ಸಪ್ತಸಾಗರ ವಾರ್ತೆ,ವಿಜಯಪುರ, ಮಾ. 26:
ನಮ್ಮ ಜನಗಣತಿ, ನಮ್ಮ ಭವಿಷ್ಯ ಧ್ಯೇಯ ವಾಕ್ಯದಡಿ ಭಾರತ ಜನಗಣತಿ-2027ರ ಮೊದಲ ಹಂತದ ಜನಗಣತಿಯನ್ನು ಏಪ್ರಿಲ್ ನಿಂದ ಜಿಲ್ಲೆಯಲ್ಲಿ ಆರಂಭಿಸಲಾಗುವುದು ಎಂದು ಜಿಲ್ಲಾಧಿಕಾರಿ ಡಾ. ಆನಂದ ಕೆ. ಅವರು ತಿಳಿಸಿದ್ದಾರೆ.
ಮೊದಲ ಹಂತ -1 ಮನೆಪಟ್ಟಿ ಮತ್ತು ಮನೆ ಗಣತಿ (ಎಚ್ಎಲ್ಒ) ಏಪ್ರಿಲ್ 1ರಿಂದ 15ರವರೆಗೆ ಇದೇ ಮೊದಲ ಬಾರಿಗೆ ಸ್ವಯಂ ಗಣತಿ ವ್ಯವಸ್ಥೆ ಜಾರಿಗೊಳಿಸಲಾಗಿದೆ ಎಂದು ಜಿಲ್ಲಾಧಿಕಾರಿ ತಿಳಿಸಿದ್ದಾರೆ. ಈ ಸ್ವಯಂ ಗಣತಿ ಐಚ್ಛಿಕವಾಗಿರುತ್ತದೆ. ಕುಟುಂಬಗಳು ಮಾತ್ರ ಸ್ವಯಂ ಗಣತಿ ಮಾಡಬಹುದಾಗಿದೆ ಎಂದವರು ತಿಳಿಸಿದ್ದಾರೆ.
ಈ ಹಂತದಲ್ಲಿ ನಿಮ್ಮ ಮೊಬೈಲ್ ಮತ್ತು ಡೆಸ್ಕ್ ಟಾಪ್ ಮೂಲಕ ಲಾಗಿನ್ ಆಗಬೇಕು. ಲಾಗಿನ್ ನಲ್ಲಿ ಕಾಣಿಸುವ 33 ಸರಳ ಪ್ರಶ್ನೆಗಳಿಗೆ ಸರಿಯಾದ ಮಾಹಿತಿಯನ್ನು ಅಪ್ ಡೇಟ್ ಮಾಡಿದ ನಂತರ ಎಸ್ಇ ಐಡಿ ಸೃಜನೆಯಾಗುತ್ತಿದ್ದಂತೆಯೇ ಅದನ್ನು ಸೇವ್ ಮಾಡಬೇಕು. ಬಳಿಕ ಗಣತಿದಾರರು ಮನೆಗೆ ಭೇಟಿ ನೀಡಿದಾಗ ಅವರಿಗೆ ನೀಡಬೇಕು. ಸ್ವಯಂ ಗಣತಿ ಪೂರ್ಣ ಪ್ರಮಾಣದ ಜನಗಣತಿಯಾಗುವುದಿಲ್ಲ. ಎಸ್ಇ ಐಡಿ ಯನ್ನು ಗಣತಿದಾರರಿಗೆ ನೀಡಿದಾಗ ಅವರು ಕಟ್ಟಡ ಸಂಖ್ಯೆ, ಜನಗಣತಿ ಮನೆ ಸಂಖ್ಯೆ ಮತ್ತಿತರ ಹೆಚ್ಚುವರಿ ವಿವರಗಳನ್ನು ಸೇರಿಸಿ ಡೇಟಾ ಅಪ್ಲೋಡ್ ಮಾಡುತ್ತಾರೆ ಎಂದು ಜಿಲ್ಲಾಧಿಕಾರಿಗಳು ತಿಳಿಸಿದ್ದಾರೆ.
