ಮುಂಗಡ ಹಣ ಕೊಡದ್ದಕ್ಕೆ ಒಬ್ಬನನ್ನು ಸರಪಳಿಯಿಂದ ಕಟ್ಟಿ ಹಾಕಿದ ಅಮಾನವೀಯ ಘಟನೆ : ಇಬ್ಬರ ಸೆರೆ

ಸಪ್ತಸಾಗರ ವಾರ್ತೆ, ವಿಜಯಪುರ, ಜು. 19:
ಕೆಲಸಕ್ಕೆ ಬರುವುದಾಗಿ ಮುಂಗಡ ಹಣ ಪಡೆದಿದ್ದನ್ನು ವಾಪಸ್ ಕೊಡದೇ ಇರುವುದಕ್ಕೆ ಹಣ ಪಡೆದ ವ್ಯಕ್ತಿಯನ್ನು ಇಬ್ಬರು ಸರಪಳಿಯಿಂದ ಕಟ್ಟಿ ಹಾಕಿದ ಅಮಾನವೀಯ ಘಟನೆ ಜಿಲ್ಲೆಯ ಚಡಚಣ ತಾಲೂಕಿನ ಹತ್ತಳ್ಳಿ ಗ್ರಾಮದಲ್ಲಿ ಶನಿವಾರ ನಡೆದಿದೆ.
ಚಡಚಣದ ಕುಮಾರ ಉರ್ಪ್ ಅರ್ಜುನ ಬಿರಾದಾರ, ಉಮರಾಣಿ ಗ್ರಾಮದ ಶ್ರೀಶೈಲ ಗಿರಿಯಪ್ಪ ಪೀರಗೊಂಡ ಅವರು ಬಂಧಿತ ಆರೋಪಿಗಳು.
ಚಡಚಣ ತಾಲೂಕಿನ ಹತ್ತಳ್ಳಿ ಗ್ರಾಮದ ಬಾಶಾಸಾಬ ಅಲ್ಲಾವುದ್ದೀನ್ ಮುಲ್ಲಾ ಎಂಬಾತ ಡ್ರೈವಿಂಗ್ ಕೆಲಸಕ್ಕೆ ಬರುವುದಾಗಿ 20,000 ರೂ. ಮುಂಗಡವಾಗಿ ಪಡೆದುಕೊಂಡಿದ್ದರು. ಕೆಲಸಕ್ಕೂ ಬಾರದೆ ಹಾಗೂ ಹಣವನ್ನು ವಾಪಸ್ ಕೊಡದೆ ಇರುವುದಕ್ಕೆ ಆರೋಪಿಗಳು ಕೋಪಗೊಂಡು ಭಾಷಾ ಸಾಬನ ಕಾಲಿಗೆ ಸರಪಳಿಯಿಂದ ಕಟ್ಟಿ ಹಾಕಿ ಅಮಾನವೀಯವಾಗಿ ನಡೆದುಕೊಂಡಿದ್ದರು.
ಸುದ್ದಿ ತಿಳಿದ ತಕ್ಷಣ ಪೊಲೀಸರು ಘಟನಾ ಸ್ಥಳಕ್ಕೆ ಧಾವಿಸಿ ಭಾಷಾಸಾಬನ ಕಾಲಿಗೆ ಕಟ್ಟಿದ ಸರಪಳಿ ಬಿಡಿಸಿ ರಕ್ಷಣೆ ಮಾಡಿದ್ದಾರೆ.

Share this