ವಿದ್ಯೆ ಎಂಬುದು ಅಭ್ಯಾಸ ಮಾಡುವವನ ಕೈವಶವಾಗುತ್ತದೆ-ಐಹೊಳ್ಳಿ

ಸಪ್ತಸಾಗರ ವಾರ್ತೆ, ವಿಜಯಪುರ, ಡಿ. 15:
ಜೀವನದಲ್ಲಿ ಯಾರು ಸಾಧನೆ ಮಾಡಬೇಕೆಂದು ಬಯಸಿ ಅಭ್ಯಾಸವನ್ನು ಮಾಡುತ್ತಾರೋ ಅವರ ಸಾಧನೆಗೆ ವಿದ್ಯೆಯ ಫಲಗಳು ಬರುತ್ತವೆ. ಶಿವಯೋಗಿ ಸಿದ್ದರಾಮರು ಇದನ್ನು ತಮ್ಮ ವಚನದಲ್ಲಿ ಪ್ರಸ್ತಾಪಿಸಿದ್ದಾರೆ. ಅವಿದ್ಯೆ ಹೋಗಲಾಡಿಸಲು ನಾವೆಲ್ಲ ಸಾಧನಾಶೀಲರಾಗಿ ಸಾಧಿಸಬೇಕೆಂದು ಫ .ಗು. ಹಳಕಟ್ಟಿ ಸಂಶೋಧನಾ ಕೇಂದ್ರದ ಸಂಯೋಜನಾಧಿಕಾರಿ ಡಾ.ವ್ಹಿ.ಡಿ. ಐಹೊಳ್ಳಿ ಇಂದಿಲ್ಲಿ ಅಭಿಪ್ರಾಯ ಪಟ್ಟರು. ನಗರದ ಆಶ್ರಮ ರಸ್ತೆಯ ಐಶ್ವರ್ಯ ಬಡಾವಣೆಯ ವರದಾಂಜನೇಯ ದೇವಸ್ಥಾನದಲ್ಲಿ ಹಮ್ಮಿಕೊಂಡ 549ನೇ ಸತ್ಸಂಗ ಕಾರ್ಯಕ್ರಮದಲ್ಲಿ ಮುಖ್ಯ ಅತಿಥಿಗಳಾಗಿ ಪಾಲ್ಗೊಂಡು ಅವರು ಮಾತನಾಡುತ್ತಿದ್ದರು.
ವಾಚಿಸಿ ಅನುಭವಿ ಆದವನು ಪಂಡಿತನಾಗುತ್ತಾನೆ. ಅವನಿಗೆ ಎಲ್ಲೆಲ್ಲೂ ಗೌರವ ಸಿಗುತ್ತದೆ. ಆಧ್ಯಾತ್ಮದಲ್ಲಿ ಆಗಲಿ, ಅಭ್ಯಾಸದಲ್ಲಿ ಆಗಲಿ, ಸೇವೆಯಲ್ಲಿ ಆಗಲಿ ನಾವೆಲ್ಲ ಸಾಧಕರೆಂದು ಭಾವಿಸಿಕೊಂಡು ಮುನ್ನಡೆಯಬೇಕೆಂದು ಅವರು ತಿಳಿಸಿದರು.
ಕಾರ್ಯಕ್ರಮದಲ್ಲಿ ಗೌರವ ಅತಿಥಿಗಳಾಗಿ ಪಾಲ್ಗೊಂಡು ಸನ್ಮಾನವನ್ನು ಸ್ವೀಕರಿಸಿ ಮಾತನಾಡಿದ ಸಿದ್ದೇಶ್ವರ ಸಹಕಾರಿ ಬ್ಯಾಂಕಿನ ಅಧ್ಯಕ್ಷ ರವೀಂದ್ರ ಬಿಜ್ಜರಗಿಯವರು, ಸತ್ಸಂಗ ಕಾರ್ಯಕ್ರಮಗಳು ನಮ್ಮನ್ನು ಸನ್ಮಾರ್ಗದತ್ತ ಒಯ್ಯುತ್ತವೆ. ಇಲ್ಲಿ ಪಡೆಯುವ ಜ್ಞಾನವನ್ನು ಜೀವನದಲ್ಲಿ ಅಳವಡಿಸಿಕೊಳ್ಳುತ್ತಾ ಮುನ್ನಡೆಯುವ ಅವಶ್ಯಕತೆ ಇದೆ. ನನ್ನನ್ನು ಇಲ್ಲಿ ಗೌರವಿಸಿ ಸನ್ಮಾನ ಮಾಡಿದ್ದೀರಿ. ಸತ್ಸಂಗ ಸಮಿತಿಯ ಸರ್ವರಿಗೆ ನಾನು ಕೃತಜ್ಞತೆಗಳನ್ನು ಅರ್ಪಿಸುತ್ತೇನೆ. ಇದು ಹೀಗೆಯೇ ಮುಂದುವರೆಯಲಿ ಎಂದು ಬಯಸುತ್ತೇನೆ ಎಂದು ತಿಳಿಸಿದರು.
ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿದ ವಿಶ್ರಾಂತ ಮುಖ್ಯೋಪಾಧ್ಯಾಯ ಜಿ.ಕೆ.ಪಟ್ಟಣದ ಅವರು ಮಾತನಾಡಿ, ತನು, ಮನ ಶುದ್ಧತೆಯಿಂದ ನಾವೆಲ್ಲ ನಡೆಯುವ ಜರೂರತೆ ಇದೆ. ಸದ್ವಿವೇಕವನ್ನು ನಮಗೆಲ್ಲ ಸತ್ಸಂಗ ನೀಡುತ್ತದೆ. ಇಲ್ಲಿ ನಡೆಯುವ ಸತ್ಸಂಗ ಒಂದು ಅಪರೂಪದ ಕಾರ್ಯಕ್ರಮವಾಗಿದೆ ಎಂದು ಅವರು ತಿಳಿಸಿದರು.
ಕಾರ್ಯಕ್ರಮದ ಭಕ್ತಿ ಸೇವೆಯನ್ನು ನೆರವೇರಿಸಿದ ನಿವೃತ್ತ ಬ್ಯಾಂಕ್ ಅಧಿಕಾರಿ ಕಮಲಾಕರ ಕುಮಟಗಿ ಅವರು ಮಾತನಾಡಿ, ಆಚಾರ- ವಿಚಾರಗಳು ಏಕಭಾವವನ್ನು ಹೊಂದಿ ನಾವು ನಡೆಯಬೇಕು. ಇದರಿಂದ ಬದುಕಿಗೆ ಮೌಲಿಕತೆ ಉಂಟಾಗುತ್ತದೆ ಎಂದು ತಿಳಿಸಿದರು.
ಕಾರ್ಯಕ್ರಮದ ಆರಂಭದಲ್ಲಿ ಸುನಿತಾ ಬಿರಾದಾರ ಪ್ರಾರ್ಥನೆಯನ್ನು ಹಾಡಿದರು.
ಸಾಹಿತಿ ಡಾ. ಮಲ್ಲಿಕಾರ್ಜುನ ಮೇತ್ರಿ ಸ್ವಾಗತ ಕೋರಿ ಅತಿಥಿಗಳನ್ನು ಪರಿಚಯಿಸಿದರು.
ವಿಶ್ರಾಂತ ಪ್ರಾಚಾರ್ಯ
ಎಂ. ಓ.ಶಿರೂರ ಅವರು ನಿರೂಪಣೆಯನ್ನು ಮಾಡಿದರು
ಇದೇ ಸಂದರ್ಭದಲ್ಲಿ ಶಿಕ್ಷಕರಾಗಿ ಸೇವೆ ಸಲ್ಲಿಸಿ ನಿವೃತ್ತರಾದ ಕುಸುಮಾ ಕುಮಟಗಿ ಅವರನ್ನು ಸನ್ಮಾನಿಸಲಾಯಿತು.
ಕಾರ್ಯಕ್ರಮದಲ್ಲಿ ಮಾರುತಿ ದೇವಸ್ಥಾನದ ಅರ್ಚಕರಾದ ಮಲ್ಲಯ್ಯ ಸ್ವಾಮಿ ಹಿರೇಮಠ, ಮಾರುತಿ ಸೇವಾ ಸಮಿತಿಯ ಅಧ್ಯಕ್ಷ ಬಿ .ಎನ್ .ಬಿರಾದಾರ, ಉಪಾಧ್ಯಕ್ಷ ಬಸವರಾಜ ರೂಗಿ, ಕೋಶಾಧ್ಯಕ್ಷ ಎಸ್ .ಕೆ. ಬಿರಾದಾರ್, ಎಂ.ಕೆ. ಬಿಸನಾಳ, ವಿಶ್ರಾಂತ ಪ್ರಾಧ್ಯಾಪಕ ಡಾ .ಆರ್ .ಎನ್. ದಿಂಡೂರ, ವಿಶ್ರಾಂತ ಪ್ರಾಚಾರ್ಯ ಪಿ.ಎಂ. ಬಿರಾದಾರ, ಚಂದ್ರಶೇಖರ ಸರಸಂಬಿ, ಸುಭಾಸ ಹಾವಳಗಿ, ವೀರಣ್ಣ ಹುಲಸೂರ, ಬಿರಾದಾರ ಕಾಕಾ, ಬಸವರಾಜ ಕಣಬೂರ, ಗಂಗಾಧರ ಸಾಲಕ್ಕಿ, ಅಮರನಾಥ ಬಿರಾದಾರ , ಮಧು ಕಲಾದಗಿ, ಸಿದ್ದೇಶ್ವರ ಬ್ಯಾಂಕಿನ ವ್ಯವಸ್ಥಾಪಕ ಸಿ .ಎಂ. ಪಾಲ್ಕಿ, ನಿವೃತ್ತ ಪಿಎಸ್ಐ ಪಟ್ಟಣಶೆಟ್ಟಿ,ಪಾಯಣ್ಣ ಪಡಸಲಗಿ, ಲಕ್ಷ್ಮಣ ತೇಲಿ, ನಾನಾಗೌಡ ಪಾಟೀಲ್, ರಾಜಣ್ಣ ಜಕ್ಕೊಂಡಿ, ಶ್ರೀಶೈಲ ಬೆಲ್ಲದ, ಅಶೋಕ ಬನ್ನಟ್ಟಿ ಮುಂತಾದ ಗಣ್ಯರು ಉಪಸ್ಥಿತರಿದ್ದರು.

Share this