ಕಾನಿಪ ಸಂಘದ ಚುನಾವಣೆ:

ಕಡೆ ದಿನ 39 ನಾಮಪತ್ರ ಸಲ್ಲಿಕೆ
ಸಪ್ತಸಾಗರ ವಾರ್ತೆ, ವಿಜಯಪುರ, ಅ. 28:
ಕರ್ನಾಟಕ ಕಾರ್ಯನಿರತ ಪತ್ರಕರ್ತರ ಸಂಘದ ಜಿಲ್ಲಾ ಚುನಾವಣೆಗೆ ಸ್ಪರ್ಧೆ ಕೋರಿ ಅ. 27ರಂದು ಕಡೆ ದಿನ ಮಧ್ಯಾಹ್ನ 3 ಗಂಟೆವರೆಗೆ 25 ವಿವಿಧ ಸ್ಥಾನಗಳಿಗೆ ಒಟ್ಟು 39 ನಾಮಪತ್ರ ಸಲ್ಲಿಕೆಯಾಗಿದ್ದು, ರಾಜ್ಯ ಕಾರ್ಯಕಾರಣಿ ಒಂದು ಸ್ಥಾನಕ್ಕೆ ನಾಲ್ಕು ನಾಮಪತ್ರ, ಜಿಲ್ಲಾ ಅಧ್ಯಕ್ಷ ಒಂದು ಸ್ಥಾನಕ್ಕೆ ಎರಡು ನಾಮಪತ್ರ, ಪ್ರಧಾನ ಕಾರ್ಯದರ್ಶಿ ಒಂದು ಸ್ಥಾನಕ್ಕೆ ಒಂದು ನಾಮಪತ್ರ, ಜಿಲ್ಲಾ ಉಪಾಧ್ಯಕ್ಷ ಮೂರು ಸ್ಥಾನಕ್ಕೆ ಆರು ನಾಮಪತ್ರ, ಜಿಲ್ಲಾ ಕಾರ್ಯದರ್ಶಿ ಮೂರು ಸ್ಥಾನಕ್ಕೆ ಐದು ನಾಮಪತ್ರ, ಜಿಲ್ಲಾ ಖಜಾಂಚಿ ಒಂದು ಸ್ಥಾನಕ್ಕೆ ಒಂದು ನಾಮಪತ್ರ, ಜಿಲ್ಲಾ ಕಾರ್ಯಕಾರಿಣಿ 15 ಸ್ಥಾನಕ್ಕೆ ಇಪ್ಪತ್ತು ನಾಮಪತ್ರ ಸಲ್ಲಿಕೆ ಹೀಗೆ ಒಟ್ಟು 39 ನಾಮಪತ್ರ ಸಲ್ಲಿಕೆಯಾಗಿವೆ ಎಂದು ವಿಜಯಪುರ ಜಿಲ್ಲಾ ಚುನಾವಣಾಧಿಕಾರಿ ಟಿ.ಕೆ.ಮಲಗೊಂಡ ಪತ್ರಿಕಾ ಪ್ರಕಟಣೆಯಲ್ಲಿ ತಿಳಿಸಿದ್ದಾರೆ.
ಅ. 28 ರಂದು ನಾಮಪತ್ರ ಪರಿಶೀಲನೆ, 30ರಂದು ಬೆಳಿಗ್ಗೆ 11 ರಿಂದ ಮಧ್ಯಾಹ್ನ 3 ಗಂಟೆವರೆಗೆ ನಾಮಪತ್ರ ವಾಪಸ್ ಪಡೆಯಲು ಕಾಲಾವಕಾಶ ಇದೆ. ನವೆಂಬರ್ 9ರಂದು ಬೆಳಿಗ್ಗೆ 9 ರಿಂದ ಮಧ್ಯಾಹ್ನ 3 ಗಂಟೆವರೆಗೆ ಮತದಾನ ನಡೆಯಲಿದೆ. ಅಂದೇ ಮಧ್ಯಾಹ್ನ 3-30 ಗಂಟೆಗೆ ಮತ ಎಣಿಕೆ ಕಾರ್ಯ ನಡೆಯಲಿದೆ ಎಂದು ಹಿರಿಯ ಪತ್ರಿಕೋದ್ಯಮಿ ಹಾಗೂ ಜಿಲ್ಲಾ ಚುನಾವಣಾಧಿಕಾರಿ ಟಿ.ಕೆ. ಮಲಗೊಂಡ ತಿಳಿಸಿದ್ದಾರೆ.

Share this