ಫಾರ್ಮ್ ಭರ್ತಿ ಮಾಡಲು ಪೋರ್ಟಲ್ ನಲ್ಲಿ ಟೂಲ್ ಟಿಪ್ಸ್ ಸೌಲಭ್ಯವಿದೆ. ನಿಮ್ಮ ಮನೆಯ ಸ್ಥಳವನ್ನು ಮ್ಯಾಪ್ ನಲ್ಲಿ ಪಿನ್ ಕೋಡ್ ಮತ್ತು ಲ್ಯಾಂಡ್ ಮಾರ್ಕ್ ಬಳಸಿ ನಿಖರವಾಗಿ ಗುರುತಿಸಬಹುದಾಗಿದೆ.
ಮನೆ ಪಟ್ಟಿ ಕ್ಷೇತ್ರ ಕಾರ್ಯ
ಏ. 16ರಿಂದ ಮೇ 15ರವರೆಗೆ ಮನೆ ಪಟ್ಟಿ ಕ್ಷೇತ್ರ ಕಾರ್ಯ ಕೈಗೊಳ್ಳಲಾಗುವುದು. ಫೆ. 2027ರಿಂದ ಜನಸಂಖ್ಯಾ ಗಣತಿ 2ನೇ ಹಂತದ ಜನಗಣತಿ ಕಾರ್ಯ ಕೈಗೆತ್ತಿಕೊಳ್ಳಲಾಗುವುದು ಎಂದು ಜಿಲ್ಲಾಧಿಕಾರಿಗಳು ತಿಳಿಸಿದ್ದಾರೆ.
ಜನಗಣತಿಗೆ ಸಂಬಂಧಿಸಿದ ಜಿಲ್ಲಾ ಮಟ್ಟದ ಅಧಿಕಾರಿಗಳು ಮತ್ತು ಎಲ್ಲ ಚಾರ್ಜ್ ಅಧಿಕಾರಿಗಳಿಗೆ ಮತ್ತು ಕ್ಷೇತ್ರ ತರಬೇತುದಾರರಿಗೆ ತರಬೇತಿ ನೀಡಲಾಗಿದೆ. ಗಣತಿದಾರರಿಗೆ ಮತ್ತು ಮೇಲ್ವಿಚಾರಕರಿಗೆ ಆಯಾ ಚಾರ್ಜ್ ಹಂತಗಳಲ್ಲಿ ಏಪ್ರಿಲ್ 2026 ಮೊದಲ ವಾರದಲ್ಲಿ ತರಬೇತಿ ನೀಡಲಾಗುವುದು ಎಂದು ಜಿಲ್ಲಾಧಿಕಾರಿಗಳು ತಿಳಿಸಿದ್ದಾರೆ.
ಬ್ಲಾಕ್ ರಚನೆ: ಜನಗಣತಿಗೆ ಬ್ಲಾಕ್ಗಳನ್ನು ರಚಿಸಲಾಗುತ್ತಿದ್ದು, 150 ರಿಂದ 200 ಮನೆಗಳು ಅಥವಾ 700 ರಿಂದ 800 ಜನಸಂಖ್ಯೆಗೆ ಒಬ್ಬರು ಗಣತಿದಾರರನ್ನು ಮತ್ತು ಪ್ರತಿ 6 ಜನ ಗಣತಿದಾರರಿಗೆ ಒಬ್ಬರು ಮೇಲ್ವಿಚಾರಕರನ್ನು ನೇಮಿಸಲಾಗುವುದು ಎಂದವರು ತಿಳಿಸಿದ್ದಾರೆ.
ಜಿಲ್ಲೆಯಲ್ಲಿ ಗ್ರಾಮೀಣ ಭಾಗದಲ್ಲಿ 2919 ಮತ್ತು ನಗರ ಮತ್ತು ಸ್ಥಳೀಯ ಸಂಸ್ಥೆಗಳ ವ್ಯಾಪ್ತಿ ಪ್ರದೇಶದಲ್ಲಿ 598 ಮತ್ತು ಮಹಾನಗರ ಪಾಲಿಕೆ ವ್ಯಾಪ್ತಿಯಲ್ಲಿ ಒಟ್ಟು 586 ಒಟ್ಟರೆ ಜಿಲ್ಲೆಯಲ್ಲಿ 4103 ಬ್ಲಾಕ್ ರಚಿಸಲಾಗಿದೆ. ಕೊಳಚೆ ಪ್ರದೇಶಗಳಿಗೆ ಪ್ರತ್ಯೇಕ ಬ್ಲಾಕ್ ರಚಿಸಲಾಗುವುದು. ಜಿಲ್ಲೆಯಲ್ಲಿ ಒಟ್ಟು 4161 ಗಣತಿದಾರರನ್ನು ಮತ್ತು 926 ಮೇಲ್ವಿಚಾರಕರನ್ನು ನೇಮಕ ಮಾಡಲಾಗಿದೆ ಎಂದವರು ತಿಳಿಸಿದ್ದಾರೆ.
ಸಾರ್ವಜನಿಕರು ನಿಮ್ಮ ಮನೆಗೆ ಭೇಟಿ ನೀಡಿದ ಗಣತಿದಾರರಿಗೆ ಸರಳ 33 ಪ್ರಶ್ನೆಗಳಿಗೆ ಮಾಹಿತಿ ನೀಡುವುದರೊಂದಿಗೆ ಭಾರತ ಜನಗಣತಿ-2027 ನೇದ್ದರಲ್ಲಿ ಪಾಲ್ಗೊಳ್ಳಬಹುದಾಗಿದೆ. ಏ. 1 ರಿಂದ 15ರವರೆಗೆ ಸ್ವಯಂ ಗಣತಿ ಕಾರ್ಯದಲ್ಲಿ ಸಾರ್ವಜನಿಕರು ನೇರವಾಗಿ ಪಾಲ್ಗೊಳ್ಳಬಹುದಾಗಿದೆ. ಇದರಲ್ಲಿ ಜಿಲ್ಲೆಯ ಎಲ್ಲ ಸಾರ್ವಜನಿಕರು ಸ್ವಯಂಪ್ರೇರಿತರಾಗಿ ಪಾಲ್ಗೊಳ್ಳಲು ಮತ್ತು ನಿಮ್ಮ ಮನೆಗೆ ಭೇಟಿ ನೀಡಿದ ಗಣತಿದಾರರಿಗೆ ಮಾಹಿತಿ ನೀಡುವುದರೊಂದಿಗೆ ಜನಗಣತಿ ಕಾರ್ಯವನ್ನು ಯಶಸ್ವಿಗೊಳಿಸಲು ಜಿಲ್ಲಾಧಿಕಾರಿಗಳು ತಿಳಿಸಿದ್ದಾರೆ.
ಜಿಲ್ಲೆಗೆ ಸಂಬಂಧಿಸಿದಂತೆ ಜಿಲ್ಲಾಧಿಕಾರಿಗಳು, ಜಿಲ್ಲೆಯ ಎಲ್ಲ ಗ್ರಾಮೀಣ ಪ್ರದೇಶ, ಜಿಲ್ಲೆಯ ನಗರ ಮತ್ತು ಸ್ಥಳೀಯ ಸಂಸ್ಥೆ ವ್ಯಾಪ್ತಿಗೆ ಪ್ರಧಾನ ಜನಗಣತಿ ಅಧಿಕಾರಿಗಳಾಗಿರುತ್ತಾರೆ. ವಿಜಯಪುರ ನಗರ ವ್ಯಾಪ್ತಿಗೆ ಮಹಾನಗರ ಪಾಲಿಕೆ ಆಯುಕ್ತರು ಪ್ರಧಾನ ಜನಗಣತಿ ಅಧಿಕಾರಿಗಳಾಗಿರುತ್ತಾರೆ.
