ಮಹಾತ್ಮಾ ಜ್ಯೋತಿಬಾ ಫುಲೆ ಜಯಂತಿ: ಶಿಕ್ಷಕ ದಂಪತಿಗಳಿಂದ ಜಾಥಾ, ಬುದ್ಧ ಬಸವ ಬಾಬಾಸಾಹೇಬ ಅಂಬೇಡ್ಕರ್ ಪುಸ್ತಕ ಮೇಳ

ಸಪ್ತಸಾಗರ ವಾರ್ತೆ,ವಿಜಯಪುರ, ಏ. 11 : ವಿಜಯಪುರ ನಗರದ ದರಾಬಾರ್ ಪ್ರೌಢ ಶಾಲೆ ಮೈದಾನದಲ್ಲಿ ಮೇ ಸಾಹಿತ್ಯ ಮೇಳ ವಿಜಯಪುರ ಬಳಗ ದಲಿತ ಮತ್ತು ಪ್ರಗತಿಪರ ಸಂಘಟನೆಗಳ ಆಶ್ರಯದಲ್ಲಿ ಏಪ್ರಿಲ್ 10ರಿಂದ 14ರ ವರೆಗೆ 5ದಿನಗಳ ಕಾಲ ಹಮ್ಮಿಕೊಂಡಿರುವ ಬಿಜಾಪುರ ಬುದ್ಧ, ಬಸವ, ಬಾಬಾಸಾಹೇಬ ಅಂಬೇಡ್ಕರ್ ಪುಸ್ತಕ ಮೇಳದಲ್ಲಿ ಎರಡನೇ ದಿನ ಮಹಾತ್ಮಾ ಜ್ಯೋತಿಬಾ ಫುಲೆ ಜಯಂತಿ ಅಂಗವಾಗಿ ನಗರದ ಸಾವಿತ್ರಿಬಾಯಿ ಫುಲೆ ಮಾರ್ಗದಿಂದ ಪುಸ್ತಕ ಮೇಳದ ಸ್ಥಳದ ವರೆಗೆ ಶಿಕ್ಷಕ ದಂಪತಿಗಳ ಜಾಥಾ ಜರುಗಿತು.
ಶಿಕ್ಷಕ ದಂಪತಿಗಳ ಜಾಥಾಕ್ಕೆ ಎಸ್ ಸಿ ಎಸ್ ಟಿ ನೌಕರರ ಸಮನ್ವಯ ಸಮಿತಿ ಅಧ್ಯಕ್ಷ ಬಿ.ಎಚ್. ನಾಡಗಿರಿ, ಪ್ರಧಾನ ಕಾರ್ಯದರ್ಶಿ ಸೂರ್ಯಕಾಂತ ಹೊಸಮನಿ, ಹೊನಮಲ್ಲಗೌಡ ಸಾರವಾಡ, ಎಸ್. ಎಂ. ಡೋಣಿ, ಆಶಾ ಕಟ್ಟಿಮನಿ, ನೀಲಾಂಬಿಕಾ ಬಿರಾದಾರ, ರಶ್ಮಿ ಗುಣಕಿ, ವಿಜಯಶ್ರೀ ಬಿಜಾಪುರ, ಹನಮಂತ ಮಮದಾಪುರ, ಸಲೀಂ ಕಲಾದಗಿ ಚಾಲನೆ ನೀಡಿದರು.
ಜಾಥಾದಲ್ಲಿ ಬುದ್ಧ ಬಸವ, ಬಾಬಾಸಾಹೇಬ ಅಂಬೇಡ್ಕರ್ ಮತ್ತು ದೇಶದ ಮೊದಲ ಶಿಕ್ಷಕ ದಂಪತಿಗಳಾದ ಸಾವಿತ್ರಿಬಾಯಿ ಫುಲೆ ಮತ್ತು ಜ್ಯೋತಿಬಾ ಫುಲೆ ದಂಪತಿಗಳಿಗೆ ಜಯಘೋಷ ಮೊಳಗಿದವು.
ಶಿಕ್ಷಕ ದಂಪತಿಗಳ ಜಾಥಾದಲ್ಲಿ ದ್ರೌಪತಿ ನಾಗರಾಜ ಹೊನಸೂರೆ, ಶೋಭಾ ಮಲ್ಲಿಕಾರ್ಜುನ ಕನ್ನೂರ, ಸಾವಿತ್ರಿ ದೇವರಾಜ ಶೃಂಗೇರಿ, ಸಾವಿತ್ರಿ ಗಣಪತಿ ಚವ್ಹಾಣ, ರೇಣುಕಾ ಶಿವಪ್ಪ ಚಲವಾದಿ, ಜಯಶ್ರೀ ಸಿದ್ರಾಮಪ್ಪ ತದ್ದೇವಾಡಿ, ನೇತ್ರಾವತಿ ವಿಶ್ವನಾಥ ಮೇತ್ರಿ, ಶಿಲ್ಪಶ್ರೀ ನಿಜು ಮೇಲಿನಕೇರಿ, ವೈಶಾಲಿ ವಿಜಯಾನಂದ ಮುದ್ದೇಬಿಹಾಳ, ವಿಜಯಲಕ್ಷ್ಮಿ ಜಗದೀಶ ಹುಲ್ಯಾಳ, ಎಲ್ ಟಿ ಕೊಣ್ಣೂರ, ಎಸ್.ಎ. ಬಿರಾದಾರ, ಎಸ್.ಎಸ್. ಕುಲಕರ್ಣಿ, ಕೆ.ಎಚ್. ಪೂಜಾರಿ ಶಿಕ್ಷಕ ದಂಪತಿಗಳು ಭಾಗವಹಿಸಿದ್ದರು.
ಈ ಸಂದರ್ಭದಲ್ಲಿ ಬಸವರಾಜ ಸೂಳಿಬಾವಿ, ಅನಿಲ ಹೊಸಮನಿ, ಸುರೇಶ ಘೊಣಸಗಿ, ಚೆನ್ನು ಕಟ್ಟಿಮನಿ, ಸುರೇಶ ಬಿಜಾಪುರ, ವೈ.ಎಸ್. ಗುಣಕಿ, ವೈ.ಎಚ್. ಲಂಬು, ದೊಡ್ಡಣ್ಣ ಭಜಂತ್ರಿ, ಅನಿಲ ಇಕ್ಕಡೆ , ಚಂದ್ರಶೇಖರ ಹೊಸಮನಿ, ಲಾಯಪ್ಪ ಇಂಗಳೆ, ಕಲ್ಲಪ್ಪ ಶಿವಶರಣ, ಗುರುರಾಜ ಹಂದ್ರಾಳ, ಶರಣು ಕಿರಣಗಿ, ಸಂಘರ್ಷ ಹೊಸಮನಿ ಸೇರಿ ನೂರಾರು ಜನ ಉಪಸ್ಥಿತರಿದ್ದರು.

Share this