ಮಹಿಂದ್ರಾ ಬೋಲೆರೋ ವಾಹನ ಹಸ್ತಾಂತರ

ಸಪ್ತಸಾಗರ ವಾರ್ತೆ,ವಿಜಯಪುರ,ಸೆ. 10:
ಶಾಸಕರ ಸ್ಥಳೀಯ ಪ್ರದೇಶಾಭಿವೃದ್ಧಿ ಯೋಜನೆಯಡಿ 2025-26 ನೇ ಸಾಲಿನಲ್ಲಿ ಮಂಜೂರಿಸಲಾದ ರೂ.11 ಲಕ್ಷ ಅನುದಾನದಲ್ಲಿ ಖರೀದಿಸಲಾದ ನೂತನ ಮಹಿಂದ್ರಾ ಬೋಲೆರೋ ವಾಹನವನ್ನು ನಗರ ಶಾಸಕ ಬಸನಗೌಡ ಪಾಟೀಲ ಯತ್ನಾಳ ಅವರು ಬುಧವಾರ ವಾಹನ ಸಾರಿಗೆ ವಿಭಾಗ, ಆರಕ್ಷಕ ನಿರೀಕ್ಷಕರು, ಡಿಎಆರ್ ವಿಜಯಪುರ ಅವರಿಗೆ ಕೀ ನೀಡುವ ಮೂಲಕ ಹಸ್ತಾಂತರಿಸಿದರು.
ಈ ಸಂದರ್ಭದಲ್ಲಿ ಡಿ.ವೈ.ಎಸ್.ಪಿಗಳಾದ ಸುನೀಲ ಕಾಂಬ್ಳೆ, ಮುರಗೆಪ್ಪ ಉಪಾಸೆ, ಸಿಪಿಐ ಗಳಾದ ರವಿ ಯಡವಣ್ಣವರ, ರಾಯಗೊಂಡ ಜಾನವಾರ, ಪರಶುರಾಮ ಮನಗೂಳಿ, ಪಿ.ಎಸ್.ಐ ಯತಿಂದ್ರ, ಆರ್.ಪಿ.ಐ ಈರಸಂಗಪ್ಪ ತೇಲಿ, ಆರ್.ಎಸ್.ಐ ಶ್ರೀರಂಗಪ್ಪ, ಎ.ಆರ್.ಎಸ್.ಐ ಅಶೋಕ ಕಾಂಬಳೆ, ಹವಾಲ್ದಾರ್ ವಿಶ್ವನಾಥ ಚವ್ಹಾಣ ಮತ್ತಿತರರು ಇದ್ದರು.

Share