ಸಪ್ತಸಾಗರ ವಾರ್ತೆ, ವಿಜಯಪುರ, ಜ. 8 : ನಗರದ ಕೇಂದ್ರ ಬಸ್ ನಿಲ್ದಾಣದಲ್ಲಿ ನೆರವೇರುತ್ತಿರುವ ಕಿತ್ತೂರ ರಾಣಿ ಚೆನ್ನಮ್ಮ ಪುತ್ಥಳಿ ಪಕ್ಕದಲ್ಲಿ ಸಂಗೊಳ್ಳಿ ರಾಯಣ್ಣ ಪುತ್ಥಳಿ ಕೂಡಾ ಸ್ಥಾಪಿಸಬೇಕು ಎಂದು ಒತ್ತಾಯಿಸಿ ಕುರುಬ ಸಮಾಜದ ನಿಯೋಗವು ಸಿಎಂ ಸಿದ್ಧರಾಮಯ್ಯನವರಿಗೆ ಬೆಂಗಳೂರಿನಲ್ಲಿ ಮನವಿ ಸಲ್ಲಿಸಿತು.
ಈ ಸಂದರ್ಭದಲ್ಲಿ ಅಧ್ಯಕ್ಷ ರಾಜು ಕಗ್ಗೋಡ, ಅಹಿಂದ ಮುಖಂಡ ಸೋಮನಾಥ ಕಳ್ಳಿಮನಿ ಜಂಟಿಯಾಗಿ ಮಾತನಾಡಿ, ಮುಂದಿನ ಪೀಳಿಗೆಗೆ ಚೆನ್ನಮ್ಮಾ ರಾಯಣ್ಣ ಭಾಂದವ್ಯ ಮತ್ತು ನಿಷ್ಟೆಯ ಶೌರ್ಯ ಸಂದೇಶ ರವಾನೆಯಾಗಬೇಕು ಎಂದರು.
ಕುರುಬ ಸಮಾಜದ ಹಲವಾರು ಗಂಭೀರ ವಿಷಯಗಳ ಬಗ್ಗೆ ಚರ್ಚಿಸಲು ನಿಯೋಗದೊಂದಿಗೆ ವಿಜಯಪುರದ ತೊರವಿ ರಸ್ತೆಯ ಹೊಸ ಅಥಿತಿಗೃಹಕ್ಕೆ ಮಧ್ಯಾಹ್ನ 12 ಗಂಟೆಗೆ ಭೇಟಿ ಮಾಡಲಾಗುವುದು.
ಕಾರಣ ಜಿಲ್ಲೆಯ ಎಲ್ಲ ಮುಖಂಡರು ಆಗಮಿಸಬೇಕೆಂದು ಕೋರಿದ್ದಾರೆ.
ಈ ಸಂದರ್ಭದಲ್ಲಿ ಮಕಣಾಪೂರ ಸೋಮೇಶ್ವರ ಮಹಾರಾಜರು, ಮಲ್ಲಣ್ಣ ಸಾಲಿ, ಮಾಳು ಗುಗದಡ್ಡಿ , ಸುರೇಶ ಡೋಂಬಳೆ, ಬಸವರಾಜ ವಾಡೆದ, ರಮೇಶ ಕಾಲೇಬಾಗ ಸೇರಿದಂತೆ ಹಲವಾರು ಕುರುಬ ಸಮಾಜದ ಮುಖಂಡರು ಪಾಲ್ಗೊಂಡಿದ್ದರು.
ರಾಯಣ್ಣ ಪುತ್ಥಳಿ ಸ್ಥಾಪನೆಗೆ ಸಿಎಂಗೆ ಕುರುಬರ ನಿಯೋಗದಿಂದ ಮನವಿ


