ಒಳ ಮೀಸಲಾತಿ ಜಾರಿ ವಿರೋಧಿಸಿ ಉಗ್ರ ಪ್ರತಿಭಟನೆ

ಸಪ್ತಸಾಗರ ವಾರ್ತೆ,ವಿಜಯಪುರ, ಸೆ. 6 : ನಗರದ ಶ್ರೀ ಸಿದ್ದೇಶ್ವರ ದೇವಸ್ಥಾನದಿಂದ ಪ್ರಾರಂಭವಾಗಿ ಗಾಂಧಿ ಚೌಕ ಮಾರ್ಗವಾಗಿ ಬಸವೇಶ್ವರ ವೃತ್ತ ಅಂಬೇಡ್ಕರ್ ವೃತ್ತದ ಮೂಲಕ ಹಾಯ್ದು ಜಿಲ್ಲಾಧಿಕಾರಿಗಳಿಗೆ ತೆರಳಿ ಬಂಜಾರಾ ಭೋವಿ ಕೋರಚ ಕೋರಮ ಭಜಂತ್ರಿ ಸಮುದಾಯ ಸೇರಿಕೊಂಡು ತಮ್ಮ ಕುಲ ಕಸಬು ಪ್ರದರ್ಶನ ಮಾಡಿ ಉಗ್ರವಾಗಿ ಪ್ರತಿಭಟಿಸಿ ಮನವಿ ಸಲ್ಲಿಸಿದರು.
ಬಂಜಾರ ಸಮುದಾಯದ ಮುಖಂಡ ಮಹೇಂದ್ರಕುಮಾರ ನಾಯಕ ಮಾತನಾಡಿ, ಪರಿಶಿಷ್ಟ ಜಾತಿಯವರಿಗೆ ಒಳ ಮೀಸಲಾತಿ ನೀಡುವ ಸಂಬಂಧ ನಿವೃತ್ತ ನ್ಯಾ ಎಚ್.ಎನ್.ನಾಗಮೋಹನ್ ದಾಸ್‌ ಆಯೋಗದ ವರದಿ ಸಂಪೂರ್ಣ ಸುಳ್ಳು ವರದಿಯಾಗಿದ್ದು ಇದನ್ನು ಸಮುದಾಯ ತೀವ್ರವಾಗಿ ಖಂಡಿಸುತ್ತೇವೆ. ಸಮಾಜದಲ್ಲಿ ಎಲ್ಲಡೆ ತೀವ್ರ ವಿರೋಧ ವ್ಯಕ್ತವಾಗಿದೆ. ಸರ್ವೋಚ್ಚ ನ್ಯಾಯಾಲಯದ ಆದೇಶದ ಮೇರೆಗೆ ನಮ್ಮ ಕರ್ನಾಟಕ ರಾಜ್ಯದಲ್ಲಿ ೧೦೧ ಪರಿಶಿಷ್ಟ ಜಾತಿಗಳ ಹೋಮೋಜಿನಿಯಸ್ ಎಂಬ ಪದಕ್ಕೆ ಒಳಪಡಿಸಿ ಮತ್ತು ಜಾತಿಗಳ ದತ್ತಾಂಶಗಳನ್ನು ಕ್ರೋಢೀಕರಿಸಿ,ನೀಡಿರುವ ವರದಿ ಸಂವಿಧಾನದ ಆರ್ಟಿಕಲ ೩೪೧(೨) ರಂತ ಆಯೋಗಕ್ಕಾಗಲೀ ಅಥವಾ ರಾಜ್ಯ ಸರಕಾರಕ್ಕೆ ಮೀಸಲಾತಿ ಸೌಲಭ್ಯ ನೀಡಲು ಯಾವುದೇ ಅಧಿಕಾರವನ್ನು ಹೊಂದಿರುವುದಿಲ್ಲ. ವರದಿಯನ್ನು ಯಾವುದೇ ರೀತಿಯಿಂದ ತಾವು ಒಪ್ಪಿಕೊಳ್ಳದೆ ಹಾಗೂ ಮನ್ನಣೆ ಮಾಡದೇ ತಿರಸ್ಕಾರ ಮಾಡಬೇಕೆಂದು ತೀವ್ರವಾಗಿ ಆಗ್ರಹಿಸುತ್ತೇವೆ. ಅದಾಗಿ ಏಕಸದಸ್ಯ ಆಯೋಗದ ವರದಿಯ ಪ್ರಕಾರ ಐದು ವರ್ಗಗಳನ್ನು ವಿಂಗಡಿಸಿ, ಹಲವಾರು ಜಾತಿಗಳನ್ನು ಬೇರ್ಪಡಿಸಿ ಮತ್ತು ಆಯಾ ವರ್ಗಕ್ಕೆ ಮೀಸಲಾತಿ ಹಂಚಿರುವುದು ನಮ್ಮ ಸಮುದಾಯದಿಂದ ವಿರುದ್ಧವಾಗಿದ್ದು, ಕಾನೂನನಿನ ಯಾವುದೇ ರೀತಿಯಿಂದಲು ಪರಿಪಾಲಿಸದೇ, ಸುಪ್ರೀಂ ಕೋರ್ಟ್ ಆದೇಶಕ್ಕೆ ತದ್ವಿರುದ್ಧವಾಗಿರುತ್ತದೆ. ಯಾವ ನ್ಯಾಯಾಲಯಕ್ಕೂ ಅಥವಾ ರಾಜ್ಯ ಸರಕಾರಕ್ಕು ಜಾತಿಗಳನ್ನು ವಿಂಗಡಿಸುವುದು, ಸೇರಿಸುವುದು ಮತ್ತು ಗುಂಪುಗಳನ್ನು ಮಾಡುವ ಅಧಿಕಾರ ಇರುವುದಿಲ್ಲ ಈ ಮೂಲಕ ಆಕ್ರೋಶ ವ್ಯಕ್ತಪಡಿಸಿ ಮಾತನಾಡಿದರು.
ಇದೇ ಸಂದರ್ಭದಲ್ಲಿ ಭಜಂತ್ರಿ ಸಮುದಾಯದ ಜಿಲ್ಲಾಧ್ಯಕ್ಷ ರವೀಂದ್ರ ಜಾಧವ ಮಾತನಾಡಿ. ೧೦೧ ಜಾತಿಗಳ ಪೈಕಿ ಬಂಜಾರ (ಲಂಬಾಣಿ), ಭೋವಿ, ಕೊರಚ ಮತ್ತು ಕೊರಮ ಜಾತಿಗಳನ್ನು ೧೯೫೦ ರ ಅಧಿಸೂಚನೆಯಿಂದ ತೆಗೆದು ಹಾಕುವ ಬಗ್ಗೆ ವಿಚಾರಣೆ ನಡೆಸಲು ಅಂಬೇಡ್ಕರ ಭವನಕ್ಕೆ ಸಭೆಯನ್ನು ಕರೆಯಲಾಗಿತ್ತು. ಈ ವಿಚಾರವಾಗಿ ಮಾನ್ಯ ಕರ್ನಾಟಕ ಉಚ್ಚ ನ್ಯಾಯಾಲಯದಲ ಆ ಅಧಿಸೂಚನೆಯನ್ನು ಪ್ರಶ್ನಿಸಲಾಗಿ, ಮಧ್ಯಂತರ ತಡೆಯಾಜ್ಞೆಯನ್ನು ನೀಡಲಾಗಿತ್ತು. ಆ ತಡೆಯಾಜ್ಞೆಯಂತೆ ಆಯೋಗದ ಅಧಿಸೂಚನೆಯಲ್ಲಿ ಹೊರಡಿಸಿರುವ ಆದೇಶವನ್ನು ತೆಗೆದುಹಾಕಲಾಯಿತು. ಆದರೆ ಈಗ ನೀಡಿರುವ ವರದಿಯ ಪ್ರಕಾರ ೧೦೧ ಜಾತಿಗಳ ಪೈಕಿ ನಾಲ್ಕನೇ ಗುಂಪನ್ನು ವರ್ಗಿಕರಿಸಿ, ಮೇಲೆ ಹೇಳಿದ ಜಾತಿಗಳಾದ ಬಂಜಾರ (ಲಂಬಾಣಿ), ಭೋವಿ, ಕೊರಚ ಮತ್ತು ಕೊರಮ ಜಾತಿಗಳನ್ನು ‘ಡಿ’ ವರ್ಗದಲ್ಲಿ ಸೇರಿಸಿ ಆಯಾ ಜಾತಿಗಳಿಗೆ ಶೇ.೪ರಷ್ಟು ಮೀಸಲಾತಿಯನ್ನು ನೀಡಿರುವುದು ಆರ್ಟಿಕಲ ೩೪೧(೨) ಕ್ಕೆ ವಿರುದ್ಧವಾಗಿರುತ್ತದೆ ಹಾಗೂ ಭಜಂತ್ರಿ ಸಮುದಾಯ ತೀವ್ರ ಕಡು ಬಡತನದಿಂದ ಜೀವನ ಸಾಗಿಸುತ್ತಿದ್ದು ಸಮುದಾಯದ ಕುಲ ಕಸಬುಗಳನ್ನು ಕಳೆದುಕೊಂಡು ಹೀನಾಯಿ ಪರಿಸ್ಥಿತಿ ಅನುಭವಿಸುತ್ತಿದ್ದು ಇದನ್ನು ಸರಕಾರ ಪರಿಗಣಿಸಿ ಸಮುದಾಯಕ್ಕೆ ನ್ಯಾಯ ದೊರಕಿಸಿಕೊಡಬೇಕು ಎಂದು ತೀವ್ರ ಆಗ್ರಹಿಸುತ್ತೇವೆ ಎಂದರು.
ಭೋವಿ ಸಮುದಾಯದ ರಾಜ್ಯಾಧ್ಯಕ್ಷ ಲಕ್ಷ್ಮಣ ಭೋವಿ ಮಾತನಾಡಿ, ಸರಕಾರ ಆದೇಶಿಸಿರುವಂತ ಜಾತಿ ಗಣತಿಯಲ್ಲಿ ನಮ್ಮ ಸಮುದಾಯವನ್ನು ಪರಿಗಣಿಸದೆ ಸಮುದಾಯಕ್ಕೆ ತುಂಬಾ ಅನ್ಯಾಯ ಮಾಡಿದೆ ಈ ಸರಕಾರಕ್ಕೆ ಮುಂದಿನ ದಿನಮಾನದಲ್ಲಿ ತಕ್ಕ ಪಾಠ ಕಲಿಸುತ್ತೇವೆ. ಸಮುದಾಯದಲ್ಲಿ ಒಂದೊತ್ತಿನ ತುತ್ತಿಗಾಗಿ ಪರದಾಡುವ ಪರಿಸ್ಥಿತಿ ಸಮುದಾಯದಲ್ಲಿ ನಿರಂತರ ಇದ್ದು ಇದನ್ನು ಗಗನಕ್ಕೆ ತಗೆದುಕೊಳ್ಳದೆ ನಮ್ಮ ಸಮುದಾಯವನ್ನು ಒಳಮೀಸಲಾತಿಯಲ್ಲಿ ಪರಿಗಣಿಸಿದ್ದು ತೀವ್ರವಾಗಿ ಖಂಡಿಸುತ್ತೇವೆ ಎಂದರು.
