ತಾಯಿ ಹಾಲು ಬ್ಯಾಂಕ್ ಸೌಲಭ್ಯ ಪಡೆದುಕೊಳ್ಳಿ: ಡಾ. ಮಾಸ್ತಿಹೊಳಿ ಧಾತ್ರಿ ಸಮಗ್ರ ಹಾಲುಣಿಸುವಿಕೆಯ ಮಹತ್ವದ ಕಾರ್ಯಾಗಾರ‌ ಉದ್ಘಾಟನೆ

ಸಪ್ತಸಾಗರ ವಾರ್ತೆ,ವಿಜಯಪುರ, ಜೂ. 10:
ಅವಧಿಗೂ ಮುನ್ನ ಶಿಶು ಜನನದಿಂದ‌ ಅಮೃತಕ್ಕೆ ಸಮಾನವಾದ ಎದೆಹಾಲು ಲಭ್ಯವಾಗದಿದ್ದಲ್ಲಿ ಜಿಲ್ಲಾಸ್ಪತ್ರೆ ಆವರಣದಲ್ಲಿರುವ ಹಾಲಿನ‌ ಬ್ಯಾಂಕ್ ಸೌಲಭ್ಯ ಪಡೆದುಕೊಳ್ಳಬೇಕು ಎಂದು ಜಿಲ್ಲಾಸ್ಪತ್ರೆ ಶಸ್ತ್ರ ಚಿಕಿತ್ಸಕ ಡಾ. ಶಿವಾನಂದ ಮಾಸ್ತಿಹೊಳಿ ಹೇಳಿದರು.
ಜಿಲ್ಲಾ ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಇಲಾಖೆ, ಜಿಲ್ಲಾಸ್ಪತ್ರೆ, ಸಮಗ್ರ ಹಾಲುಣಿಸುವಿಕೆಯ ನಿರ್ವಹಣೆ ಕೇಂದ್ರ ಮತ್ತು ತಾಯಂದಿರ ಹಾಲಿನ ಬ್ಯಾಂಕ್ ಹಾಗೂ ಸುಶೇನಾ ಹೆಲ್ತ್ ಫೌಂಡೇಶನ್ ಹೈದ್ರಾಬಾದ ಇವರ ಸಹಯೋಗದಲ್ಲಿ ಜಿಲ್ಲಾ ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಅಧಿಕಾರಿಗಳ ಕಾರ್ಯಾಲಯದ ಆರೋಗ್ಯ ಸೌಧ ಸಭಾ ಭವನದಲ್ಲಿ ಧಾತ್ರಿ ಸಮಗ್ರ ಹಾಲುಣಿಸುವಿಕೆಯ ಮಹತ್ವದ ಬಗ್ಗೆ, ಕ್ಷೇತ್ರ ಆರೋಗ್ಯ ಶಿಕ್ಷಣಾಧಿಕಾರಿಗಳು, ಹಿರಿಯ ಪ್ರಾಥಮಿಕ ಆರೋಗ್ಯ ಸುರಕ್ಷಣಾಧಿಕಾರಿಗಳು ಹಾಗೂ ನಗರ ಆರೋಗ್ಯ ಕೇಂದ್ರದ ಆಶಾ ಕಾರ್ಯಕರ್ತೆಯರಿಗೆ ಹಮ್ಮಿಕೊಂಡಿದ್ದ ಒಂದು ದಿನದ ತರಬೇತಿ ಕಾರ್ಯಾಗಾರವನ್ನು ಉದ್ಘಾಟಿಸಿ ಅವರು ಮಾತನಾಡಿದರು.‌
ಆಗ ತಾನೇ ಜನಿಸಿದ ಶಿಶುವಿನ ತಾಯಿಯ ಎದೆಯಲ್ಲಿ ಹಾಲು ಉತ್ಪತ್ತಿಯಾಗದೇ ಇರುವ, ಅಗತ್ಯ ಇರುವ ಶಿಶುವಿಗೆ, ತಾಯಿ ಮಗುವಿಗೆ ಎದೆಹಾಲು ಉಣಿಸಲು ಸಾಧ್ಯವಾಗದ ಸಂದರ್ಭದಲ್ಲಿ ವಿಜಯಪುರದ ತಾಯಿ ಮತ್ತು ಮಕ್ಕಳ ಆಸ್ಪತ್ರೆ ಜಿಲ್ಲಾ ಆಸ್ಪತ್ರೆ ಆವರಣದಲ್ಲಿರುವ ತಾಯಿಯ ಹಾಲಿನ ಬ್ಯಾಂಕ
ಸೇವೆ ಪಡೆದುಕೊಳ್ಳಬೇಕು ಎಂದರು.