ಅಪರ ಜಿಲ್ಲಾಧಿಕಾರಿಗಳು ಜಿಲ್ಲೆಯ ಜನಗಣತಿ ಅಧಿಕಾರಿಗಳಾಗಿತ್ತಾರೆ. ವಿಜಯಪುರ, ಇಂಡಿ ಉಪವಿಭಾಗಾಧಿಕಾರಿಗಳು ಉಪವಿಭಾಗ ಮಟ್ಟದ ಚಾರ್ಜ್ ಅಧಿಕಾರಿಗಳಾಗಿದ್ದು, ತಾಲೂಕು ಮಟ್ಟದಲ್ಲಿ (ಗ್ರಾಮೀಣ ಪ್ರದೇಶ) ತಹಸೀಲ್ದಾರ್ರು, ನಗರ ಪ್ರದೇಶಕ್ಕೆ ಆಯಾ ಸ್ಥಳೀಯ ಸಂಸ್ಥೆಗಳ ಮುಖ್ಯಾಧಿಕಾರಿಗಳು ಚಾರ್ಜ್ ಅಧಿಕಾರಿಗಳಾಗಿರುತ್ತಾರೆ.
ತಾಲೂಕು ಮಟ್ಟದಲ್ಲಿ (ಗ್ರಾಮೀಣ ಪ್ರದೇಶ)-13 ನಗರ ಸ್ಥಳೀಯ ಸಂಸ್ಥೆ ವ್ಯಾಪ್ತಿಯಲ್ಲಿ -14 ಮತ್ತು ವಿಜಯಪುರ ಪಾಲಿಕೆ ವ್ಯಾಪ್ತಿಯಲ್ಲಿ -4 ಹೀಗೆ ಜಿಲ್ಲೆಯಲ್ಲಿ ಒಟ್ಟು -31 ಚಾರ್ಜ್ಗಳನ್ನು ರಚಿಲಾಗಿದೆ ಎಂದು ಜಿಲ್ಲಾಧಿಕಾರಿಗಳು ತಿಳಿಸಿದ್ದಾರೆ.
ಪ್ರಸ್ತುತ ಜನಗಣತಿಯನ್ನು ಎರಡು ಹಂತಗಳಲ್ಲಿ ನಡೆಸಲಾಗುವುದು. ಸಂಪೂರ್ಣ ಡಿಜಿಟಲ್ ಮೋಡ್ನಲ್ಲಿ ನಡೆಯುವ ಪ್ರಥಮ ಜನಗಣತಿ ಇದಾಗಿದ್ದು, ತನ್ಮೂಲಕ ನಮ್ಮ ಜನಗಣತಿ, ನಮ್ಮ ಭವಿಷ್ಯ ಭಾರತ ಜನಗಣತಿ ಕಾರ್ಯ ಯಶಸ್ವಿಗೊಳಿಸಬೇಕು ಎಂದು ಜಿಲ್ಲಾಧಿಕಾರಿಗಳು ಪ್ರಕಟಣೆಯಲ್ಲಿ ತಿಳಿಸಿದ್ದಾರೆ.
