ಸಪ್ತಸಾಗರ ವಾರ್ತೆ, ವಿಜಯಪುರ, ಅ. 12 : ತಮ್ಮ ತವರು ಕ್ಷೇತ್ರ ಬಸವನಬಾಗೇವಾಡಿ ವಿಧಾನಸಭೆ ವ್ಯಾಪ್ತಿಯ ವಿವಿಧ ಫಲಾನುಭವಿಗಳಿಗೆ ವಿವಿಧ ಇಲಾಖೆಗಳ ಯೋಜನೆ ಅಡಿಯಲ್ಲಿ ಜವಳಿ, ಕಬ್ಬು ಅಭಿವೃದ್ಧಿ, ಸಕ್ಕರೆ ಹಾಗೂ ಕೃಷಿ ಮಾರುಕಟ್ಟೆ ಸಚಿವ ಶಿವಾನಂದ ಪಾಟೀಲ ವಾಹನಗಳನ್ನು ವಿತರಿಸಿದರು.
ನಗರದಲ್ಲಿರುವ ಗೃಹ ಕಛೇರಿಯಲ್ಲಿ ಭಾನುವಾರ ಮೀನುಗಾರಿಕೆ ಇಲಾಖೆಯಿಂದ ನಿಡಗುಂದಿ ತಾಲೂಕಿನ ಅರಳದಿನ್ನಿ ಗ್ರಾಮದ ಮಹಾಂತೇಶ ವಿಠ್ಠಲ ಧನವೆ ಇವರಿಗೆ ಮಾರುಕಟ್ಟೆಗೆ ಮೀನು ಸಾಗಾಟಕ್ಕೆ ಸಚಿವರಾದ ಶಿವಾನಂದ ಪಾಟೀಲ ವಾಹನ ವಿತರಿಸಿದರು.
2025-26 ನೇ ಸಾಲಿನಲ್ಲಿ ಮೀನು ಮಾರುಕಟ್ಟೆ ನಿರ್ಮಾಣ ಮತ್ತು ಮೀನು ಮಾರಾಟ ಸಹಾಯ ಧನದ ಜಿಲ್ಲೆಗೆ ಪಂಚಾಯತ್ ಯೋಜನೆ ಅಡಿಯಲ್ಲಿ ಮೀನು ಸಾಗಾಟಕ್ಕೆ ವಾಹನ ವಿತರಿಸಲಾಯಿತು.
ಇದೇ ಸಂದರ್ಭದಲ್ಲಿ ದೇವರಾಜ ಅರಸು ಅಭಿವೃದ್ಧಿ ನಿಗಮದಿಂದ ರೋಣಿಹಾಳ ಗ್ರಾಮದ ಮಲ್ಲಪ್ಪ ಹಂಡಿ ಇವರಿಗೆ ಸಚಿವ ಶಿವಾನಂದ ಪಾಟೀಲ ಕಾರು ವಿತರಿಸಿದರು.
2023-24 ನೇ ಸಾಲಿನ ಸ್ವಾವಲಂಬಿ ಸಾರಥಿ ಯೋಜನೆ ಅಡಿಯಲ್ಲಿ ಫಲಾನುಭವಿಗೆ ಸರ್ಕಾರದ ಯೋಜನೆಯ ವಾಹನ ಸೌಲಭ್ಯ ವಿತರಿಸಿದರು.
ಈ ಸಂದರ್ಭದಲ್ಲಿ ಮೀನುಗಾರಿಕೆ ಇಲಾಖೆಯ ಮುದ್ದೇಬಿಹಾಳ ಸಹಾಯಕ ನಿರ್ದೇಶಕ ಶರಣಗೌಡ ಬಿರಾದಾರ ಉಪಸ್ಥಿತರಿದ್ದರು.
ಫಲಾನುಭವಿಗಳಿಗೆ ವಾಹನ ವಿತರಿಸಿದ ಸಚಿವ ಶಿವಾನಂದ ಪಾಟೀಲ