ತಾಯಿಯ ಎದೆಹಾಲನ್ನು ಅಮೃತ ಎಂದೇ ಹೇಳಲಾಗುತ್ತದೆ. ತಾಯಿ-ಮಗುವಿನ ಬಾಂಧವ್ಯವನ್ನು ಕಾಂಗರೂ ಪರಿಕಲ್ಪನೆ ಎಂದೂ ಕರೆಯಲಾಗುತ್ತದೆ. ತಾಯಿ ಹಾಲನ್ನು ಉಣಿಸುವ ಸಮಯದ ಈ ಬಾಂಧವ್ಯ ಮಗುವಿನ ಜೀವನ ಪೂರ್ತಿ ಸಂಬಂಧವನ್ನು ಕಾಪಾಡುವಲ್ಲಿ ಪೂರಕವಾಗಿರುತ್ತದೆ. ಮಗುವು ಜನಿಸಿದ ತಕ್ಷಣ ಉತ್ಪತ್ತಿಯಾಗುವ ಕೊಲಸ್ಟಮ್ ಮಗುವಿಗೆ ಜೀವನ ಪೂರ್ತಿ ಆಂತರಿಕ ರೋಗನಿರೋಧಕ ಶಕ್ತಿಯನ್ನು ವೃದ್ಧಿಸುತ್ತದೆ ಎಂದರು.
ವಿಜಯಪುರ ಸರ್ಕಾರಿ ಆಸ್ಪತ್ರೆಯು ಉತ್ತರ ಕರ್ನಾಟಕದಲ್ಲಿ ಮೊದಲ ಬಾರಿಗೆ ಎದೆಹಾಲು ಬ್ಯಾಂಕ್ ಸ್ಥಾಪಿಸಿದೆ. ಇದು ವಾರ್ಷಿಕವಾಗಿ 2 ಸಾವಿರ ನವಜಾತ ಶಿಶುಗಳಿಗೆ ಸೇವೆ ಸಲ್ಲಿಸಲಿದೆ ಎಂದರು.
ದಾನಿಗಳಿಂದ ತಾಯಿಯ ಹಾಲನ್ನು ಸರಿಯಾದ ರೀತಿಯಲ್ಲಿ ಪಡೆದು ಶೇಖರಿಸಲಾಗುತ್ತದೆ. ಹಾಲನ್ನು ಪಡೆಯುವ ಮುನ್ನ ತಾಯಿಯ ಅನುಮತಿಯನ್ನು ಪಡೆಯಬೇಕಾಗುತ್ತದೆ. ಅಲ್ಲದೆ ತಾಯಿಗೆ ಅವಶ್ಯಕವಿರುವ ರಕ್ತ ಪರೀಕ್ಷೆಗಳನ್ನು 3. ‘2’, ”, 5, -1, 2, ಸೋಂಕುಗಳು ದಾನಿಯಾದ ತಾಯಿಗೆ ಇಲ್ಲದಿರುವುದನ್ನು ಖಚಿತ
ಪಡಿಸಿಕೊಳ್ಳಬೇಕಾಗುತ್ತದೆ ಎಂದರು.‌
ಹೈದರಾಬಾದ್ ನ ಹೆಲ್ತ್ ಫೌಂಡೇಶನ್ ಹೈದರಾಬಾದ್‌ ಸ್ಥಾಪಕ ಮತ್ತು ಕಾರ್ಯದರ್ಶಿ ಡಾ. ಸಂತೋಷ ಜಿ ಸುಶೇನಾ ಮಾತನಾಡಿ, ಸ್ವಯಂ ಪ್ರೇರಿತ ದಾನಿಗಳು, ಮಗುವನ್ನು ಕಳೆದುಕೊಂಡ ತಾಯಂದಿರು, ಕೆಲಸಕ್ಕೆ ಹೋಗುವ ತಾಯಂದಿರು ಹಾಲನ್ನು ದಾನ ಮಾಡಬಹುದಾಗಿದೆ. ನವಜಾತ ಶಿಶುಗಳಲ್ಲಿ ಜೀರ್ಣಾಂಗವ್ಯೂಹದ ನ್ಯೂನ್ಯತೆಗಳು ಹಾಗೂ ಕಾಯಿಲೆಗಳು ಇದ್ದಲ್ಲಿ ಅವಧಿಗೆ ಮುನ್ನ ಜನಿಸಿದ ಮಕ್ಕಳಲ್ಲಿ (1500ಜಿಎಂ) ಕ್ಕಿಂತ ತೂಕ ಕಡಿಮೆಯಿರುವ ಶಿಶುಗಳು) ತಾಯಿಂದಿರ ಹಾಲಿನ ಬ್ಯಾಂಕಿನ ಉಪಯೋಗ ಪಡೆಯಬಹುದಾಗಿದೆ ಎಂದರು.
