ಬಿ ಎಲ್ ಡಿ ಇ ಟೀಚರ್ಸ್ ಕಾಲೋನಿಯಲ್ಲಿ ಮಹಾಮೃತ್ಯುಂಜಯ ಜಪ

ಸಪ್ತಸಾಗರ ವಾರ್ತೆ, ವಿಜಯಪುರ, ಸೆ. 8: ರಾಹುಗ್ರಸ್ತ ಚಂದ್ರಗ್ರಹಣ ಅಂಗವಾಗಿ ನಗರದ ಬಿ.ಎಲ್.ಡಿ.ಇ ಟೀಚರ್ಸ್ ಕಾಲನಿಯ ಬಿ. ಎಂ.‌ಪಾಟೀಲ ನಗರದ ಶಿವಾಲಯದಲ್ಲಿ ಲೋಕಕಲ್ಯಾಣಕ್ಕಾಗಿ ಮತ್ತು ಅಶುಭ ಫಲ ಇರುವ ರಾಶಿಯವರಿಗೆ ಶುಭ ಫಲವನ್ನು ಬಯಸಿ ಸಂಕಲ್ಪಿಸಿ ಶ್ರೀ ಫಕೀರಯ್ಯ ಶಾಸ್ತ್ರಿಗಳು ಹಾಗೂ ಶ್ರೀ ಸಿದ್ದರಾಮಯ್ಯ ಶಾಸ್ತ್ರಿಗಳ ನೇತೃತ್ವದಲ್ಲಿ ಮಹಾಮೃತ್ಯುಂಜಯ ಜಪ ನಡೆಯಿತು.
ಬಡಾವಣೆಯ ಸದ್ಭಕ್ತರು ಇದರಲ್ಲಿ ಪಾಲ್ಗೊಂಡರು. ಸೋಮವಾರ ಗ್ರಹಣ ಮೋಕ್ಷದ ನಂತರ ಮಹಾಶಿವನಿಗೆ ವಿಶೇಷವಾಗಿ ರುದ್ರಾಭಿಷೇಕ ನೆರವೇರಿಸಿ ಸಮಾಜದ ಒಳಿತಿಗಾಗಿ, ಸಾರ್ವಜನಿಕರ ಆಯುಷ್ಯ ಆರೋಗ್ಯ ಅಭಿವೃದ್ಧಿಗಾಗಿ ಮಹಾಮೃತ್ಯುಂಜಯ ಹೋಮವನ್ನು ಮಾಡಲಾಯಿತು. ಬಡಾವಣೆಯ ಹಾಗೂ ಸುತ್ತಮುತ್ತಲಿನ ಎಲ್ಲ ಸದ್ಭಕ್ತರು ಈ ಪೂಜೆ, ಹವನದಲ್ಲಿ ಕಾರ್ಯದಲ್ಲಿ ಪಾಲ್ಗೊಂಡರು. ನಂತರ ಪ್ರಸಾದ ವಿನಿಯೋಗ ಮಾಡಲಾಯಿತು.

Share this