ಸಪ್ತಸಾಗರ ವಾರ್ತೆ, ವಿಜಯಪುರ, ಫೆ. 20:
ಕರ್ನಾಟಕ ರಾಜ್ಯ ಅಕ್ಕಮಹಾದೇವಿ ಮಹಿಳಾ ವಿಶ್ವವಿದ್ಯಾನಿಲಯವು ಖಾತುನಬಿ ಗಡೇದ ಅವರು ಸಲ್ಲಿಸಿದ್ದ “ಎ ಸ್ಟಡಿ ಆನ್ ಇನ್ಪ್ಲೂಎನ್ಸ್ ಆಫ್ ಸೆಕೆಂಡರಿ ಸ್ಕೂಲ್ ಹೆಡ್ ಮಾಸ್ರ್ಸ್ ಎಡ್ಮಿನಿಸ್ಟ್ರೇಶನ್, ಡಿಸಿಜನ್ ಮೆಕಿಂಗ್ ಸ್ಟಾಯಿಲ್ ಆಂಡ್ ಟೀರ್ಸ್ ಬರ್ನೌಟ್ ಆನ್ ಅಕಾಡೆಮಿಕ್ ಅಚಿಮೆಂಟ್ ಅಮಾಂಗ್ ಸೆಕೆಂಡರಿ ಸ್ಕೂಲ್ ಸ್ಟುಡೆಂಟ್ಸ್” ಕುರಿತು ಸಲ್ಲಿಸಿದ್ದ ಮಹಾಪ್ರಬಂಧಕ್ಕೆ ಪಿಎಚ್ಡಿ ಪದವಿ ನೀಡಿದೆ.
ಖಾತುನಬಿ ಗಡೇದ ಅವರು ಶಿಕ್ಷಣ ವಿಭಾಗದ ಡಾ. ಎ.ಬಿ. ಸುರಪುರ ಅವರ ಮಾರ್ಗದರ್ಶನದಲ್ಲಿ ಸಂಶೋಧನೆ ಕೈಗೊಂಡಿದ್ದರು. ಡಾಕ್ಟರೇಟ್ ಪದವಿ ಪಡೆದಿರುವ ಖಾತುನಬಿ ಗಡೇದ ಅವರನ್ನು ಕುಲಪತಿ ಪ್ರೊ. ವಿಜಯಾ ಕೋರಿಶೆಟ್ಟಿ, ಕುಲಸಚಿವ ಶಂಕರಗೌಡ ಸೋಮನಾಳ, ಮೌಲ್ಯಮಾಪನ ಕುಲಸಚಿವ ಪ್ರೊ. ಬಿ.ಎಲ್. ಲಕ್ಕಣ್ಣನವರ ಅಭಿನಂದಿಸಿದ್ದಾರೆ.
ಖಾತುನಬಿಗೆ ಪಿ.ಎಚ್.ಡಿ


