ಸಪ್ತಸಾಗರ ವಾರ್ತೆ, ವಿಜಯಪುರ, ಸೆ. 9: ಜಿಲ್ಲೆಯ ತಾಳಿಕೋಟೆಯ ವಿಠ್ಠಲ್ ಮಂದಿರದಲ್ಲಿ ಶ್ರೀ ಕ್ಷೇತ್ರ ಧರ್ಮಸ್ಥಳ ಗ್ರಾಮಾಭಿವೃದ್ಧಿ ಯೋಜನೆಯ ಮುದ್ದೇಬಿಹಾಳ ತಾಲ್ಲೂಕಿನ ಗಣೇಶನಗರ ವಲಯದ 10 ಒಕ್ಕೂಟದ ಪದಾಧಿಕಾರಿಗಳಿಗೆ ಒಂದು ದಿನದ ವಿಶೇಷ ಕಾರ್ಯಾಗಾರವನ್ನು ಆಯೋಜಿಸಲಾಗಿತ್ತು.
ಜಿಲ್ಲಾ ನಿರ್ದೇಶಕ ಸಂತೋಷ ಕುಮಾರ ಅವರು ಕಾರ್ಯಾಗಾರ ಉದ್ಘಾಟಿಸಿದರು.
ವಲಯ ಮಟ್ಟದಲ್ಲಿ 25 ರಿಂದ 30 ತಂಡಗಳನ್ನು ಒಳಗೊಂಡಂತೆ ಒಂದು ಒಕ್ಕೂಟದಂತೆ 10 ಒಕ್ಕೂಟಗಳು ಕಾರ್ಯ ನಿರ್ವಹಿಸುತ್ತಿದ್ದು. 10 ಒಕ್ಕೂಟದಿಂದ 50 ಜನ ಪದಾಧಿಕಾರಿಗಳು ಈ ತರಬೇತಿ ಕಾರ್ಯಗಾರದಲ್ಲಿ ಭಾಗವಹಿಸಿದ್ದರು.
ವಿಜಯಪುರ ಜಿಲ್ಲಾ ನಿರ್ದೇಶಕ ಸಂತೋಷ ಕುಮಾರ ಅವರು ಮಾತನಾಡಿ, ಧರ್ಮಸ್ಥಳ ಗ್ರಾಮಾಭಿವೃದ್ಧಿ ಸಂಸ್ಥೆಯಿಂದ ಹಲವಾರು ಅಭಿವೃದ್ಧಿ ಕಾರ್ಯಗಳಾಗುತ್ತಿದ್ದು, ಇದರಿಂದ ಗ್ರಾಮೀಣ ಭಾಗದ ಮಹಿಳೆಯರು ಆರ್ಥಿಕ, ಶೈಕ್ಷಣಿಕ, ಸಾಮಾಜಿಕವಾಗಿ ಸಬಲರಾಗುತ್ತಿರುವುದು ಶ್ಲಾಘನಿಯ ಎಂದರು.
ಯೋಜನೆಯ ಹಿನ್ನೆಲೆ, ಯೋಜನೆಯಲ್ಲಿ ಇರುವಂತಹ ಕಾರ್ಯಕ್ರಮಗಳ ಪರಿಚಯ ಮತ್ತು ಸೌಲಭ್ಯಗಳ ಬಗ್ಗೆ ಮಾಹಿತಿ ನೀಡಿದರು.
ಜಿಲ್ಲೆಯ ಲೆಕ್ಕಪರಿಶೋಧನಾ ವಿಭಾಗದ ಜಿಲ್ಲಾ ಪ್ರಬಂಧಕರು ಯಮನೂರಪ್ಪ ಇವರು ಮಾತನಾಡಿ, ಒಕ್ಕೂಟ ಎಂದರೆನು? ಅದರ ಉದ್ದೇಶಗಳು ಮತ್ತು ಅನುಕೂಲಗಳು ಒಕ್ಕೂಟದಿಂದಾಗುವ ಪ್ರಯೋಜನಗಳೇನು ಎಂಬುದನ್ನು ತಿಳಿಸಿದರು. ಒಕ್ಕೂಟದ ಪದಾಧಿಕಾರಿಗಳಿಗೆ ಇರಬೇಕಾದ ನಾಯಕತ್ವದ ಗುಣ ಲಕ್ಷಣಗಳು ಮುಂತಾದ ಜವಾಬ್ದಾರಿಯ ಕುರಿತು ತರಬೇತಿ ನೀಡಿದರು.
ತಾಲೂಕಿನ ಯೋಜನಾಧಿಕಾರಿ ಶಿವಾನಂದ ಪಿಲ್ಲರ್ ಅವರು ಮಾತನಾಡಿ, ಸ್ವಸಹಾಯ ಸಂಘದ ಸದಸ್ಯರ ಶಿಸ್ತುಬದ್ಧ ಆರ್ಥಿಕ ವ್ಯವಹಾರ, ಪ್ರತಿ 2 ತಿಂಗಳಿಗೊಮ್ಮೆ ಒಕ್ಕೂಟವಾರು ಒಕ್ಕೂಟ ಸಭೆ ನಡೆಸುವ ಬಗ್ಗೆ ತಿಳಿಸಿದರು,ಈ ಸಭೆಯಲ್ಲಿ ತಾಲೂಕಿನ ಆಂತರಿಕ ಲೆಕ್ಕಪರಿಶೋಧಕರು ಬಸವರಾಜ್ , ತಾಲೂಕಿನ ಕೃಷಿ ಅಧಿಕಾರಿ ದೇವೇಂದ್ರಪ್ಪ, ಸೇವಾಪ್ರತಿನಿಧಿಗಳು & ಸೇವಾದಾರರು ಉಪಸ್ಥಿತರಿದ್ದರು.
ವಲಯದ ಮೇಲ್ವಿಚಾರಕಿ ಕುಮಾರಿ ನೇತ್ರಾವತಿ ಎನ್.ಬಿ. ಸ್ವಾಗತಿಸಿ, ನಿರೂಪಿಸಿದರು.
ಧರ್ಮಸ್ಥಳ ಯೋಜನೆಯ ಒಕ್ಕೂಟ ಪದಾಧಿಕಾರಿಗಳ ಮಾಹಿತಿ ಕಾರ್ಯಾಗಾರ
