ಸಪ್ತಸಾಗರ ವಾರ್ತೆ ವಿಜಯಪುರ, ಸೆ.30: ನಗರದ ಮನಗೂಳಿ ರಸ್ತೆಯ ಇಬ್ರಾಹಿಂಪುರದಲ್ಲಿ ನಾಡದೇವಿ ನವರಾತ್ರಿ ಉತ್ಸವದ ಅಂಗವಾಗಿ ಶ್ರೀ ಮಲ್ಲಿಕಾರ್ಜುನ ಆದಿಶಕ್ತಿ ಯುವಕ ಮಂಡಳಿ ವತಿಯಿಂದ ಸೋಮವಾರ ರಾತ್ರಿ ರಸಮಂಜರಿ ಕಾರ್ಯಕ್ರಮ ಹಮ್ಮಿಕೊಳ್ಳಲಾಗಿತ್ತು.
ಕಲಾ ಸಿಂಚನ ಮೆಲೋಡಿಸ್ ತಂಡದ ಕಲಾವಿದರಾದ ಗೋಪಾಲ ಹೂಗಾರ, ಗೋಪಾಲ ಇಂಚಗೇರಿ, ಮಲ್ಲು ಮುದ್ದೇಬಿಹಾಳ, ಮ್ಯೂಜಿಕ್ ಮೈಲಾರಿ, ಲಕ್ಷ್ಮೀ ಬಿಜಾಪುರ, ಶ್ರೀಶೈಲ ಜುಮನಾಳ, ಗಾಯಕ ಕೃಷ್ಣಾ ಅವರು ಪ್ರಸಿದ್ಧ ಜಾನಪದ ಹಾಗೂ ದೇಶಭಕ್ತಿಯ ಹಾಡುಗಳನ್ನು ಹಾಡಿ, ಹಾಸ್ಯ ಚಟಾಕಿಗಳನ್ನು ಹಾರಿಸಿ ಜನಮನ ರಂಜಿಸಿದರು.
ಡಾನ್ಸರ್ ಪೂಜಾ ಡಿಕೆಡಿ ಅವರ ಡ್ಯಾನ್ಸ್ ಪಡ್ಡೆ ಹುಡುಗರನ್ನು ಹುಚ್ಚೆಬ್ಬಿಸಿ ಸಿಳ್ಳೆ, ಕೇಕೆ ಹಾಕುವಂತೆ ಮಾಡಿತು.
ಕಾರ್ಯಕ್ರಮ ವೀಕ್ಷಿಸಲು ಮಹಿಳೆಯರೂ ಸೇರಿದಂತೆ ಸಾರ್ವಜನಿಕರು ಕಿಕ್ಕಿರಿದು ಸೇರಿದ್ದರು.
ರಸಮಂಜರಿ ಕಾರ್ಯಕ್ರಮವನ್ನು ವಿಧಾನ ಪರಿಷತ್ ಮಾಜಿ ಸದಸ್ಯ ಅರುಣ ಶಹಾಪುರ ಉದ್ಘಾಟಿಸಿದರು. ಮಹಾನಗರ ಪಾಲಿಕೆ ಸದಸ್ಯ ಕುಮಾರ ಗಡಗಿ ಅಧ್ಯಕ್ಷತೆ ವಹಿಸಿದ್ದರು.
ಪ್ರಭು ಹಿರೇಮಠ ಸಾನ್ನಿಧ್ಯ ವಹಿಸಿದ್ದರು. ಮುಖ್ಯ ಅತಿಥಿಗಳಾಗಿ ಬಿಜೆಪಿ ಜಿಲ್ಲಾಧ್ಯಕ್ಷ ಗುರಲಿಂಗಪ್ಪ ಅಂಗಡಿ, ಜಲನಗರ ಪಿಎಸ್ಐ ಮಹೇಶ ಸಂಖ, ಗ್ರಾಮದ ಹಿರಿಯರಾದ ಚನ್ನಬಸಪ್ಪ ಬಗಲಿ, ಗಿರಮಲ್ಲಪ್ಪ ನುಚ್ಚಿ, ಸೂರ್ಯಕಾಂತ ಗಡಗಿ ಭಾಗವಹಿಸಿದ್ದರು,
ಶ್ರೀ ಮಲ್ಲಿಕಾರ್ಜುನ ಆದಿಶಕ್ತಿ ಯುವಕ ಮಂಡಳಿಯ ಸಂಪತ್ ಕೋವಳ್ಳಿ, ಬಸವರಾಜ ಹಳ್ಳಿ, ಸುನೀಲ ನುಚ್ಚಿ, ಶಿವಾನಂದ ನುಚ್ಚಿ, ಸಂತೋಷ ಪಾಟೀಲ, ರಮೇಶ ಜುಮನಾಳ, ಕಲ್ಲಪ್ಪ ಜುಮನಾಳ, ರಾಜು ಜುಮನಾಳ, ಮಂಜು ಹಳ್ಳಿ, ರೇವಣಕುಮಾರ ಬಗಲಿ, ನವೀನಕುಮಾರ ಜುಮನಾಳ, ಪ್ರವೀಣ ಹಳ್ಳಿ, ರುದ್ರಪ್ಪ ಜುಮನಾಳ, ಶಂಕರ ಡಂಬಳ, ಅಪ್ಪು ಜುಮನಾಳ, ಬಾಬು ಅಗಸರ, ವಿನೋದ ನುಚ್ಚಿ ಮುಂತಾದವರು ಉಪಸ್ಥಿತರಿದ್ದರು.
ಇಬ್ರಾಹಿಂಪುರದಲ್ಲಿ ಸಂಭ್ರಮದ ನಾಡದೇವಿ ಉತ್ಸವ


