ವಿಜಯಪುರ ಜಿಲ್ಲೆಯಲ್ಲಿ ಸಂಭ್ರಮದ ಗಣೇಶೋತ್ಸವ

ಸಪ್ತಸಾಗರ ವಾರ್ತೆ ವಿಜಯಪುರ, ಆ. 27:
ದೇಶದ ಎಲ್ಲೆಡೆಯಂತೆ ಐತಿಹಾಸಿಕ ಗುಮ್ಮಟ ನಗರಿ ವಿಜಯಪುರದಲ್ಲಿ ಗಣೇಶ್ ಉತ್ಸವವನ್ನು ಸಂಭ್ರಮ ಸಡಗರದಿಂದ ಬುಧವಾರ ಆಚರಿಸಲಾಯಿತು.
ಚಿಕ್ಕ ಗಣಪತಿ ಮೂರ್ತಿ ಸೇರಿದಂತೆ ಬೃಹತ್ ಗಾತ್ರದ ಗಣಪತಿ ಮೂರ್ತಿಗಳನ್ನು ವಿವಿಧ ಗಣೇಶೋತ್ಸವ ಮಂಡಳಿಯವರು ಮುಂಚಿತವಾಗಿ ಗಣಪತಿ ಮೂರ್ತಿಗಳನ್ನು ಬುಕಿಂಗ್ ಮಾಡಿದ್ದರು. ಗುರುವಾರ ಗಣೇಶ್ ಚತುರ್ಥಿ ನಿಮಿತ್ತ ಬೆಳ್ಳಂ ಬೆಳಿಗ್ಗೆ ವಿವಿಧ ಗಜಾನನ ಮಂಡಳಿಗಳ ಮುಖಂಡರು ಮಾರುಕಟ್ಟೆಗೆ ಆಗಮಿಸಿ ತಾವು ಮುಂಚಿತವಾಗಿ ಆರ್ಡರ್ ಮಾಡಿದ್ದ ಗಣಪತಿ ಮೂರ್ತಿಗಳನ್ನು ಕಾರು ಟ್ರ್ಯಾಕ್ಟರ್ ಜೀಪಿನಲ್ಲಿ ಅದ್ದೂರಿ ಮೆರವಣಿಗೆ ಮೂಲಕ ಗಣೇಶ್ ಮೂರ್ತಿ ಪ್ರತಿಷ್ಠಾಪನೆ ವೇದಿಕೆ ಕಡೆಗೆ ತೆಗೆದುಕೊಂಡು ಹೋಗುವುದು ಎಲ್ಲೆಲ್ಲೂ ಕಂಡು ಬಂತು. ಡಿಜೆ ಸದ್ದು ಸದ್ದಿಗೆ ತಕ್ಕಂತೆ ಯುವಕರು ನೃತ್ಯ ಮಾಡುತ್ತಿರುವುದು ಸಾರ್ವಜನಿಕರ ಗಮನ ಸೆಳೆಯಿತು. ಪಟಾಕಿ ಸಿಡಿಸುತ್ತಾ ಮೆರವಣಿಗೆ ಮುಂದೆ ಕುಣಿಯುತ್ತ ಯುವಕರ ದಂಡು ಗಣಪತಿ ಮೂರ್ತಿಗಳನ್ನು ತೆಗೆದುಕೊಂಡು ಹೋಗಿ ತಮ್ಮ ಬಡಾವಣೆಗಳಲ್ಲಿ ಪ್ರತಿಷ್ಠಾಪನೆ ಮಾಡಿದರು.
ನಗರದ ರಸ್ತೆಗಳಲ್ಲಿ ಭಾರಿ ಜನಸಂದಣಿ ನೆರೆದಿತ್ತು. ಪೊಲೀಸರು ಅಲ್ಲಲ್ಲಿ ಬ್ಯಾರಿ ಕೇಡಗಳನ್ನು ಅಡ್ಡವಿಟ್ಟು ಪರ್ಯಾಯವಾಗಿ ವಾಹನ ಸಂಚಾರಕ್ಕೆ ವ್ಯವಸ್ಥೆ ಮಾಡಿದ್ದರು.

Share