ಸಪ್ತಸಾಗರ ವಾರ್ತೆ, ವಿಜಯಪುರ, ನ. 23 : ಕನ್ನಡ ಭಾಷೆಯ ಅಭಿಮಾನ ಇಟ್ಟುಕೊಳ್ಳಬೇಕು. ಈ ನಾಡಿನಲ್ಲಿ ಕನ್ನಡ ಕಡ್ಡಾಯಗೊಳಿಸಬೇಕು. ಕನ್ನಡ ನಮ್ಮೆಲ್ಲರ ಉಸಿರಾಗಬೇಕೆಂದು ವಿಜಯಪುರ ಅಕ್ಕಮಹಾದೇವಿ ಮಹಿಳಾ ವಿಶ್ವವಿದ್ಯಾಲಯದ ಮಹಿಳಾ ಅಧ್ಯಯನ ವಿಭಾಗ ಮುಖ್ಯಸ್ಥೆ ಡಾ. ಲಕ್ಷ್ಮಿದೇವಿ ಅಲ್ಕೋಡ ಅಭಿಪ್ರಾಯ ವ್ಯಕ್ತಪಡಿಸಿದರು.
ರವಿವಾರ ಜಿಲ್ಲಾ, ತಾಲೂಕ ಹಾಗೂ ನಗರ ಘಟಕ ಕನ್ನಡ ಸಾಹಿತ್ಯ ಪರಿಷತ್ತು ವಿಜಯಪುರ ಆಶ್ರಯದಲ್ಲಿ ಜರುಗಿದ ದತ್ತಿಗಳಾದ ದಿ. ಜಿ.ಎಸ್. ಬಗಲಿ ದತ್ತಿ, ದಿ.ಮಲ್ಲಪ್ಪ ಚಂದಪ್ಪ ಯಲಗೋಡ. ದತ್ತಿ, ದಿ. ಶಿವಮೂತೆ೯ಪ್ಪ ಪಾಟೀಲ ದತ್ತಿ. ಮಾತೋಶ್ರೀ ಗೌರಮ್ಮ ಸಿದ್ರಾಮಪ್ಪ ವಾಡೇದ ದತ್ತಿ ಕಾರ್ಯಕ್ರಮ ಉದ್ಘಾಟಿಸಿ ಮಾತನಾಡಿ, ಕನ್ನಡ ಭಾಷೆಯ ಏಳಿಗೆಗಾಗಿ ಶ್ರಮಿಸಿದ ಸಾಹಿತಿಗಳು, ಕವಿಗಳು, ಲೇಖಕರು, ಪತ್ರಿಕೆಗಳು, ಕನ್ನಡಪರ ಹೋರಾಟಗಾರರು, ಅಭಿಮಾನಿಗಳು ಮುಂತಾದವರು ಕನ್ನಡ ನಾಡು ನುಡಿ. ನೆಲ ಜಲ ಮುಂತಾದವರು ಕನ್ನಡ ಭಾಷೆಯನ್ನು ಉಳಿಸಿ ಬೆಳೆಸಬೇಕು ಎಂದರು.
ಸಭೆಯ ಅಧ್ಯಕ್ಷತೆ ವಹಿಸಿದ ಬಬಲೇಶ್ವರ ಇಂದಿರಾ ವಸತಿ ಶಾಲೆಯ ಪ್ರಾಚಾರ್ಯ ಸುಮಾ ವಗ್ಗಿ ಮಾತನಾಡಿ, ಕನ್ನಡ ನಮ್ಮೆಲ್ಲರ ಅನ್ನದ ಹಾಗೂ ಆಡಳಿತ ಭಾಷೆಯಾಗಿದ್ದರಿಂದ ಕನ್ನಡ ಕಡ್ಡಾಯ ಶಿಕ್ಷಣ ಮೂಲಕ ಭಾಷೆಯ ಅಭಿವೃದ್ಧಿಗೊಳಿಸಬೇಕು .ಕನ್ನಡ ಅತ್ಯಂತ ಪ್ರಾಚೀನ ಭಾಷೆಯಾಗಿದೆ. ಕನಾ೯ಟಕದ ವಿವಿಧ ಪ್ರಾಂತಗಳಲ್ಲಿ ಭಾಷೆಯ ಬಳಕೆ ವಿಭಿನ್ನವಾದರೂ ಕನ್ನಡಿಗರು ಸ್ವಾಭಿಮಾನದಿಂದ ಬದಕುತ್ತಿದ್ದಾರೆ ಎಂದರು.
