ಹತ್ತಿ ಖರೀದಿ ಕೇಂದ್ರದಲ್ಲಿ ಅಧಿಕಾರಿಯಿಂದ ರೈತರಿಗೆ ಅವಮಾನ: ರೈತರ ಪ್ರತಿಭಟನೆ

ಸಪ್ತಸಾಗರ ವಾರ್ತೆ, ವಿಜಯಪುರ, ನ. 24: ಹತ್ತಿ ಖರೀದಿ ಕೇಂದ್ರದಲ್ಲಿ ಆಗುತ್ತಿರುವ ಮೋಸ ಕುರಿತು ಸಿಸಿಐ ಅಧಿಕಾರಿ ಸಿದ್ದಲಿಂಗ ಮದರಕಿಂಡಿ ಅವರು ರೈತರಿಗೆ ಏಕ ವಚನದಲ್ಲಿ ಮಾತನಾಡುತ್ತ ಅನ್ಯಾಯ ಎಸಗಿ ಹತ್ತಿ ಸರಿ ಇಲ್ಲ ಎಂದು ಕಪಾಸ ಸೈಟ್ ಅಲ್ಲಿ ಹತ್ತಿ ಎಂದು ನಮೂದಿಸಿಲ್ಲ. ನಿಮ್ಮ ಹತ್ತಿ ತೆಗೆದುಕೊಳ್ಳುವುದಿಲ್ಲ ಎಂದು ಅಹಂಕಾರದಿಂದ ಮಾತನಾಡಿದ ಅಧಿಕಾರಿಯ ವಿರುದ್ಧ ಜಿಲ್ಲಾಧಿಕಾರಿ ಕಚೇರಿ ಮುಂದೆ ಹತ್ತಿ ಸುರಿವಿ ಹೋರಾಟ ಮಾಡಲಾಯಿತು.
ಸತತವಾಗಿ 3 ಘಂಟೆ ಹೋರಾಟದ ನಂತರ ಅಧಿಕಾರಿ ಸಿದ್ದಲಿಂಗ ಮದರಕಿಂಡಿ ಅವರನ್ನು ಕರೆಸಿ ಜಿಲ್ಲಾಧಿಕಾರಿ, ಜಿಲ್ಲಾ ಜಂಟಿ ಕೃಷಿ ಅಧಿಕಾರಿ, ಎ. ಪಿ. ಎಂ. ಸಿ ಅಧಿಕಾರಿಗಳನ್ನು ಸ್ಥಳಕ್ಕೆ ಕರೆಯಿಸಿ ಅವನಿಂದ ರೈತರಿಗೆ ತಪ್ಪಾಯಿತು ಎಂದು ಕೇಳಿ, ಯಾವುದೇ ರೈತರಿಗೆ ಅನ್ಯಾಯ ಮಾಡಬಾರದು ಹಾಗೂ ಮರ್ಯಾದೆ ಕೊಟ್ಟು ಮಾತನಾಡಬೇಕು. ರೈತರ ಜೀವನದ ಜೊತೆ ಚಲ್ಲಾಟ ಮಾಡಬಾರದು ಎಂದು ಎಚ್ಚರಿಕೆ ನೀಡಲಾಯಿತು.
ಎಲ್ಲಾ ಅಧಿಕಾರಿಗಳು ರೈತರೊಂದಿಗೆ ಸಹಕರಿಸಿ ಸಮಸ್ಯೆ ಬಗೆಹರೆಸುವುದಾಗಿ ಹೇಳಿದಾಗ ಹೋರಾಟ ಹಿಂಪಡೆಯಲಾಯಿತು.

Share this