ಹೆಚ್ಚಿನ ಮಾಹಿತಿಗಾಗಿ
ನಗರ ಚಾರ್ಜ್ ಅಧಿಕಾರಿಗಳ ಬಬಲೇಶ್ವರದ ಪಟ್ಟಣ ಪಂಚಾಯತಿಯ ಮುಖ್ಯ ಅಧಿಕಾರಿಗಳಾದ ಪ್ರೀತಿ ಮೊ:8970716582, ತಿಕೋಟ ಪಟ್ಟಣ ಪಂಚಾಯತಿಯ ಮುಖ್ಯ ಅಧಿಕಾರಿಗಳಾದ ರಾಘು ನಡುವಿನಮನಿ ಮೊ:8618990588, ಬಸವನ ಬಾಗೇವಾಡಿ ಪುರಸಭೆಯ ಮುಖ್ಯ ಅಧಿಕಾರಿಗಳಾದ ವಿದ್ಯಾಧರ ಕಲಾದಗಿ ಮೊ:9449142066, ಮನಗೂಳಿಯ ಪಟ್ಟಣ ಪಂಚಾಯತ್ ಮುಖ್ಯ ಅಧಿಕಾರಿಗಳಾದ ನಿಖಿಲೇಶ್ ಪಾಟೀಲ ಮೊ:7019095811, ಕೋಲ್ಹಾರದ ಪಟ್ಟಣ ಪಂಚಾಯತಿಯ ಮುಖ್ಯ ಅಧಿಕಾರಿಗಳಾದ ವೀರೇಶ್ ಬಿ. ಹಟ್ಟಿ ಮೊ: 9880726017, ನಿಡಗುಂದಿ ಪಟ್ಟಣ ಪಂಚಾಯತಿಯ ಮುಖ್ಯ ಅಧಿಕಾರಿಗಳಾದ ಪ್ರತಾಪ್ ಆರ್ ಕೊಡಗೆ ಅವರ ಮೊ:9353082725, ಮುದ್ದೇಬಿಹಾಳ ತಾಲೂಕಿನ ಪುರಸಭೆಯ ಮುಖ್ಯ ಅಧಿಕಾರಿಗಳಾದ ಮಲ್ಲನಗೌಡ ಬಿರಾದರ ಮೊ.9686939267, ನಾಲತವಾಡ ಪಟ್ಟಣ ಪಂಚಾಯತಿಯ ಮುಖ್ಯ ಅಧಿಕಾರಿಗಳಾದ ಈರಣ್ಣ ಕನ್ನೂರ ಮೊ.8618498448, ತಾಳಿಕೋಟಿ ತಾಲೂಕ ಪಂಚಾಯತಿಯ ಮುಖ್ಯ ಅಧಿಕಾರಿಗಳಾದ ವಸಂತ ಟಿ. ಪವಾರ ಮೊ.9611073468, ಇಂಡಿ ತಾಲೂಕಿನ ನಗರಸಭೆಯ ಮುಖ್ಯ ಅಧಿಕಾರಿಗಳಾದ ಎಸ್.ಎಸ್ ಪೂಜಾರಿ ಮೊ.8147444916, ಚಡಚಣ ಪಟ್ಟಣ ಪಂಚಾಯತಿಯ ಮುಖ್ಯ ಅಧಿಕಾರಿಗಳಾದ ಬಿ.ಕೆ ತಾವಸೆ ಮೊ.8971248849, ಸಿಂದಗಿ ತಾಲೂಕ ನಗರಸಭೆಯ ಮುಖ್ಯ ಅಧಿಕಾರಿಗಳಾದ ಎಸ್ ರಾಜಶೇಖರ ಮೊ.9008224773, ದೇವರ ಹಿಪ್ಪರಗಿ ತಾಲೂಕಿನ ಪಟ್ಟಣ ಪಂಚಾಯಿತಿಯ ಮುಖ್ಯ ಅಧಿಕಾರಿಗಳಾದ ಅಪ್ರೋಜ ಅಹಮದ್ ಪಟೇಲ ಮೊ.903667655, ಆಲಮೇಲ ತಾಲೂಕಿನ ಪಟ್ಟಣ ಪಂಚಾಯಿತಿಯ ಮುಖ್ಯ ಅಧಿಕಾರಿ ಸುರೇಶ್ ಡಿ. ನಾಯಕ ಮೊ. 7899981786,