ಅಂಬಿಗೇರ ಚೌಡಯ್ಯ ಕುರಿತು ಕೆ.ಜಿ.ಎಂ ಪಿ.ಎಸ್. ಶಿವಣಗಿ ಶಾಲೆಯ ಶಿಕ್ಷಕ ಎಸ್.ಬಿ. ರೆಡ್ಡಿ ಉಪನ್ಯಾಸ ನೀಡಿ, ಕಂಡಂತೆ ಕಠೋರವಾಗಿ ಹೇಳಿದ ವಚನಕಾರ ಅಂಬಿಗೇರ ಚೌಡಯ್ಯ. ಡಾಂಭಿಕತನದ ಜೀವನಕ್ಕೆ ಕಟುವಾಗಿ ಟೀಕಿಸಿದ ನಿಜಶರಣ ಅಂಬಿಗೇರ ಚೌಡಯ್ಯ ಎಂದರು.
ಕನ್ನಡ ಸಾಹಿತ್ಯ ಕುರಿತು ಸಿಂದಗಿ ಮಕ್ಕಳ ಸಾಹಿತ್ಯ ಪರಿಷತ್ತಿನ ಅಧ್ಯಕ್ಷ ಅಶೋಕ ಬಿರಾದಾರ ಉಪನ್ಯಾಸ ನೀಡಿ ಮಾತನಾಡಿ, ಕನ್ನಡ ಭಾಷೆಗೆ ಎರಡು ಸಾವಿರ ವಷ೯ಗಳ ಇತಿಹಾಸ ಇದೆ. ಕವಿರಾಜಮಾರ್ಗ, ಹಲ್ಮಿಡಿ ಶಾಸನ, ವಡ್ಡಾರಾಧನೆ ಗ್ರಂಥಗಳು ಕನ್ನಡ ಸಾಹಿತ್ಯ ಕ್ಷೇತ್ರಕ್ಕೆ ಅಪಾರವಾದ ಕೊಡುಗೆ ನೀಡಿವೆ ಎಂದರು.
ದತ್ತಿ ದಾನಿಗಳಾದ ರಾ.ಶಿ. ವಾಡೇದ, ಯುವ ಕಾಂಗ್ರೆಸ ಅಧ್ಯಕ್ಷ ಮೋಯಿನ ಶೇಖ, ಬಸನಗೌಡ ಬಿರಾದಾರ ಮಾತನಾಡಿದರು.
ಡಾ. ವಿ.ಡಿ. ಐಹೊಳ್ಳಿ. ಜಯಶ್ರೀ ಹಿರೇಮಠ, ಕಮಲಾ ಮುರಾಳ, ಅಜು೯ನ ಶಿರೂರ, ವಿಜಯಾ ಬಿರಾದಾರ, ಶ್ರೀಕಾಂತ, ಎಂ.ಎಸ್. ನಾಡಗೌಡ, ಜಿ.ಎಸ್. ಬಳ್ಳೂರ, ಗುರುದಾಸ ಪವಾರ, ರಶ್ಮಿ ಬದ್ನೂರ, ಆರ್. ಎಸ್. ಬುರಾಣಗೋಳ, ಸಿಮ್ರಾನ ವಾಲಿಕಾರ, ಗಂಗಮ್ಮ ರಡ್ಡಿ, ಅಹಮ್ಮದ ವಾಲಿಕಾರ, ಬಿ.ಎಂ. ಮಸಬಿನಾಳ, ಶಶಿಕಲಾ ಇಜೇರಿ, ಫಕ್ರುದ್ದೀನ ಹಿರೇಕೊಪ್ಪ, ಅಶೋಕ ಕೆಳಗೇರಿ ಉಪಸ್ಥಿತರಿದ್ದರು.
ಮಂಜುಳಾ ಕಾಳಗಿ ಪ್ರಾಥಿ೯ಸಿದರು. ಪರವೀನ ಶೇಖ ಸ್ವಾಗತಿಸಿದರು. ಶಿಲ್ಪ ಭಸ್ಮೆ ನಿರೂಪಿಸಿದರು. ಜಗದೀಶ ಬೋಳಸೂರ ಪ್ರಾಸ್ತಾವಿಕ ಮಾತನಾಡಿದರು. ಶೋಭಾ ಬಡಿಗೇರ ವಂದಿಸಿದರು
ಕನ್ನಡ ನಮ್ಮೆಲ್ಲರ ಉಸಿರಾಗಬೇಕು: ಡಾ.ಲಕ್ಷ್ಮಿದೇವಿ ಅಲ್ಕೋಡ


