ಬಿಜೆಪಿ ವತಿಯಿಂದ ಕನಕ ಜಯಂತಿ

ಸಪ್ತಸಾಗರ ವಾರ್ತೆ, ವಿಜಯಪುರ, ನ. 8 : ಭಾರತೀಯ ಜನತಾ ಪಕ್ಷದ ಜಿಲ್ಲಾ ಘಟಕದ ವತಿಯಿಂದ ಭಕ್ತ ಕನಕದಾಸರ ಜಯಂತೋತ್ಸವವನ್ನು ಆಚರಿಸಲಾಯಿತು. ಬಿಜೆಪಿ ಕಾರ್ಯಾಲಯದಲ್ಲಿ ಭಕ್ತ ಕನಕದಾಸರ ಭಾವಚಿತ್ರಕ್ಕೆ ಪುಷ್ಪಾಂಜಲಿ ಸಲ್ಲಿಸಿ ಪೂಜೆ ಸಲ್ಲಿಸಲಾಯಿತು. ನಂತರ ಕನಕದಾಸರ ವೃತ್ತಕ್ಕೆ ತೆರಳಿದ ಕಾರ್ಯಕರ್ತರು ಕನಕದಾಸರ ವೃತ್ತಕ್ಕೆ ಮಾಲಾರ್ಪಣೆ ಮಾಡಿ ಗೌರವಿಸಿದರು.
ಈ ಸಂದರ್ಭದಲ್ಲಿ ಮಾತನಾಡಿದ ಬಿಜೆಪಿ ಜಿಲ್ಲಾಧ್ಯಕ್ಷ ಗುರುಲಿಂಗಪ್ಪ ಅಂಗಡಿ ಮಾತನಾಡಿ, ಕನಕದಾಸರು ಶ್ರೇಷ್ಠ ದೈವಭಕ್ತರು, ಅವರಲ್ಲಿರುವ ಅದಮ್ಯ ದೈವ ಭಕ್ತಿ ಪ್ರತಿಯೊಬ್ಬರಿಗೂ ಸ್ಪೂರ್ತಿ, ಕನಕದಾಸರ ಶ್ರೇಷ್ಠ ಭಕ್ತಿಗೆ ಕೇಶವ ಮೆಚ್ಚಿಕೊಂಡಿದ್ದ, ಅವರು ರಚಿಸಿದ ಕೀರ್ತನೆಗಳು ಉದಾತ್ತ ಜೀವನ ನಡೆಸಲು ದಾರಿದೀಪವಾಗಿವೆ ಎಂದರು.
ಕೀರ್ತನೆ ಅಂದ್ರೆ ಪರಮಾತ್ಮನ ಕೀರ್ತಿಯನ್ನ ಆರಾಧಿಸುವಂತಹ ಭಜನೆಗಳು. ಈ ಕೀರ್ತನೆಗಳ ಮೂಲಕ ಕನಕದಾಸರು ಉದಾತ್ತ ಸಮಾಜ ನಿರ್ಮಾಣಕ್ಕಾಗಿ ಮಾರ್ಗದರ್ಶಿಯಾಗಿದ್ದಾರೆ, ಕನಕದಾಸರ ಚಿಂತನೆಯನ್ನು ನಾವು ಅಳವಡಿಸಿಕೊಂಡು ಜೀವನದಲ್ಲಿ ಮುನ್ನಡೆಯಬೇಕು ಎಂದರು.
ಮಾಜಿ ಸಚಿವ ಅಪ್ಪಾಸಾಹೇಬ ಪಟ್ಟಣಶೆಟ್ಟಿ, ವಿಧಾನ ಪರಿಷತ್ ಮಾಜಿ ಸದಸ್ಯ ಅರುಣ ಶಹಾಪೂರ, ಮೇಯರ್ ಎಂ.ಎಸ್. ಕರಡಿ, ಬಿಜೆಪಿ ಮುಖಂಡರಾದ ಚಂದ್ರಶೇಖರ ಕವಟಗಿ, ಉಮೇಶ ಕಾರಜೋಳ, ಭೀಮಾಶಂಕರ ಮುಳುಗೌಡ ಪಾಟೀಲ್ ಈರಣ್ಣ ರಾವುರ್ ಹದನೂರ, ಡಾ.ಸುರೇಶ ಬಿರಾದಾರ, ಸಂಜಯ ಪಾಟೀಲ ಕನಮಡಿ, ಕೃಷ್ಣಾ ಗುನ್ನಾಳಕರ, ಸಂದೀಪ ಪಾಟೀಲ, ವಿಜಯ ಜೋಶಿ, ಪಾಪುಸಿಂಗ್ ರಜಪೂತ, ಮಲ್ಲಿಕಾರ್ಜುನ ಜೋಗೂರ, ಚಿದಾನಂದ ಚಲವಾದಿ, ಬಸವರಾಜ ಹಳ್ಳಿ, ಚಿನ್ನು ಚಿನಗುಂಡಿ, ವಿಕಾಸ ಪದಕಿ, ರಾಜೇಶ ತಾವಸೆ, ಪಾಲಿಕೆ ಸದಸ್ಯರಾದ ಶಿವರುದ್ರ ಬಾಗಲಕೋಟ, ರಾಹುಲ್ ಜಾಧವ, ಜವಾಹರ ಗೋಸಾವಿ, ವಿಠ್ಠಲ ಹೊಸಪೇಟಿ, ಸಿದ್ಧು ಮಲ್ಲಿಕಾರ್ಜುನಮಠ, ಸಂತೋಷ ನಿಂಬರಗಿ, ಸಂಪತ್ ಕೋವಳ್ಳಿ ಮತ್ತಿತರರು ಇದ್ದರು.

Share this