ಅಶ್ಲೀಲ ಸಾಹಿತ್ಯ ಮತ್ತು ಸಿನಿಮಾಗಳನ್ನು ನಿಷೇಧಿಸುವಂತೆ ಕೆಆರ್‌ಎಸ್ ಪಕ್ಷ ಆಗ್ರಹ

ಸಪ್ತಸಾಗರ ವಾರ್ತೆ, ವಿಜಯಪುರ, ಜ. 8 : ಉತ್ತರ ಕರ್ನಾಟಕದಲ್ಲಿ ಅಶ್ಲೀಲ ಸಾಹಿತ್ಯ ಮತ್ತು ಸಂಗೀತದಿಂದಾಗಿ ಈ ಭಾಗದ ಮಕ್ಕಳ ಮನಸ್ಸಿನ ಮೇಲೆ ವ್ಯಾಪಕವಾದ ಪರಿಣಾಮಗಳು ಬೀರುತ್ತವೆ. ಇದರಿಂದಾಗಿ ಮಕ್ಕಳ ಶೈಕ್ಷಣಿಕ ಮಟ್ಟ ಕುಸಿಯುತ್ತಿದೆ. ಸಮಾಜದಲ್ಲಿ ಮೌಲ್ಯಗಳು ಕುಸಿತಗೊಂಡು ಸಾಮಾಜಿಕ ಸ್ವಾಸ್ಥ್ಯ ಹಾಳಾಗುತ್ತಿದೆ. ರಾಜ್ಯದ ಹಿತದೃಷ್ಟಿಯಿಂದಾಗಿ ಉತ್ತರ ಕರ್ನಾಟಕದ ಜಾನಪದ ಸಾಹಿತ್ಯ ಸಿನಿಮಾ/ಚಲನಚಿತ್ರಗಳಲ್ಲಿ ಹಿಂಸೆಯನ್ನು ಪ್ರಚೋದಿಸುವ ಬಂದೂಕು, ಮಚ್ಚು, ಲಾಂಗು, ರಾಬರಿ, ಐಟಂ ಸಾಂಗ್ ಮತ್ತು ಅತ್ಯಾಚಾರದಂತ ದೃಶ್ಯಗಳನ್ನು ಹೆಚ್ಚಾಗಿ ಬಳಸದಂತೆ ರಾಜ್ಯದಿಂದ ನಿಷೇಧಿಸಬೇಕು ಎಂದು ರಾಜ್ಯ ಸರ್ಕಾರಕ್ಕೆ ರಾಜ್ಯದ ಜನತೆಯ ಪರವಾಗಿ ಕೆಆರ್‌ಎಸ್ ಪಕ್ಷವು ಜಿಲ್ಲಾಧಿಕಾರಿಗಳ ಮೂಲಕ ಮುಖ್ಯಮಂತ್ರಿಗಳಿಗೆ ಮನವಿ ಸಲ್ಲಿಸಿದರು.
ಈ ಸಂದರ್ಭದಲ್ಲಿ ರಾಜ್ಯ ಸಂಘಟನಾ ಕಾರ್ಯದರ್ಶಿ ಶಿವಾನಂದ ಯಡಹಳ್ಳಿ, ದುರ್ಗಪ್ಪ ಬೂದಿಹಾಳ, ವಿಕ್ರಮ ವಾಘಮೋರೆ, ಸೀನು ಹಿಪ್ಪರಗಿ, ರಾಕೇಶ ಇಂಗಳಗಿ, ಪ್ರವೀಣ ಕನಸೇ, ರಾಘವೇಂದ್ರ ಛಲವಾದಿ, ಮೈಬು ತಾಂಬೋಳಿ, ಸುರೇಂದ್ರ ಕುನಸಲೇ, ನಬಿರಸೂಲ ಹುಣಶ್ಯಾಳ, ಹಮಿದ ಇನಾಮದಾರ, ಅಣ್ಣಾ ಪೂಜಾರಿ, ಗಣಪತಿ ರಾಠೋಡ, ಮಲ್ಲಿಕಾರ್ಜುನ ಬಿರಾದಾರ ಇತರರು ಉಪಸ್ಥಿತರಿದ್ದರು.

Share this