ಗ್ರಾಮೀಣ ಚಾರ್ಜ್ ಅಧಿಕಾರಿಗಳಾದ ವಿಜಯಪುರದ ತಹಸೀಲ್ದಾರ್ ಪ್ರಶಾಂತ್ ಚನಗೊಂಡ ಮೊ, 94 82896370, ಬಬಲೇಶ್ವರ ತಹಸೀಲ್ದಾರ್ ಶಾಂತಲಾ ಚಂದನ್ ಮೊ, 99 021037577, ತಿಕೋಟಾ ತಹಸಿಲ್ದಾರ್ ಸುರೇಶ್ ಚೌವಲರ್ ಮೊ.9449943022, ಆಲಮೇಲ ತಹಸಿಲ್ದಾರ್ ಮಲ್ಲಿಕಾರ್ಜುನ ಅರಕೇಣಿ, ಮೊ, 9538385108, ಸಿಂದಗಿ ತಹಸಿಲ್ದಾರ್ ಕರೆಪ್ಪ ಬೆಳ್ಳಿ, ಮೊ.8105768671, ದೇವರ ಹಿಪ್ಪರಗಿ ತಹಸಿಲ್ದಾರ್ ನಿಂಗಪ್ಪ ಮೊ.9538523163, ಮುದ್ದೇಬಿಹಾಳ ತಹಸಿಲ್ದಾರ್ ಕೀರ್ತಿ ಚಳಕ ಮೊ.8861438554, ತಾಳಿಕೋಟೆ ತಹಸಿಲ್ದಾರ್ ವಿನಯ್ ಉಗಾರ ಮೊ.8851542739, ಚಡಚಣ ತಹಸಿಲ್ದಾರ್ ಎಸ್.ಬಿ.ಇಂಗಳೆ ಮೊ,9900776009, ಇಂಡಿ ತಹಸೀಲ್ದಾರ್ ಬಿ.ಎಸ್ ಕಡಕಬಾವಿ ಮೊ.9902748240, ಬಸವನ ಬಾಗೇವಾಡಿ ತಹಸೀಲ್ದಾರರಾದ ವೈ ಎಸ್. ಸೋಮನಕಟ್ಟಿ ಮೊ.9008712765, ಕೊಲ್ಹಾರ ತಾಲೂಕು ತಾಸಿಹಿಲ್ದಾರರಾದ ಸಂತೋಷ ಎಂ. ಮ್ಯಾಗೇರಿ ಮೊ.8050069316, ನಿಡಗುಂದಿ ತಾಲೂಕಿನ ತಹಸಿಲ್ದಾರರಾದ ಎ.ಡಿ. ಅಮರವದಗಿ ಮೊ.9482268533,
ಮಹಾನಗರ ಪಾಲಿಕೆ ಚಾರ್ಜ್ ಅಧಿಕಾರಿಗಳಾದ, ಮಹಾನಗರ ಪಾಲಿಕೆಯ ಚಾರ್ಜ್ -1ರ ಒಲಯ ಆಯುಕ್ತರಾದ ಹುಚ್ಚೆಶ ಚಿತ್ತರಗಿ ಮೊ.9611517871,ಮಹಾನಗರ ಪಾಲಿಕೆಯ ಚಾರ್ಜ್ -2ರ ಒಲಯ ಆಯುಕ್ತರಾದ ಮೋಹನ ವಿ. ಜಾದವ ಮೊ.9448086333, ಮಹಾನಗರ ಪಾಲಿಕೆಯ ಚಾರ್ಜ್ -3ರ ಒಲಯ ಆಯುಕ್ತರಾದ ಶಿವಪ್ಪ ಅಂಬಿಗೇರ ಮೊ.9902129534, ಮಹಾನಗರ ಪಾಲಿಕೆಯ ನಗರ ಯೋಜನಾ ನಿರ್ದೇಶಕ ಜಂಟಿ ನಿರ್ದೇಶಕರಾದ ಚಾರ್ಜ್ -4ರ ರಮೇಶ ಕೆ. ಸಿ ಮೊ.9449515808 ಸಂಪರ್ಕಿಸಬಹುದಾಗಿದೆ ಎಂದು ಜಿಲ್ಲಾಧಿಕಾರಿಗಳು ತಿಳಿಸಿದರು.
Editor
Rudrappa B Asangi
Editor
Managing Editor
Chetan Asangi
Managing Editor