ನಾಗಠಾಣ ಮಾಜಿ ಶಾಸಕ ದೇವಾನಂದ ಚವ್ಹಾಣ ಮಾತನಾಡಿ, ಸಿದ್ದರಾಮಯ್ಯ ರಾಜ್ಯ ಸರಕಾರ ತೀವ್ರವಾಗಿ ಹಿಂದುಳಿದ ಸಮುದಾಯಗಳನ್ನು ಬಿಟ್ಟು ಆರ್ಥಿಕವಾಗಿ ಸುದಾರಣೆಗೆ ಬಂದಿರುವ ಸಮುದಾಯವನ್ನು ಶೇ.6 ಒಳಮೀಸಲಾತಿ ನ್ಯಾಯ ನೀಡಿ ತೀವ್ರವಾಗಿ ಹಿಂದುಳಿದ ಸಮುದಾಯಕ್ಕೆ 63 ಸಮುದಾಯಕ್ಕೆ ಶೇ. 5ರಷ್ಟು ನೀಡಿ ತುಂಬಾ ಅನ್ಯಾಯ ಮಾಡಿದೆ. ಬಂಜಾರ ಸಮುದಾಯ ಗುಳೆ ಹೋಗದೆ ಉಪಜೀವನ ನಡೆಯುವುದಿಲ್ಲ. ಇಂತಹ ಸಮುದಾಯವನ್ನು ಯಾವುದೋ ಮೂಲೆಯಲ್ಲಿ ಕುಳಿತು ರಚಿಸಿರುವ ವರದಿಯನ್ನು ಪರಿಗಣಿಸಿ ತರಾತುರಿಯಲ್ಲಿ ಜಾರಿಗೆ ತಂದಿದ್ದು ತುಂಬಾ ಅನ್ಯಾಯವಾಗಿದೆ ಎಂದರು.
ಬಂಜಾರ ಮುಖಂಡ ರಾಜು ಜಾಧವ ಮಾತನಾಡಿ, ಈ ಹೋರಾಟ ಟ್ರಾಯಲ್ ಇದೆ. ಇನ್ನೂ ಪಿಚ್ಚರ ಬಾಕಿ ಇದೆ. ಮುಂದಿನ ದಿನಮಾನದಲ್ಲಿ ಸಮಾಜ ತಮಗೆ ಹಂತ ಹಂತವಾಗಿ ಪಾಠ ಕಲಿಸುತ್ತದೆ. ಮುಗ್ದ ಬಂಜಾರ ಸಮುದಾಯ ಗೂಳೆಯ ಮೇಲೆ ಅವಲಂಬನೆ ಇದ್ದು, ಸಮುದಾಯವನ್ನು ಹತ್ತಿಕ್ಕುವ ಹುನ್ನಾರ ಮಾಡುತ್ತಿರುವ ಕಾಂಗ್ರೆಸ್ ಸರಕಾರಕ್ಕೆ ನಮ್ಮ ಬಂಜಾರ ಸಮುದಾಯ ಮುಂದಿನ ಚುನಾವಣೆಯಲ್ಲಿ ಪಾಠ ಕಲಿಸುತ್ತೇವೆ ಎಂದರು.
ಡಾ. ಅರವಿಂದ ಜಾಧವ ಅರೆಬೆತ್ತಲೆ ಮೂಲಕ ಪಾದರಕ್ಷೆಗಳನ್ನು ತಲೆಯ ಮೇಲೆ ಹೊತ್ತು ಸಂಪೂರ್ಣ ಹೋರಾಟದಲ್ಲಿ ಕಾಂಗ್ರೆಸ್ ಸರಕಾರ ವಿರುದ್ಧ ಧಿಕ್ಕಾರ ಕೂಗಿ ಆಕ್ರೋಶ ಹೊರ ಹಾಕಿದರು.
