ಸಪ್ತಸಾಗರ ವಾರ್ತೆ,ತಾಳಿಕೋಟೆ, ಫೆ. 27:
ಆಧುನಿಕ ಜಗತ್ತಿನಲ್ಲಿ ಹೆಚ್ಚುತ್ತಿರುವ ಖರ್ಚಿಗೆ ಅನುಗುಣವಾಗಿ ಕೇವಲ ಕೃಷಿ ಮಾಡಿದರೆ ಸಾಲದು ಬೆಳೆದ ಬೆಳೆಗಳನ್ನು ಮೌಲ್ಯ ವರ್ಧನೆ ಮಾಡಿ ಉಪ ಉತ್ಪನ್ನಗಳನ್ನು ಸ್ವತಃ ಮಾರಾಟ ಮಾಡುವುದರಿಂದ 4-5 ಪಟ್ಟು ಲಾಭ ಪಡೆಯಬಹುದು. ಅಂದಾಗ ಮಹಿಳೆಯರು ಸ್ವಾವಲಂಬಿಗಳಾಗಿ ಆರ್ಥಿಕವಾಗಿ ಸಬಲರಾಗಿ ಸಮಾಜದಲ್ಲಿ ಉನ್ನತ ರೀತಿಯಲ್ಲಿ ಬದುಕಲು ಸಾಧ್ಯವಾಗುತ್ತದೆ ಎಂದು ಜಿಲ್ಲಾಧ್ಯಕ್ಷ ಸಂಗಮೇಶ ಸಗರ ಅವರು ಹೇಳಿದರು.
ಕರ್ನಾಟಕ ರಾಜ್ಯ ರೈತ ಸಂಘ ಹಾಗೂ ಹಸಿರು ಸೇನೆ ಹಾಗೂ ರೈತ ಸ್ವಾವಲಂಭಿ ಸಂಘಟನೆ ಪೌಂಢೇಶನ್ ಸಹಯೋಗದಲ್ಲಿ ವಿಜಯಪುರ ಜಿಲ್ಲೆಯ ತಾಳಿಕೋಟೆ ನಗರದ ಮಹಿಳಾ ಘಟಕ ಉದ್ಘಾಟನೆ ಸಮಾರಂಭದಲ್ಲಿ ಜ್ಯೋತಿ ಬೆಳಗಿಸುವ ಮೂಲಕ ಅವರು ಮಾತನಾಡಿದರು.
ಕೇಂದ್ರ ಮತ್ತು ರಾಜ್ಯ ಸರ್ಕಾರಗಳು ಕೃಷಿಗೆ ಹಾಗೂ ಮಹಿಳೆಯರ ಅಭಿವೃದ್ಧಿಗಾಗಿ ನೂರಾರು ಹೊಸ ಹೊಸ ಕಾರ್ಯಕ್ರಮಗಳನ್ನು ಆಯೊಜನೆ ಮಾಡಿ ಸಾವಿರಾರು ಕೋಟಿ ಹಣವನ್ನು ಮೀಸಲಿಡುತ್ತಿದ್ದಾರೆ.
ಇದಕ್ಕಾಗಿ ರೈತ ಸಂಘವು ಸದಾ ಹಗಲಿರುಳು ಶ್ರಮಿಸುತ್ತಿದೆ ಇದರ ಜೊತೆಗೆ ಸಮಯ ಸಮಯಕ್ಕೆ ವಿಶೇಷ ತಜ್ಞರಿಂದ ತರಬೇತಿ ಕೊಡಿಸುವುದರ ಜೊತೆಗೆ ಅನುಷ್ಠಾನಗೊಳಿಸಲು ಸರ್ಕಾರಿ ಯೋಜನೆಗಳನ್ನು ತಿಳಿಸಿ ಬೆಂಬಲಿಸಿ ಕೈ ಹಿಡಿದು ನಿಮ್ಮ ಉದ್ಯೋಗವನ್ನು ಮುನ್ನಡೆಸಲು ಸಹಾಯ ಮಾಡುತ್ತದೆ ಎಂದರು.
ಇದೇ ವೇಳೆಯಲ್ಲಿ ಬಾಗೇವಾಡಿ ತಾಲೂಕಾ ಅಧ್ಯಕ್ಷರಾದ ಮುದಕಣ್ಣ ಬಾಗೇವಾಡಿ, ತಾಳಿಕೋಟೆ ತಾಲೂಕಾ ಅಧ್ಯಕ್ಷ ಶ್ರೀಶೈಲ ವಾಲಿಕಾರ, ಸುಜಾತ ಅವಟಿ ಮಾತನಾಡಿ, ಮಹಿಳೆಯರು ಗಟ್ಟಿಯಾಗಿ ಸಂಘಟನೆ ಮಾಡಿ ಆರ್ಥಿಕವಾಗಿ ಸದೃಢರಾಗಬೇಕು. ಭ್ರಷ್ಟಾಚಾರ ಮುಕ್ತ ವ್ಯವಸ್ಥೆ ಆಗಬೇಕು ಎಂದರು.
ಜಿಲ್ಲಾ ಪ್ರಧಾನ ಕಾರ್ಯದರ್ಶಿ ರಾಮನಗೌಡ ಪಾಟೀಲ ಮಾತನಾಡಿ, ಈ ನಾಡಿನ ರೈತರ ಹಲವಾರು ಕಷ್ಟಗಳಿಗೆ ಧ್ವನಿಯಾಗಿ ನೀರು, ವಿದ್ಯುತ್, ಬಿತ್ತನೆ ಬೀಜ, ಗೊಬ್ಬರ, ಕ್ರಿಮೀನಾಶಕ, ಪ್ರಕೃತಿ ವಿಕೋಪದ ಪರಿಹಾರ, ಬೆಳೆ ವಿಮೆ, ಪ್ರತಿಯೊಂದು ಬೆಳೆಗಳಿಗೆ ಬೆಲೆ ನಿಗದಿ, ಸೇರಿದಂತೆ ಹಲವಾರು ಹೋರಾಟಗಳನ್ನು ಮಾಡಿ ಕೇಂದ್ರ ಮತ್ತು ರಾಜ್ಯ ಸರ್ಕಾರಗಳ ಕಣ್ಣು ತೆರಸಿ ರೈತರಿಗೆ ನ್ಯಾಯ ಕೊಡಿಸಲು ಹಂತ ಹಂತವಾಗಿ ಹೋರಾಟ ಮಾಡಿ ಯಶಸ್ವಿಯಾಗಿದ್ದವೆ. ನೀವು ಕೂಡಾ ಈ ತಾಳಿಕೋಟೆ ತಾಲೂಕಿನಲ್ಲಿ ರೈತರ ಪರವಾಗಿ ಹೋರಾಟ ಮಾಡಿ ಎಂದರು
ಈ ಸಂಧರ್ಭದಲ್ಲಿ ಕೃಷಿಯಲ್ಲಿ ಹಿಂದಿನಿಂದ ಬಳಸಿಕೊಂಡು ಬರುತ್ತಿರುವ ತತ್ರಾಣಿ, ಕರಿ ಕಂಬಳಿ, ರಾಗೋಲ್, ನೇಗಿಲು, ಪೂಜೆ ಮಾಡಿ ಸೇಂಗಾ ಹೋಳಿಗೆ ಬುತ್ತಿ ರೊಟ್ಟಿ ಮಾಡಿ ಎಲ್ಲರಿಗೂ ವಿತರಿಸಿ ವಿವಿಧ ಜಾನಪದ ಹಾಗೂ ರೈತ ಪದ ಹಾಡುತ್ತಾ ನೃತ್ಯ ಮಾಡಿ ಸಂತಸ ಪಟ್ಟರು.
ಈ ವೇಳೆ ಬೋರಮ್ಮ ಕುಂಬಾರ, ಸುಧಾ ಮಡ್ಡಿ, ಪ್ರಮೀಳಾ, ಬೋರಮ್ಮ ಮಾಲಿಪಾಟೀಲ್,ಸುಜಾತ ವಡಕರ, ಕಾಶಿಬಾಯಿ ಆಲೂರ,ಬಸಮ್ಮ, ಕಸ್ತೂರಿ, ಪ್ರೇಮಾ ದೇಗಿನಾಳ, ಶಾಂತಾ ಹೊಟ್ಟಿ, ಯಮನವ್ವ, ದ್ರಾಕ್ಷಿಯಿಣಿ ಲಿಂಗದಳ್ಳಿ, ಲಲಿತಾ ಮಡ್ಡಿ, ಸೇರಿದಂತೆ ನೂರಾರು ಮಹಿಳಾ ಪದಾಧಿಕಾರಿಗಳಿಗೆ ಶಾಲು ಧೀಕ್ಷೆ ಮಾಡಿ, ಗುರುತಿನ ಚೀಟಿ ವಿತರಣೆ ಮಾಡಲಾಯಿತು.
ಕೃಷಿಯೊಂದಿಗೆ ಮೌಲ್ಯ ವರ್ಧನೆ ಕಲಿತು ಹೆಚ್ಚಿನ ಲಾಭ ಹೊಂದಿ:ಸಂಗಮೇಶ


