ಸಾಹಿತ್ಯ ಹರಿಯುವ ನೀರಿನಂತಾಗಬೇಕು- ಜಿಲ್ಲಾಧಿಕಾರಿ ಡಾ.ಕೆ ಆನಂದ

ಸಪ್ತಸಾಗರ ವಾರ್ತೆ ವಿಜಯಪುರ, ಆ. 31: ಸಾಹಿತ್ಯದ ಬರವಣಿಗೆ ನಿರಂತರವಾಗಿರಬೇಕು ಮತ್ತು ಸಾಹಿತ್ಯ ಯಾವಾಗಲೂ ಹರಿಯುವ ನೀರಿನಂತಾಗಬೇಕು. ಒತ್ತಡದ ಸೇವೆಯ ಮಧ್ಯೆದಲ್ಲಿ ಸಾಹಿತ್ಯ ಕೃಷಿ ಮಾಡುತ್ತಿರುವ ಅಪರ ಜಿಲ್ಲಾಧಿಕಾರಿ ಸೋಮಲಿಂಗ ಗೆಣ್ಣೂರ ಅವರ ಕಾಯ೯ ಅತ್ಯಂತ ಶ್ಲಾಘನೀಯ ಎಂದು ವಿಜಯಪುರ ಜಿಲ್ಲಾಧಿಕಾರಿ ಡಾ.ಕೆ.ಆನಂದ ಹೇಳಿದರು.
ನಗರದ ಕಂದಗಲ್ ಶ್ರೀ ಹನುಮಂತರಾಯ ರಂಗಮಂದಿರದಲ್ಲಿ ಉದ್ಘಾಟನೆಗೊಂಡ ನಮ್ಮ ಸಂವಿಧಾನ ನಮ್ಮ ಹೆಮ್ಮೆ ಹಾಗೂ ದೇವರಗೆಣ್ಣೂರ ಎಂಬ ಎರಡು ಕೃತಿಗಳ ಲೋಕಾರ್ಪಣೆ ಸಂದರ್ಭದಲ್ಲಿ ಮಾತನಾಡುತ್ತ ಕೃತಿಗಳು ಯುವಕರಿಗೆ ಸ್ಫೂರ್ತಿ ಮತ್ತು ಪ್ರೇರಣೆಯಾಗಲಿ ಎಂದರು.
ಜಿಲ್ಲಾ ಪೋಲಿಸ್ ವರಿಷ್ಠಾಧಿಕಾರಿ ಲಕ್ಷ್ಮಣ ನಿಂಬರಗಿ ಮಾತನಾಡಿ, ಸರಕಾರಿ ಅಧಿಕಾರಿಗಳಾದ ಸೋಮಲಿಂಗ ಗೆಣ್ಣೂರ, ಬಸವರಾಜ ಯಲಿಗಾರ ಮುಂತಾದವರು ಸಾಹಿತ್ಯ ರಚಿಸುತ್ತಿರುವುದು ಹೆಮ್ಮೆಯ ಸಂಗತಿ. ಸಾಹಿತ್ಯದ ಸಾಂಗತ್ಯ ಹೊಂದಿದರೆ ಮಾನಸಿಕ ನೆಮ್ಮದಿ ಪಡೆಯಬಹುದು ಎಂದರು.
ಗ್ರಂಥಗಳ ಲೋಕಾರ್ಪಣೆ ನೆರವೇರಿಸಿ ಮಾತನಾಡಿದ ಕನ್ನಡ ಸಾಹಿತ್ಯ ಅಕಾಡೆಮಿಯ ಅಧ್ಯಕ್ಷ ಎಲ್.ಎಸ್. ಮುಕುಂದರಾಜ್ ಮಾತನಾಡಿ, ಸಂವಿಧಾನ ನಮ್ಮೆಲ್ಲರಿಗೂ ಸಮಾನ ಹಕ್ಕುಗಳನ್ನು ನೀಡಿ ಸಮಥ೯ರನ್ನಾಗಿಸಿದೆ. ಅದನ್ನು ನಾವೆಲ್ಲರೂ ಅನುಪಾಲನೆ ಮಾಡುವುದರೊಂದಿಗೆ ಸಂವಿಧಾನವೇ ಧಮ೯ವೆಂದು ತಿಳಿದು ಬದುಕೋಣ ಎಂದರು.