ಜಿಲ್ಲಾ ರೋಗವಾಹಕ ಅಶ್ರೀತ ನಿಯಂತ್ರಣಾ ಅಧಿಕಾರಿ ಡಾ. ಜಾನ್ ಕಟವಟೆ ಮಾತನಾಡಿ, ಅನಾರೋಗ್ಯ ಅಥವಾ ಸಾಕಷ್ಟು ಪ್ರಮಾಣ ಹಾಲು ಉತ್ಪಾದನೆ ಸಾಧ್ಯವಾಗದ ಸಮಯದಲ್ಲಿ ಸುಮಾರು ಶೇ. 20 ರಷ್ಟು ನವಜಾತ ಶಿಶುಗಳಿಗೆ ದಾನಿ ತಾಯಿಯ ಹಾಲು ಅಗತ್ಯವಿದೆ. ಹೆರಿಗೆ ಆಸ್ಪತ್ರೆಯಲ್ಲಿ 900 ತಾಯಂದಿರಲ್ಲಿ 150 ತಾಯಂದಿರನ್ನು ಹಾಲು ದಾನ ಮಾಡಲು ಮನವೊಲಿಸುವುದು ಸಹ ಬ್ಯಾಂಕಿನ ಆರಂಭಿಕ ಗುರಿಗಳನ್ನು ಪೂರೈಸುತ್ತದೆ ಎಂದರು.
ತರಬೇತಿ ಕಾರ್ಯಾಗಾರದಲ್ಲಿ ಆರೋಗ್ಯ ವ್ಯವಸ್ಥೆಗಳ ಬಲವರ್ಧನೆಯ ನಿರ್ದೇಶಕ ಡಾ. ಮುಜಾಮದಾರ, ಚಕ್ರವರ್ತಿ, ಡಾ. ಕಾಶಿನಾಥ ಲಕ್ಕರಾಜ, ಡಾ. ಸುಧೀರ ಚವ್ಹಾಣ, ನವಜಾತ ಶಿಶುವೈದ್ಯಶಾಸ್ತ್ರ ವಿಭಾಗ ಡಾ. ಅನುಷಾ,ಜಿಲ್ಲಾ ಆರೋಗ್ಯ ಶಿಕ್ಷಣಾಧಿಕಾರಿ ಸುರೇಶ ಹೊಸಮನಿ,ನವಜಾತ ಚಿಕ್ಕ ಮಕ್ಕಳ ತಜ್ಞರು,ಉಪ ಜಿಲ್ಲಾ ಆರೋಗ್ಯ ಶಿಕ್ಷಣಾಧಿಕಾರಿಗಳಾದ ಶಂಕರ ಚಲವಾದಿ ಮತ್ತು ರೇಖಾ ದಶವಂತ, ಎನ್. ಆರ್. ಬಾಗವಾನ ತಾಲೂಕಾ ಕ್ಷೇತ್ರ ಆರೋಗ್ಯ ಶಿಕ್ಷಣಾಧಿಕಾರಿಗಳು, ನಗರ ಆರೋಗ್ಯ ಕೇಂದ್ರದ ಆಶಾ ಕಾರ್ಯಕರ್ತೆಯರು, ಧಾತ್ರಿ ತಾಯಿಯ ಹಾಲಿನ ಬ್ಯಾಂಕ್ ಮತ್ತು ಸಿಎಲ್ ಎಂಸಿ ತಂಡಗಳು ಹಾಗೂ ಆರೋಗ್ಯ ಇಲಾಖೆಯ ಸಿಬ್ಬಂದಿ ವರ್ಗದವರು ಇದ್ದರು.

Share this