ಸಪ್ತಸಾಗರ ವಾರ್ತೆ, ಪುಣೆ, ಆ. 29:
ಮಹಾರಾಷ್ಟ್ರ ರಾಜ್ಯದ ಪುಣೆಯಲ್ಲಿ ಇತ್ತೀಚೆಗೆ ದ್ರಾಕ್ಷಿ ಬೆಳೆಗಾರರ ಸಮಾವೇಶ ಜರುಗಿತು.
ಮಹಾರಾಷ್ಟ್ರದ ಉಪಮುಖ್ಯಮಂತ್ರಿ ಮತ್ತು ಕೃಷಿ ಮಂತ್ರಿಗಳ ಜೊತೆಗೆ ಭಾರತೀಯ ಕಿಸಾನ್ ಸಂಘದ ಭೀಮಸೇನ ಕೊಕರೆ ಅವರು ದ್ರಾಕ್ಷಿ ಬೆಳೆಯ ವಿವಿಧ ಸಮಸ್ಯೆಗಳ ಕುರಿತು ಚರ್ಚೆ ನಡೆಸಿದರು. ದ್ರಾಕ್ಷಿ ಬೆಳೆಗಾರರ ಮುಂದಿನ ಬೆಳವಣಿಗೆಗಳ ಬಗ್ಗೆ ಅದರಲ್ಲೂ ವಿಶೇಷವಾಗಿ ತಳಿಗಳ ಬಗ್ಗೆ ಹಾಗೂ ರಫ್ತಿನ ಕುರಿತು ಮತ್ತು ಭಾರತ ದೇಶಕ್ಕೆ ಹೊರದೇಶದಿಂದ ಕಳಪೆ ಮಟ್ಟದ ಒಣ ದ್ರಾಕ್ಷಿಯ ಕಳ್ಳ ಸಾಗಣೆಯ ಮೂಲಕ ಬರುತ್ತಿರುವುದರ ಬಗ್ಗೆ ಸುದೀರ್ಘವಾಗಿ ಚರ್ಚಿಸಲಾಯಿತು.
ಮಹಾರಾಷ್ಟ್ರ ಡಿಸಿಎಂ ಜೊತೆಗೆ ದ್ರಾಕ್ಷಿ ಬೆಳೆ ಸಮಸ್ಯೆ ಕುರಿತು ಕೊಕರೆ ಚರ್ಚೆ