ಸಮಾರಂಭ ಉದ್ಘಾಟಿಸಿ ಮಾತನಾಡಿದ ಕಲಬುರ್ಗಿ ವಿಶ್ವವಿದ್ಯಾಲಯದ ಕನ್ನಡ ಅಧ್ಯಯನ ಪೀಠದ ನಿದೇ೯ಶಕ ಪ್ರೊ. ಎಚ್.ಟಿ ಪೋತೆ ಮಾತನಾಡಿ, ಮಹಿಳಾ ಹಕ್ಕುಗಳನ್ನು ನೀಡುವುದರ ಮೂಲಕ ಸಮಥ೯ರನ್ನಾಗಿ ಮಾಡಿದ ಕೀರ್ತಿ ಡಾ. ಬಾಬಾಸಾಹೇಬ ಅಂಬೇಡ್ಕರ್ ಅವರಿಗೆ ಸಲ್ಲುತ್ತದೆ. ಅತ್ಯಂತ ಕಡುಬಡತನದಲ್ಲಿ ವಿದ್ಯಾಭ್ಯಾಸ ಮಾಡಿ ಇಂದು ಅಪರ ಜಿಲ್ಲಾಧಿಕಾರಿಗಳಾದ ಸೋಮಲಿಂಗ ಗೆಣ್ಣೂರ ಅವರ ಶ್ರಮದ ಪ್ರತಿಫಲ ಬಾಲ್ಯದಿಂದಲೇ ಅನೇಕ ಅವಮಾನಗಳನ್ನು ಸಹಿಸಿಕೊಂಡು ತಹಶೀಲ್ದಾರನಾಗಬೇಕೆಂಬ ಗುರಿಯೊಂದಿಗೆ ಜ್ಞಾನಾರ್ಜನೆ ಮಾಡಿ ಕನಸನ್ನು ನನಸು ಮಾಡಿಕೊಂಡಿದ್ದು ಒಂದು ಇತಿಹಾಸ ಎಂದರು.
ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿದ್ದ ಕನಾ೯ಟಕ ರಾಜ್ಯ ಅಕ್ಕಮಹಾದೇವಿ ಮಹಿಳಾ ವಿಶ್ವವಿದ್ಯಾಲಯದ ಕುಲಪತಿ ಪ್ರೊ. ವಿಜಯಾ ಕೋರಿಶೆಟ್ಟಿ ಮಾತನಾಡಿ, ಸಂವಿಧಾನದ ಅರಿವು ಎಲ್ಲರೂ ಮಾಡಿಕೊಳ್ಳಬೇಕು. ಅಪರ ಜಿಲ್ಲಾಧಿಕಾರಿ ಸೋಮಲಿಂಗ ಗೆಣ್ಣೂರ ಯುವಕರಿಗೆ ಸ್ಫೂರ್ತಿಯಾಗಿದ್ದಾರೆ. ಅವರ ಎರಡೂ ಗ್ರಂಥಗಳು ಸಮಾಜಮುಖಿಯಾಗಿವೆ ಎಂದು ಅಭಿಪ್ರಾಯಪಟ್ಟರು.
ಕನ್ನಡ ಸಾಹಿತ್ಯ ಪರಿಷತ್ತಿನ ಅಧ್ಯಕ್ಷ ಹಾಸಿಂಪೀರ ವಾಲೀಕಾರ, ಹಿರಿಯ ಸಾಹಿತಿ ದೊಡ್ಡಣ್ಣ ಭಜಂತ್ರಿ ಮಾತನಾಡಿದರು.
ಮೇಜರ್ ಸಿದ್ದಲಿಂಗಯ್ಯ ಹಿರೇಮಠ, ಇಂಡಿ ಉಪವಿಭಾಗಾಧಿಕಾರಿ ಅನುರಾಧಾ ವಸ್ತ್ರದ, ಸುರೇಶ ಶೇಡಶ್ಯಾಳ, ನಾಗರಾಜ್ ಲಂಬು, ಅಡಿವೆಪ್ಪ ಸಾಲಗಲ್, ಡಾ. ಮಲ್ಲಿಕಾಜು೯ನ ಸಂಧಿಮನಿ, ರಮೇಶ ಆಸಂಗಿ, ರಾಜಶೇಖರ ಯಡಹಳ್ಳಿ, ಸುನೀಲ ಉಕ್ಕಲಿ, ವಿಜಯಕುಮಾರ ಅಜೂರ ವೇದಿಕೆಯ ಮೇಲೆ ಉಪಸ್ಥಿತರಿದ್ದರು.
ಸಾಹಿತಿ ಡಾ. ಸುಜಾತಾ ಚಲವಾದಿ ಹಾಗೂ ಪ್ರಾಧ್ಯಾಪಕ ಡಾ.ನಾಗರಾಜ ಮುರಗೋಡ ಗ್ರಂಥಗಳನ್ನು ಪರಿಚಯಿಸಿದರು. ಮೈಸೂರಿನ ಕವಿತಾ ಪ್ರಕಾಶನದ ಗಣೇಶ ಅಮೀನಗಡ ಪ್ರಾಸ್ತಾವಿಕವಾಗಿ ಮಾತನಾಡಿದರು.
