ಶ್ರೀ ಕೃಷ್ಣ ವಾದಿರಾಜಮಠದಲ್ಲಿ ಕಾರ್ತಿಕ ದೀಪೋತ್ಸವ

ಸಪ್ತಸಾಗರ ವಾರ್ತೆ, ವಿಜಯಪುರ, ನ. 5:
ನಗರದ ಶ್ರೀ ಕೃಷ್ಣ ವಾದಿರಾಜಮಠದಲ್ಲಿ ಕಾರ್ತಿಕ ದಿಪೋತ್ಸವದಲ್ಲಿ ಸಂಸದ ರಮೇಶ ಜಿಗಜಿಣಗಿ ಭಾಗಿಯಾಗಿದ್ದರು.
ಕಾರ್ತಿಕ ಮಾಸದ ನಿಮಿತ್ತ ಆಯೋಜಿಸಲಾಗಿದ್ದ ಕಾರ್ತಿಕ ದಿಪೋತ್ಸವದಲ್ಲಿ ಪಾಲ್ಗೊಂಡು ಎಲ್ಲರಿಗೂ ಒಳ್ಳೆಯದಾಗಲಿ. ಎಲ್ಲರ ಜೀವನದಲ್ಲಿ ನೆಮ್ಮದಿ ನೆಲೆಸಲಿ ಎಂದು ಜಿಗಜಿಣಗಿ ಪ್ರಾರ್ಥಿಸಿದರು.
ಶ್ರೀ ಮಠಕ್ಕೆ ಭೇಟಿ ನೀಡಿದ ಸಂದರ್ಭದಲ್ಲಿ ಸಂಸದ ರಮೇಶ ಜಿಗಜಿಣಗಿ ಅವರಿಗೆ ಸಮಿತಿ ಸದಸ್ಯರು ಗೌರವಿಸಿದರು.
ಪೇಜಾವರ ಅಧೋಕ್ಷಜ ಮಠದ ಲೆಕ್ಕಪರಿಶೋಧಕ ಹರಿದಾಸ ಭಟ್ ಹಾಗೂ ಕಾರ್ಯದರ್ಶಿ ಶ್ರೀಪಾದ ಸಿಂಗಮಲ್ಲಿ ಶ್ರೀಮಠದ ಗೌರವಾಧ್ಯಕ್ಷ ಗೋಪಾಲ ನಾಯಕ, ಪ್ರಕಾಶ ಅಕ್ಕಲಕೋಟ, ಅಶೋಕ ರಾವ್, ವಿಕಾಸ ಪದಕಿ, ವಿಜಯ ಜೋಶಿ, ಪಂ.ವಾಸುದೇವ ಅಗ್ನಿಹೋತ್ರಿ ಮೊದಲಾದವರು ಪಾಲ್ಗೊಂಡಿದ್ದರು.

Share this