ಸಪ್ತಸಾಗರ ವಾರ್ತೆ ವಿಜಯಪುರ, ಡಿ. 2: ಸರ್ಕಾರಿ ಮೆಡಿಕಲ್ ಕಾಲೇಜಿಗೆ ಅಗ್ರಹಿಸಿ ಹೋರಾಟ ಸಮಿತಿಯಿಂದ ಕೈಗೊಂಡ ಅನಿರ್ದಿಷ್ಟ ಧರಣಿ ಮಂಗಳವಾರ 76ನೇ ದಿನಕ್ಕೆ ಕಾಲಿಟ್ಟಿದ್ದು, ಈ ಧರಣಿಗೆ ಹ್ಯೂಮನ್ ರೈಟ್ಸ್ ಜಸ್ಟಿಸ್ ಅಸೋಸಿಯೇಷನ್ ವಿಜಯಪುರ ಜಿಲ್ಲಾ ಘಟಕ ಬೆಂಬಲ ವ್ಯಕ್ತಪಡಿಸಿದೆ.
ಧರಣಿಯನ್ನು ಉದ್ದೇಶಿಸಿ ರಾಜ್ಯ ಕೋಅರ್ಡಿನೇಟರ್ ಆನಂದ ಔದಿ ಮಾತನಾಡಿ, ಸರ್ಕಾರದ ಪ್ರಭಾವಿ ಸಚಿವರು ಈ ವಿಷಯದಲ್ಲಿ ಮುತುವರ್ಜಿ ವಹಿಸದೆ ಇರುವುದು ತಪ್ಪು. ಇದನ್ನು ನಾವು ಉಗ್ರವಾಗಿ ಖಂಡಿಸುತ್ತೇವೆ. ಕೂಡಲೇ ನಮ್ಮ ಸಚಿವರು ಮುಖ್ಯಮಂತ್ರಿಗಳ ಮನವೊಲಿಸಿ ಸರ್ಕಾರಿ ವೈದ್ಯಕೀಯ ಕಾಲೇಜನ್ನು ಸ್ಥಾಪಿಸಬೇಕು. ಇಲ್ಲದೆ ಹೋದರೆ ಉಗ್ರ ಹೋರಾಟ ಕೈಗೊಳ್ಳಲಾಗುವುದು ಎಂದರು.
ಈ ಬಗ್ಗೆ ಚಳಿಗಾಲದ ಅಧಿವೇಶನದಲ್ಲಿ ಅಧಿಕೃತ ಘೋಷಣೆ ಮಾಡಬೇಕೆಂದು ಸರಕಾರಕ್ಕೆ ಒತ್ತಾಯಿಸಿದರು. ಅಸೋಸಿಯೇಷನ್ ನ ಸದಸ್ಯರಾದ ದಾದಾಪೀರ್ ಬಾಗಮಾರೆ, ಡಾ.ಆರ್.ಬಿ. ಕುಲಕರ್ಣಿ, ಸರ್ದಾರ ಸತ್ತಾರ, ಅಶೋಕ ಬಂಡರಗಲ್ಲ, ಗುಲಾಮ ರಸೂಲ್, ಪ್ರಕಾಶ ರಾಥೋಡ, ಫಜಲ್ ಖಾನ್ ಜಹಗೀರಾದಾರ್, ಸೈಯದ್ ಅಬ್ದುಲ್ ಲತೀಪ್ ಭಕ್ಷಿ ಭಾಗವಹಿಸಿದ್ದರು.
ಮೆಡಿಕಲ್ ಕಾಲೇಜು ಹೋರಾಟ 76 ನೇ ದಿನಕ್ಕೆ