ಲೇಖಕರಾದ ಅಪರ ಜಿಲ್ಲಾಧಿಕಾರಿ ಸೋಮಲಿಂಗ ಗೆಣ್ಣೂರ ಮಾತನಾಡಿ, ಬಡತನದಿಂದ ಬಳಲಿ ಧೃತಿಗೆಡದೇ ವಿದ್ಯಾಭ್ಯಾಸ ಮಾಡಿ ಇಲ್ಲಿಗೆ ತಲುಪಿದ್ದು ನನ್ನ ಶ್ರಮ ಸಾರ್ಥಕವಾಯಿತೆನ್ನುವ ನೆಮ್ಮದಿ ಇದೆ ಎಂದರು.
ಚನ್ನಬಸಮ್ಮ ಚಂದಪ್ಪ ಪ್ರತಿಷ್ಠಾನದ ಉಪಾಧ್ಯಕ್ಷ ಅಭಿಷೇಕ ಚಕ್ರವರ್ತಿ ಸ್ವಾಗತಿಸಿ ಗೌರವಿಸಿದರು. ಮೋಹನ ಕಟ್ಟಿಮನಿ ನಿರೂಪಿಸಿದರು. ರವಿ ಕಿತ್ತೂರ ಗೌರವಿಸಿದರು.
ವೀರೇಶ ವಾಲಿ ಹಾಗೂ ತಂಡ ಪ್ರಾರ್ಥಿಸಿದರು. ರಾವುತ ತಳಕೇರಿ ಕ್ರಾಂತಿಗೀತೆ ಹಾಡಿದರು. ಡಾ.ಶಿವಾನಂದ ಮಾಸ್ತಿಹೊಳಿ, ಬಸವರಾಜ ಯಲಿಗಾರ, ಸುನೀಲ ಕಾಂಬಳೆ, ಬದ್ರುದ್ದೀನ್ ಸೌದಾಗರ, ಮಹೇಶ ಪೋತದಾರ, ಪುಂಡಲೀಕ ಮಾನವರ, ಪ್ರಶಾಂತ ಪೂಜಾರಿ, ಸಂತೋಷ ಭೋವಿ, ಮಹಾವೀರ ಬೋರಣ್ಣವರ, ರಾಜಶೇಖರ ದೈವಾಡಿ, ಅಮರೇಶ ದೊಡಮನಿ, ರಾಜಶೇಖರ ಡಂಬಳ, ತಹಶೀಲ್ದಾರರುಗಳಾದ ಪ್ರಶಾಂತ ಚನಗೊಂಡ, ಶಾಂತಲಾ ಚಂದನ, ಸಂತೋಷ ಮ್ಯಾಗೇರಿ, ಎ.ಡಿ ಅಮರವಾಡಗಿ, ಸುರೇಶ ಚಾವಲರ, ವಾಯ್ ಸೋಮನ ಕಟ್ಟಿ, ವಿನಯಾ ಹೂಗಾರ, ಕೀರ್ತಿ, ಸಂಜಯ ಇಂಗಳೆ, ಜಿ.ಎಸ್ ಕಡಕಭಾವಿ, ಪ್ರಕಾಶ ಸಿಂದಗಿ, ಕರೆಪ್ಪ ಬೆಳ್ಳಿ, ಪ್ರೇಮಸಿಂಗ್ ಚವ್ಹಾಣ, ಶಿರಸ್ತೇದಾರರುಗಳಾದ ಡಿ.ವಾಯ್ ಕಟ್ಟಿಮನಿ, ಎಸ್.ಎಸ್ ತೇರದಾಳ, ಎಸ್.ಡಿ. ಬಿಜಾಪುರ, ಅನ್ನಪೂರ್ಣ ತೆಲಗಿ, ಬಿ.ಎಸ್ ರಾಜಾಪೂರ, ರಾಜಕುಮಾರ ಜೊಲ್ಲೆ, ಪ್ರದೀಪ ತಳಕೇರಿ, ರಾಯಗೊಂಡ ಜಾನರ, ಸುರೇಶ ಘೋಣಸಗಿ, ಶ್ರೀನಾಥ ಪೂಜಾರಿ, ಪುಂಡಲೀಕ ಮುರಾಳ, ಮಹೇಶ ಕ್ಯಾತನ್, ಡಾ .ಮಾಧವ ಗುಡಿ, ಡಾ. ಶ್ರೀಶೈಲ ನಾಗರಾಳ, ಡಾ. ಸಂಗಮೇಶ ಮೇತ್ರಿ, ಯಮನಪ್ಪ ಸಿದರೆಡ್ಡಿ, ಬಸವಂತ ಗುಣದಾಳ, ಅನೀಲ ಹೊಸಮನಿ, ಶಿವಪುತ್ರ ಅಜಮನಿ, ಸಿದ್ದು ರಾಯಣ್ಣವರ, ಅಶೋಕ ಚಲವಾದಿ, ವಾಯ್.ಎಚ್. ವಿಜಯಕರ, ಅಂಬಾದಾಸ ಜೋಶಿ ಮುಂತಾದವರು ಉಪಸ್ಥಿತರಿದ್ದರು.

Share