ಕರ್ನಾಟಕ ರಾಜ್ಯ ವಕೀಲರ ಪರಿಷತ್ ಚುನಾವಣೆ: ಜಾಫರ್ ಅಂಗಡಿ ನಾಮಪತ್ರ ಸಲ್ಲಿಕೆ

ಸಪ್ತಸಾಗರ ವಾರ್ತೆ, ವಿಜಯಪುರ, ಫೆ. 5: ವಕೀಲ ಜಾಫರ್ ಅಂಗಡಿ ಅವರು ಮುಂಬರುವ ಕರ್ನಾಟಕ ರಾಜ್ಯ ವಕೀಲರ ಪರಿಷತ್ ಚುನಾವಣೆಗೆ ತಮ್ಮ ನಾಮಪತ್ರವನ್ನು ಅಧಿಕೃತವಾಗಿ ಸಲ್ಲಿಸಿದರು.
ವಕೀಲರ ಸಮುದಾಯದ ಏಕತೆ, ಕಲ್ಯಾಣ ಹಾಗೂ ವೃತ್ತಿಯ ಗೌರವವನ್ನು ಬಲಪಡಿಸುವ ತಮ್ಮ ಸಂಕಲ್ಪದ ಮಹತ್ವದ ಹೆಜ್ಜೆಯಾಗಿ ಈ ಸಲ್ಲಿಕೆ ಗಮನಾರ್ಹವಾಗಿದೆ.
ಈ ಸಂದರ್ಭದಲ್ಲಿ ವಕೀಲರ ವಲಯದ ಅನೇಕ ಗಣ್ಯರು ಉಪಸ್ಥಿತರಿದ್ದು ತಮ್ಮ ಬೆಂಬಲ ವ್ಯಕ್ತಪಡಿಸಿದರು. ಉಪಸ್ಥಿತರಿದ್ದವರಲ್ಲಿ ಬಾರ್ ಅಸೋಸಿಯೇಶನ್ ಅಧ್ಯಕ್ಷರಾದ ಡಿ. ಜಿ. ಬಿರಾದಾರ, ಹಿರಿಯ ವಕೀಲರಾದ ಜಿ. ಎ. ಅತನೂರ, ಬಿ. ಎಸ್. ಸೋರಗಾಂವ, ಐ. ಜಿ. ಚೆಗಶೆಟ್ಟಿ, ಎಸ್. ಎಸ್. ಮೂಡಲಗಿ, ಕೆ. ಎಚ್. ನಿಡೋಣಿ, ಬಸವರಾಜ ಯಾದವಾಡ, ಮುನ್ನಾ ಬಿಜಾಪುರ ಸೇರಿದಂತೆ ಇತರ ವಕೀಲರು ಇದ್ದರು.
ಈ ಸಂದರ್ಭದಲ್ಲಿ ಮಾತನಾಡಿದ ಜಾಫರ್ ಅಂಗಡಿ ಅವರು, ಸಹವಕೀಲರಿಂದ ಲಭಿಸಿರುವ ಪ್ರೋತ್ಸಾಹ ಮತ್ತು ಬೆಂಬಲಕ್ಕೆ ಕೃತಜ್ಞತೆ ಸಲ್ಲಿಸಿ, ವಕೀಲರ ಹಕ್ಕುಗಳು, ಕಲ್ಯಾಣ ಯೋಜನೆಗಳು, ವೃತ್ತಿ ಅಭಿವೃದ್ಧಿ ಮತ್ತು ಒಗ್ಗಟ್ಟಿಗಾಗಿ ಶ್ರಮಿಸುವುದಾಗಿ ತಿಳಿಸಿದರು.
ವಕೀಲ ವೃತ್ತಿಯ ಗೌರವವನ್ನು ಕಾಪಾಡುವುದು ಹಾಗೂ ವೃತ್ತಿಪರ ಸವಾಲುಗಳಿಗೆ ಸಮರ್ಪಕ ಪರಿಹಾರ ಕಂಡುಕೊಳ್ಳುವುದು ತಮ್ಮ ಪ್ರಮುಖ ಆದ್ಯತೆಯಾಗಿರುತ್ತದೆ ಎಂದು ಅವರು ಹೇಳಿದರು.

Share this