9ನೇ T-10 ಓವರ ಆರ್ಮ ರಾಷ್ಟ್ರೀಯ ಕ್ರೀಡಾಕೂಟದಲ್ಲಿ ಕರ್ನಾಟಕಕ್ಕೆ ದ್ವಿತೀಯ ಸ್ಥಾನ

ಸಪ್ತಸಾಗರ ವಾರ್ತೆ, ವಿಜಯಪುರ, ಮೇ. 7:
ಮೇ 4 ರಿಂದ 6ರವರೆಗೆ ಗೋವಾದ ಎಂ ಪಿ.ಟಿ ಮೈದಾನದಲ್ಲಿ ನಡೆದ 9ನೇ ಅಖಿಲ ಭಾರತೀಯ T -10 ಓವರ್ ಆರ್ಮ ಕ್ರಿಕೆಟ್ ಕ್ರೀಡಾಕೂಟದಲ್ಲಿ ಜೂನಿಯರ್ ಬಾಲಕರ ಕರ್ನಾಟಕ ತಂಡ ದ್ವಿತೀಯ ಸ್ಥಾನ ಪಡೆದು ಜಿಲ್ಲೆಗೆ ಹಾಗೂ ರಾಜ್ಯಕ್ಕೆ ಕೀರ್ತಿ ತಂದಿದ್ದಾರೆ
ಸುಶೀಲ್ ಬಿಶ್ವಕರ್ಮ( ನಾಯಕ), ಚಂದನ್ ಎಂ ನಾಯ್ಕ ( ಉಪನಾಯಕ ),
ವೈಭವ ಅನಂತ್ ಶಾನಭಾಗ್, ರಾಜೇಶ್ ಮರಾಠಿ, ವಶಿಷ್ಟ ವಿ ನಾಯ್ಕ,
ಪೃಥ್ವಿಶ್ ಎಸ್ ಬೇತಾಳಕರ್,
ಧನುಷ್ ಆರ್ ನಾಯ್ಕ, ಪ್ರಣವ್ ಜಿ ಹರಿಕಂತ್ರ, ನಮಿತ್ ಕರ್ವಿ ಹಾಗೂ
ನಾಗರಾಜ್ ಕೆ ನಾಯ್ಕ ಜಿಲ್ಲೆ, ರಾಜ್ಯಕ್ಕೆ ಕೀರ್ತಿ ತಂದಿದ್ದಾರೆ.
ಈ ಸಂದರ್ಭದಲ್ಲಿ
ರಾಷ್ಟ್ರೀಯ ಸಂಸ್ಥಾಪಕ ಪ್ರಧಾನ ಕಾರ್ಯದರ್ಶಿ ಉತ್ತಮ ಉಗಾಡೆ, ಬಸವರಾಜ ಬಾಗೇವಾಡಿ ಉತ್ನಾಳ, ಗಿರಿಸ್ಮ ಉಗಾಡೆ ನಿರ್ಣಾಯಕರು ಮತ್ತು ತರಬೇತಿದಾರ ರಾಘವೇಂದ್ರ ಆರ್. ಅವರು ತಂಡದೊಂದಿಗೆ ಭಾಗಿಯಾಗಿದ್ದರು.

Share this