್ವತಿ ಆಂಗ್ಲ ಮಾಧ್ಯಮ ಪ್ರಾಥಮಿಕ ಹಾಗೂ ಪ್ರೌಢ ಶಾಲೆ ಮತ್ತು ಎಸ್.ಕುಮಾರ ಮಹೇಶ ಪಿಯು ಕಾಲೇಜಿನಲ್ಲಿ 79ನೇ ಸ್ವಾತಂತ್ರ್ಯ ದಿನಾಚರಣೆ ಕಾರ್ಯಕ್ರಮದ ಮುಖ್ಯ ಅತಿಥಿಯಾಗಿ ಅವರು ಮಾತನಾಡಿದರು. ನಾವು ಅನುಭವಿಸುತ್ತಿರುವ ಸ್ವಾತಂತ್ರ್ಯ ಅಷ್ಟು ಸುಲಭವಾಗಿ ಸಿಕ್ಕಿರುವುದಿಲ್ಲ. ಅದಕ್ಕಾಗಿ ಅನೇಕ ವೀರರು ಪ್ರಾಣವನ್ನೆ ಮುಡಿಪಾಗಿಟ್ಟರು. ಈ ದಿನವು ಮಹಾತ್ಮಾ ಗಾಂಧೀಜಿ, ಭಗತ್‌ಸಿಂಗ್, ನೇತಾಜಿ ಸುಭಾಷ್‌ಚಂದ್ರ ಭೋಸ್, ಚಂದ್ರಶೇಖರ ಆಜಾದ್, ಝಾನ್ಸಿ ರಾಣಿ, ಲಾಲಾ ರ ಜಪತರಾಯ ಮುಂತಾದ ಮಹಾನ್ ಸ್ವಾತಂತ್ರ್ಯ ಹೋರಾಟಗಾರರ ತಪಸ್ಸು ಮತ್ತು ತ್ಯಾಗವನ್ನು ಸ್ಮರಿಸುವ ದಿನವಾಗಿದೆ ಎಂದರು.
ಕಾಲೇಜಿನ ಪ್ರಾಚಾರ್ಯ ಸದಾಶಿವ ಮಾತನಾಡಿ, ಭಾರತ ದೇಶವು ವಿವಿಧ ಕ್ಷೇತ್ರಗಳಲ್ಲಿ ಪ್ರಪಂಚಾದ್ಯಂತ ತನ್ನ ಛಾಪು ಮೂಡಿಸಿದೆ. ವಿಜ್ಞಾನ, ತಂತ್ರಜ್ಞಾನ, ಆರ್ಥಿಕ, ಕೃಷಿ ಶಿಕ್ಷಣ, ಸಾಹಿತ್ಯ, ಕ್ರೀಡೆ ಸೇರಿದಂತೆ ಎಲ್ಲಾ ರಂಗಗಳಲ್ಲಿ ಸಾಕಷ್ಟು ಪ್ರಗತಿ ಸಾಧಿಸಿದೆ. ಭಾರತ ಬಾಹ್ಯಾ ಕ್ಷೇತ್ರದಲ್ಲಿ ಹಲವು ಸಾಧನೆಗಳನ್ನು ಮಾಡಿದೆ. ಚಂದ್ರಯಾನ-03ರ ಯಶಸ್ಸು ಇದಕ್ಕೆ ದೊಡ್ಡ ಸಾಕ್ಷಿ. ಡಿಜಿಟಲ್ ಇಂಡಿಯಾ ಸ್ವಚ್ಛ ಭಾರತ ಅಭಿಯಾನ ಮತ್ತು ಆತ್ಮನಿರ್ಭರ ಭಾರತ ಅಭಿಯಾನದಂತಹ ಮಹಾತ್ವಾಕಾಂಕ್ಷೆ ಯೋಜನೆಗಳು ಪ್ರತಿಯೊಂದು ಕ್ಷೇತ್ರದಲ್ಲೂ ಭಾರತ ಸಾಕಷ್ಟು ಮುನ್ನಡೆ ಸಾಧಿಸಿದೆ ಎಂದರು. ಸಂಸ್ಥೆ ಸಂಸ್ಥಾಪಕ ಎಸ್.ಕುಮಾರ, ಸಂಸ್ಥೆ ಅಧ್ಯಕ್ಷೆ ಡಾ.ಎಚ್ .ಟಿ.ಲತಾದೇವಿ, ಇದ್ದರು. ಮುಖ್ಯಗುರು ಪ್ರ ಶಾಂತ ಹಿರೇಮಠ ಮತ್ತಿತರರು ಉಪಸ್ಥಿತರಿದ್ದರು.
ತ್ಯಾಗ, ಬಲಿದಾನದ ಸ್ಮರಣೆಯೇ ಸ್ವಾತಂತ್ರೋತ್ಸವ- ಅಮರೇಶ ಸಾಲಕ್ಕಿ
