ವಿಲಾಸಕುಮಾರ, ಮೆಹಬೂಬ್ ಗೆ ಜೀವಮಾನ ಸಾಧನೆ ಪ್ರಶಸ್ತಿ ಪ್ರದಾನ

ಸಪ್ತಸಾಗರ ವಾರ್ತೆ, ವಿಜಯಪುರ, ಫೆ. 22:
ಮಹಾರಾಷ್ಟ್ರ ರಾಜ್ಯದ ನಾಗಪುರ ಪಟ್ಟಣದಲ್ಲಿ ಶನಿವಾರ SAMNA ಸ್ಮಾಲ್ ಅ್ಯಂಡ್ ಮಿಡಿಯಂ ಪತ್ರಿಕಾ ಸಂಸ್ಥೆಯ ವತಿಯಿಂದ ಆಯೋಜಿಸಲಾದ ಸಮಾರಂಭದಲ್ಲಿ ಹೆಜ್ಜೆ ಗುರ್ತು ಪತ್ರಿಕೆ ಸಂಪಾದಕ ವಿಲಾಸಕುಮಾರ ಸಿಂಧೆ ಹಾಗೂ ಡಿಪಾರ್ಟಮೆಂಟ್ ಎಕ್ಸಪ್ರೆಸ್ ದೈನಿಕ ಸಂಪಾದಕ ಮೆಹಬೂಬ್ ಮಾಲಬೊಡಿ ಅವರಿಗೆ ಜೀವಮಾನ ಸಾಧನೆ ಪ್ರಶಸ್ತಿ ಪ್ರದಾನ ಮಾಡಲಾಯಿತು.
ಪತ್ರಿಕೋದ್ಯಮ ಕ್ಷೇತ್ರದಲ್ಲಿ ದೀರ್ಘಕಾಲ ಸೇವೆ ಸಲ್ಲಿಸಿ, ಸಮಾಜದ ಏಕೀಕರಣ ಮತ್ತು ಸಾಮಾಜಿಕ ಸೌಹಾರ್ದತೆಯನ್ನು ಬಲಪಡಿಸುವಲ್ಲಿ ಅವರು ಸಲ್ಲಿಸಿದ ಅಮೂಲ್ಯ ಕೊಡುಗೆಗೆ ಈ ಪ್ರಶಸ್ತಿ ನೀಡಲಾಯಿತು. ವಿವಿಧ ಸಮಾಜ ವರ್ಗಗಳ ನಡುವೆ ಸಮನ್ವಯತೆ ಮೂಡಿಸಿ, ನಿಷ್ಠಾವಂತ ಹಾಗೂ ಜನಪರ ಪತ್ರಿಕೋದ್ಯಮದ ಮೂಲಕ ಸಮಾಜದಲ್ಲಿ ಸದ್ಭಾವನೆ ಮತ್ತು ಜಾಗೃತಿ ಹರಡುವಲ್ಲಿ ಇವರ ಪಾತ್ರ ಶ್ಲಾಘನೀಯವಾಗಿದೆ.
ಕಾರ್ಯಕ್ರಮದಲ್ಲಿ ಸಾಮ್ನಾ ಸಂಸ್ಥೆಯ ರಾಷ್ಟ್ರೀಯ ಅಧ್ಯಕ್ಷ ವಾಡಕರ ಹಾಗೂ ಪದಾಧಿಕಾರಿಗಳು ಉಪಸ್ಥಿತರಿದ್ದು, ವಿಲಾಸಕುಮಾರ ಮತ್ತು ಮೆಹಬೂಬ್ ಮಾಲಬೋಡಿ ಅವರ ಸಾಧನೆಯನ್ನು ಕೊಂಡಾಡಿದರು. ಅನೇಕ ಗಣ್ಯರು, ಹಿರಿಯ ಪತ್ರಕರ್ತರು ಮತ್ತು ಸಮಾಜದ ಪ್ರತಿನಿಧಿಗಳು ಭಾಗವಹಿಸಿ ಶುಭಾಶಯಗಳನ್ನು ತಿಳಿಸಿದರು.
ಈ ಪ್ರಶಸ್ತಿ ಇವರ ದೀರ್ಘಕಾಲದ ಸೇವೆಗೆ ಸಿಗುವ ಸಮರ್ಪಕ ಗೌರವವಾಗಿದ್ದು, ಮುಂದಿನ ದಿನಗಳಲ್ಲಿಯೂ ಸಮಾಜಮುಖಿ ಕಾರ್ಯಗಳನ್ನು ಇನ್ನಷ್ಟು ಉತ್ಸಾಹದಿಂದ ಮುಂದುವರಿಸಲು ಪ್ರೇರಣೆಯಾಗಲಿದೆ.

Share this