ಈ ಹೋರಾಟದಲ್ಲಿ ಸಿದ್ದಲಿಂಗ ಸ್ವಾಮೀಜಿ, ಕೆಸರಹಟ್ಟಿ ಸೋಮಲಿಂಗ ಸ್ವಾಮೀಜಿ, ಸಂಜು ಮಹಾರಾಜ,ಗೋಪಾಲ ಮಹಾರಾಜ,ಪ್ರಕಾಶ ಮಹಾರಾಜ,ಭೀಮು ಮಹಾರಾಜ, ಮಾಜಿ ಶಾಸಕರಾದ ಮನೋಹರ ಐನಾಪುರ, ದೇವಾನಂದ ಚವ್ಹಾಣ, ಮುಖಂಡರಾದ ಮಹೀಂದ್ರಾ ನಾಯಕ, ರಾಜಪಾಲ ಚವ್ಹಾಣ, ರಾಜು ಎಲ್ ಜಾಧವ, ರಾಜು ಚವ್ಹಾಣ, ಭಜಂತ್ರಿ ಸಮಾಜದ ಜಿಲ್ಲಾಧ್ಯಕ್ಷ ರವೀಂದ್ರ ಜಾಧವ, ಸಂತೋಷ ಚವ್ಹಾಣ, ಕೊಂಚಿಕೊರವ ಸಮಾಜದ ಅಬ್ದುಲ್ ಕೊಂಚಿಕೊರವ, ಈರಪ್ಪ ಕೊಂಚಿಕೊರವ, ಕೆಂಚಪ್ಪ ಕೊಂಚಿಕೊರವ, ಭೋವಿ ಸಮಾಜದ ರಾಜ್ಯಾಧ್ಯಕ್ಷರಾದ ಲಕ್ಷ್ಮಣ ಭೋವಿ, ಮಲ್ಲಿಕಾರ್ಜುನ ನಾಯಕ, ಡಾ. ಬಾಬುರಾಜೇಂದ್ರ ನಾಯಕ, ಚಂದ್ರು ರಾಠೋಡ್, ಡಾ. ಅರವಿಂದ ಲಮಾಣಿ, ಸಂಜು ಚವ್ಹಾಣ, ಶಿವಾನಂದ ಲಮಾಣಿ ಮುದ್ದೇಬಿಹಾಳ, ಪ್ರವೀಣ ಚವ್ಹಾಣ, ನರಸಿಂಗ್ ರಾಠೋಡ, ಬಹಾದ್ದೂರ್ ರಾಠೋಡ, ಅನಿಲ ನಾಯಕ, ಕೇಸು ರಾಠೋಡ,ಸಂತೋಷ್ ನಾಯಕ, ಪ್ರೇಮ ಕಾರಜೋಳ, ಸುರೇಶ ಬಿಜಾಪುರ, ಡಾ. ರವಿದಾಸ ಜಾಧವ, ಪರಮೇಶ ನಾಯಕ, ಅನುಸೂಯ ಜಾಧವ, ಶಾರದಾಬಾಯಿ ಲಮಾಣಿ, ಕಸ್ತೂರಿಬಾಯಿ ದೊಡಮನಿ, ಅರುಣ ನಾಯಕ, ಬಾಬು ಚವ್ಹಾಣ, ಮಹಾದೇವ ರಾಠೋಡ, ಸೋಮು ರಾಠೋಡ, ರಾಜು ರಾಠೋಡ, ಪುಂಡಲೀಕ ರಾಠೋಡ, ಅಶೋಕ ಪವಾರ ಸೇರಿದಂತೆ ಸಾವಿರಾರು ಸಂಖ್ಯೆಯಲ್ಲಿ ಹೋರಾಟಗಾರರು ತಮ್ಮ ಕುಲಕಸುಬಿನ ಸಾಮಗ್ರಿಗಳೊಂದಿಗೆ ಭಾಗವಹಿಸಿ ಸರ್ಕಾರದ ವಿರುದ್ದ ಘೋಷಣೆ ಕೂಗಿ ಆಕ್ರೋಶ ವ್ಯಕ್ತಪಡಿಸಿದರು

Share this