ಸಪ್ತಸಾಗರ ವಾರ್ತೆ,ವಿಜಯಪುರ, ಏ. 1: ನಗರದ ಪ್ರತಿಷ್ಠಿತ ಬಿ.ಎಲ್.ಡಿ.ಇ ಡೀಮ್ಡ್ ವಿಶ್ವವಿದ್ಯಾಲಯ ಶ್ರೀ ಬಿ. ಎಂ. ಪಾಟೀಲ ಮೆಡಿಕಲ್ ಕಾಲೇಜು, ಆಸ್ಪತ್ರೆ ಮತ್ತು ಸಂಶೋಧನ ಕೇಂದ್ರದಲ್ಲಿ ಕಿವಿ, ಮೂಗು, ಗಂಟಲು ವಿಭಾಗದಿಂದ ಅಲರ್ಜಿ ಕ್ಷೇತ್ರದ ಹೊಸ ಒಳನೋಟಗಳು ಕುರಿತು ನಿರಂತರ ವೈದ್ಯಕೀಯ ಶಿಕ್ಷಣ(CME) ಮತ್ತು ಕಾರ್ಯಾಗಾರ ಏಪ್ರಿಲ್ 4 ರಂದು ಶನಿವಾರ ನಡೆಯಲಿದೆ.
ಬಿ.ಎಲ್.ಡಿ.ಇ ಆಸ್ಪತ್ರೆಯ ಟ್ರಾಮಾ ಸೆಂಟರ್‌ನ 2ನೇ ಮಹಡಿಯ ಮಿನಿ ಆಡಿಟೋರಿಯಂನಲ್ಲಿ ಈ ಕಾರ್ಯಕ್ರಮ ಆಯೋಜಿಸಲಾಗಿದೆ.
ಈ ಕಾರ್ಯಕ್ರಮದಲ್ಲಿ ಬೆಂಗಳೂರಿನ ಖ್ಯಾತ ಅಲರ್ಜಿ ತಜ್ಞೆ ಡಾ. ಗಾಯತ್ರಿ ಪಂಡಿತ, ಡಾ. ಶೃತಿ ಮಂಜುನಾಥ ಮತ್ತು ಹುಬ್ಬಳ್ಳಿ ಚಿಕ್ಕಮಕ್ಕಳ ತಜ್ಞ ಡಾ. ಬಾಹುಬಲಿ ಇಂಗಳೆ ಅವರು ಅಲರ್ಜಿ ಮತ್ತು ಇಮ್ಯುನಾಲಜಿ ಕ್ಷೇತ್ರದಲ್ಲಿನ ವಿನೂತನ ವಿಚಾರಗಳನ್ನು ಹಂಚಿಕೊಳ್ಳಲಿದ್ದಾರೆ.
ಅಲ್ಲದೇ, ಬಿ. ಎಲ್. ಡಿ. ಇ ಪಲ್ಮನಾಲಜಿಸ್ಟ್ ವಿಭಾಗದ ಡಾ. ಕೀರ್ತಿವರ್ಧನ ಕುಲಕರ್ಣಿ ಅವರು ಅಸ್ಥಮಾ ಕುರಿತು ಉಪನ್ಯಾಸ ನೀಡಲಿದ್ದಾರೆ.
ಅಲರ್ಜಿ ಸಂಬಂಧಿತ ರೋಗಗಳ ಪತ್ತೆಹಚ್ಚುವಿಕೆ ಮತ್ತು ಚಿಕಿತ್ಸೆ ಕುರಿತ ಮಾಹಿತಿ ಸ್ನಾತಕೋತ್ತರ ವಿದ್ಯಾರ್ಥಿಗಳಿಗೆ, ವೈದ್ಯರು ಹಾಗೂ ಆರೋಗ್ಯ ಕ್ಷೇತ್ರದ ವೃತ್ತಿಪರರಿಗೆ ಮಕ್ಕಳ ತಜ್ಷರು, ಕಿವಿ ಮೂಗು ಗಂಟಲು ತಜ್ಞರು, ಚರ್ಮರೋಗ ಹಾಗೂ ಸಾಮಾನ್ಯ ವೈದ್ಯರಿಗೆ ಈ ಕಾರ್ಯಾಗಾರ ಉಪಯುಕ್ತವಾಗಲಿದೆ.
ಈ ಕಾರ್ಯಗಾರದಲ್ಲಿ ಭಾಗವಹಿಸುವ ವೈದ್ಯರಗಳಿಗೆ ಸ್ವತಃ ಅಲರ್ಜಿಯ ಚರ್ಮ ಪರೀಕ್ಷೆ (SKIN PRICK TEST) ಮಾಡಲು ಕಾರ್ಯಗಾರ ಇದ್ದು, ಈ ಕಾರ್ಯಾಗಾರದಿಂದ ವೈದ್ಯರು ರೋಗಿಗಳಿಗೆ ಅಲರ್ಜಿಯ ಚರ್ಮ ಪರೀಕ್ಷೆ (SKIN PRICK TEST) ಮಾಡಲು ಆತ್ಮವಿಶ್ವಾಸ ಹೆಚ್ಚುತ್ತದೆ.
ಜಿಲ್ಲೆಯ ಎಲ್ಲ ವೈದ್ಯರು ಈ ಕಾರ್ಯಗಾರದ ಉಪಯೋಗವನ್ನು ತೆಗೆದುಕೊಳ್ಳಬೇಕು ಎಂದು ಇ.ಎನ್.ಟಿ ಪ್ರಾಧ್ಯಾಪಕಿ ಡಾ. ಎಚ್. ಟಿ. ಲತಾದೇವಿ ಮಾಧ್ಯಮ ಪ್ರಕಟಣೆಯಲ್ಲಿ ತಿಳಿಸಿದ್ದಾರೆ.
Editor
Rudrappa B Asangi
Editor
Managing Editor
Chetan Asangi
Managing Editor


