ಸಪ್ತಸಾಗರ ವಾರ್ತೆ ವಿಜಯಪುರ, ಮಾ. 11:
ಒತ್ತಡದ ಬದುಕಿನಲ್ಲಿ ನಿಮಗಾಗಿ ಸಮಯ ಕೊಡಿ. ನಿಮ್ಮ ಸಂಘದಿಂದ ಪ್ರತಿ ತಿಂಗಳಿನ ಒಂದು ದಿನ ಕಾರ್ಯಾಗಾರ ಆಯೋಜಿಸಿ ನಿಮ್ಮ ಮಕ್ಕಳನ್ನು ಎಲ್ಲ ದೃಷ್ಟಿಯಿಂದ ಸಂಸ್ಕಾರವಂತರನ್ನಾಗಿ ಮಾಡಿ ಎಂದು ಕರ್ನಾಟಕ ರಾಜ್ಯ ಸರಕಾರಿ ಮಹಿಳಾ ನೌಕರರ ಸಂಘ (ರಿ) ರಾಜ್ಯಾಧ್ಯಕ್ಷೆ ಲತಾ ಬಿರಾದಾರ ಅವರು ಹೇಳಿದರು.
ನಗರದ ಸಾಯಿ ರೆಸಿಡೆನ್ಸಿಯಲ್ಲಿ ಶ್ರೀ ಮಹಾಲಕ್ಷ್ಮಿ ಸ್ವಸಹಾಯ ಸಂಘ ಹಾಗೂ ಶ್ರೀ ಸರಸ್ವತಿ ಸ್ವಸಹಾಯ ಸಂಘಗಳ ಆಶ್ರಯದಲ್ಲಿ ಅಂತರಾಷ್ಟ್ರೀಯ ಮಹಿಳಾ ದಿನಾಚರಣೆ ಕಾರ್ಯಕ್ರಮದಲ್ಲಿ ಮುಖ್ಯ ಅತಿಥಿಗಳಾಗಿ ಅವರು ಮಾತನಾಡಿದರು.
ಉಪನ್ಯಾಸಕರಾಗಿ ಕವಿತಾ ಕಲ್ಲಾಣಪ್ಪಗೋಳ ಆಗಮಿಸಿದ್ದರು. ಅವಳಿ ಸಂಘಗಳ ಅಧ್ಯಕ್ಷೆ ಲಕ್ಷ್ಮಿ ಜಮಖಂಡಿ, ಆಶಾ ಒಡೆಯರ ಅಧ್ಯಕ್ಷತೆ ವಹಿಸಿದ್ದರು.
ಶಮಿತಾ ಶೆಟ್ಟಿ ಅವರು ಅತಿಥಿಗಳಾಗಿ ಆಗಮಿಸಿದ್ದರು. ಮಂಜುಳಾ ಸಾರವಾಡ ನಿರೂಪಿಸಿದರು. ಕುಬಕಡ್ಡಿ ಅವರು ಪ್ರಾಸ್ತಾವಿಕ ಭಾಷಣ ಮಾಡಿದರು. ಬಡಾವಣೆಯ ಮಹಿಳೆಯರಿಗೆ ಸಾಂಸ್ಕೃತಿಕ ಕಾರ್ಯಕ್ರಮ ಜರುಗಿದವು. ಉಪಾಧ್ಯಕ್ಷೆ ರೇಖಾ ಸಂಖ ಹಾಗೂ ಶ್ರೀದೇವಿ ಬಿರಾದಾರ ಇದ್ದರು.
ಉಪನ್ಯಾಸ ನೀಡಿದ ಕವಿತಾ ಅವರು ಮಹಿಳಾ ಸಬಲೀಕರಣದ ಕುರಿತು ಹೇಳಿದರು.
ಮಕ್ಕಳಿಗೆ ಒಳ್ಳೆಯ ಸಂಸ್ಕಾರ ನೀಡಿ: ಲತಾ ಬಿರಾದಾರ


